Friday, 1st December 2023

2024ರ ಅಮೆರಿಕ ಅಧ್ಯಕ್ಷ ಚುನಾವಣೆ: ಸಮೀಕ್ಷೆಯಲ್ಲಿ ಟ್ರಂಪ್‌ ಮುನ್ನಡೆ

ವಾಷಿಂಗ್ಟನ್‌: 2024ರ ಅಮೆರಿಕ ಅಧ್ಯಕ್ಷ ಚುನಾವಣೆಯ ಸ್ಪರ್ಧೆಯಲ್ಲಿ ಹಾಲಿ ಅಧ್ಯಕ್ಷ ಜೋ ಬೈಡನ್‌ ಅವರು, ಮಾಜಿ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರಿಗಿಂತ 10 ಅಂಕಗಳಷ್ಟು ಹಿಂದೆ ಇದ್ದಾರೆ ಎಂದು ಎಬಿಸಿ ನ್ಯೂಸ್ ಚಾನಲ್ ನಡೆಸಿದ ಸಮೀಕ್ಷೆ ಹೇಳಿದೆ.

‘ನೇರಾ ನೇರ ಹಣಾಹಣಿಯಲ್ಲಿ ಟ್ರಂ‍ಪ್ ಹಾಗೂ ಬೈಡನ್‌ ಕ್ರಮವಾಗಿ 51-42 ಅಂಕ ಗಳಿಸಿ ದ್ದಾರೆ. ಜತೆಗೆ ಇತರೆ ರಿಪಬ್ಲಿಕನ್‌ ಸ್ಪರ್ಧಿಗಳಿಗಿಂತಲೂ ಟ್ರಂಪ್‌ ಮುನ್ನಡೆ ಕಾಯ್ದುಕೊಂಡಿ ದ್ದಾರೆ.

ರಿಪಬ್ಲಿಕನ್‌ ಪಕ್ಷದಿಂದ ಅಧ್ಯಕ್ಷೀಯ ಚುನಾವಣೆ‌ಗೆ ಸ್ಪರ್ಧಾಕಾಂಕ್ಷಿಗಳಾಗಿರುವ ಭಾರತೀಯ ಮೂಲದ, ದಕ್ಷಿಣ ಕರೊಲಿನಾದ ಮಾಜಿ ಗವರ್ನರ್‌ ನಿಕ್ಕಿ ಹ್ಯಾಲೆ ಹಾಗೂ ಉದ್ಯಮಿ ವಿವೇಕ್‌ ರಾಮಸ್ವಾಮಿ ಈಗ ಮುನ್ನಡೆ ಪಡೆಯುತ್ತಿದ್ದಾರೆ. ಟ್ರಂಪ್ ಅವರು ರಿಪಬ್ಲಿಕನ್‌ ಪಕ್ಷದಿಂದ ಅಧ್ಯಕ್ಷೀಯ ಅಭ್ಯರ್ಥಿಯಾಗುವುದು ಬಹುತೇಕ ಖಚಿತ.

ಬೈಡನ್‌ ಅವರ ಆಡಳಿತದ ಅವಧಿಯಲ್ಲಿ ಪರಿಸ್ಥಿತಿ ತುಂಬಾ ಬಿಗಡಾಯಿಸಿದೆ ಎಂದು ಸಮೀಕ್ಷೆಯಲ್ಲಿ ಭಾಗವಹಿಸಿದ ಹೆಚ್ಚಿನ ಸಂಖ್ಯೆಯ ಜನರು ಹೇಳಿದ್ದಾರೆ. ಅಲ್ಲದೆ ಬೈಡನ್‌ ಅವರಿಗೆ ವಯಸ್ಸಾಗಿದೆ ಎಂದು ಸಮೀಕ್ಷೆಯಲ್ಲಿ ಭಾಗಿಯಾದ ಮುಕ್ಕಾಲು ಭಾಗ ಜನ ಅಭಿಪ್ರಾಯಪಟ್ಟಿದ್ದಾರೆ.

Leave a Reply

Your email address will not be published. Required fields are marked *

error: Content is protected !!