Wednesday, 11th December 2024

3000 ಭಾರತೀಯ ವೃತ್ತಿಪರರಿಗೆ ಬ್ರಿಟನ್ ವೀಸಾ

ಬಾಲಿ: ಪ್ರಧಾನಿ ನರೇಂದ್ರ ಮೋದಿಯವರು ಇಂಡೋನೇಷಿಯಾದ ಬಾಲಿಯಲ್ಲಿ ನಡೆಯುತ್ತಿರುವ ಜಿ20 ನಾಯಕರ ಶೃಂಗಸಭೆ ಯಲ್ಲಿ ಬ್ರಿಟನ್ ಪ್ರಧಾನಿ ರಿಷಿ ಸುನಾಕ್ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ.

ಇದರ ಬೆನ್ನಲ್ಲೇ ಬ್ರಿಟನ್ ಪ್ರಧಾನಿ ಮಹತ್ವದ ತೀರ್ಮಾನ ಒಂದನ್ನು ಕೈಗೊಂಡಿ ದ್ದಾರೆ.

ಪ್ರತಿ ವರ್ಷ 3000 ಭಾರತೀಯ ವೃತ್ತಿಪರರಿಗೆ ಬ್ರಿಟನ್ ನಲ್ಲಿ ಕೆಲಸ ನಿರ್ವಹಿಸ ಲು ಅವಕಾಶ ಮಾಡುವ ಸಲುವಾಗಿ ವೀಸಾ ನೀಡಲು ನಿರ್ಧರಿಸಲಾಗಿದೆ. 18 ರಿಂದ 30 ವರ್ಷದೊಳಗಿನ ಪದವೀಧರರು ಬ್ರಿಟನ್ ನಲ್ಲಿ ಎರಡು ವರ್ಷಗಳ ಕಾಲ ಕೆಲಸ ಮಾಡಬಹುದಾಗಿದೆ.

ಬ್ರಿಟನ್ ಪ್ರಧಾನಿ ಕಾರ್ಯಾಲಯದಿಂದ ಈ ಕುರಿತಂತೆ ಸಾಮಾಜಿಕ ಜಾಲತಾಣ ಟ್ವಿಟ್ಟರ್ ನಲ್ಲಿ ಟ್ವೀಟ್ ಮಾಡಲಾಗಿದೆ.

ಯುಕೆ – ಭಾರತ ಯುವ ವೃತ್ತಿಪರರ ವಿನಿಮಯ ಯೋಜನೆ ಅಡಿ 3000 ವೀಸಾಗಳನ್ನು ಮಂಜೂರು ಮಾಡಲು ತೀರ್ಮಾನಿಸ ಲಾಗಿದೆ ಎಂದು ತಿಳಿಸಲಾಗಿದೆ.