ವಾಷಿಂಗ್ಟನ್: ಅಮೆರಿಕದ ಇಂಡಿಯಾನಾ ರಾಜ್ಯದ ಫಿಟ್‌ನೆಸ್ ಸೆಂಟರ್‌ನಲ್ಲಿ ಚೂರಿ ಇರಿತಕ್ಕೊಳಗಾದ ಭಾರತೀಯ ವಿದ್ಯಾರ್ಥಿ ವರುಣ್ ರಾಜ್ ಪುಚಾ ಅವರು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.
ವಾಲ್ಪಾರೈಸೊ ವಿಶ್ವವಿದ್ಯಾಲಯದ ಕಂಪ್ಯೂಟರ್ ಸೈನ್ಸ್ ವಿದ್ಯಾರ್ಥಿ ವರುಣ್, ಅ.29 ರಂದು ಸಾರ್ವಜನಿಕ ಜಿಮ್‌ನಲ್ಲಿ ದುಷ್ಕರ್ಮಿ ಜೋರ್ಡಾನ್ ಆಂಡ್ರೇಡ್ (24) ಎಂಬಾತ ಚಾಕುವಿನಿಂದ ತಲೆಗೆ ಇರಿದಿದ್ದನು.
“ವರುಣ್ ರಾಜ್ ಪುಚ್ಚಾ ಅವರ ಅಗಲಿಕೆಯನ್ನು ನಾವು ಭಾರವಾದ ಹೃದಯದಿಂದ ಹಂಚಿಕೊಳ್ಳುತ್ತೇವೆ. ನಮ್ಮ ಕ್ಯಾಂಪಸ್ ಸಮುದಾಯವು ತನ್ನದೇ ಆದ ಒಂದು ಶಕ್ತಿಯನ್ನು ಕಳೆದುಕೊಂಡಿದೆ ಮತ್ತು ಈ ವಿನಾಶಕಾರಿ ನಷ್ಟವನ್ನು ನಾವು ದುಃಖಿಸುತ್ತಿರುವಾಗ ವರುಣ್ ಅವರ ಕುಟುಂಬ ಮತ್ತು ಸ್ನೇಹಿತ ರಿಗೆ ನಮ್ಮ ಆಲೋಚನೆಗಳು ಮತ್ತು ಪ್ರಾರ್ಥನೆಗಳು ಇವೆ” ಎಂದು ಚಿಕಾಗೋ ಬಳಿಯ ವಾಲ್‌ಪಾರೈಸೊದಲ್ಲಿರುವ ಖಾಸಗಿ ವಿಶ್ವವಿದ್ಯಾಲಯವಾದ ವಲ್ಪರೈಸೊ ವಿಶ್ವವಿದ್ಯಾಲಯ ಹೇಳಿಕೆಯಲ್ಲಿ ತಿಳಿಸಿದೆ.
ನ.16 ರಂದು ಕ್ಯಾಂಪಸ್‌ನಲ್ಲಿ ವರುಣನ ಸ್ಮರಣೆ ಮತ್ತು ಸ್ಮಾರಕ ಸೇವೆಯನ್ನು ಯೋಜಿಸಲಾಗಿದೆ. ವರುಣ್ ಕಂಪ್ಯೂಟರ್ ಸೈನ್ಸ್‌ನಲ್ಲಿ ಎಂಎಸ್ ಓದುತ್ತಿದ್ದರು ಮತ್ತು ಆಗಸ್ಟ್ 2022 ರಲ್ಲಿ ಯುಎಸ್‌ಗೆ ತೆರಳಿದ್ದರು.