ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ವೈಟ್‌ ಹೌಸ್ ಬಳಿ ಭೀಕರ ಗುಂಡಿನ ದಾಳಿ: ಜೀವ ಉಳಿಸಿಕೊಳ್ಳಲು ದಿಕ್ಕಾಪಾಲಾಗಿ ಓಡಿದ ಪತ್ರಕರ್ತರು

ಅಮೆರಿಕದ ಶ್ವೇತಭವನ ಸಂಕೀರ್ಣದ ಬಳಿ ಗುಂಡಿನ ದಾಳಿ ನಡೆದಿದೆ. ಗುಂಡಿನ ದಾಳಿ ನಡೆದಾಗ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಶ್ವೇತಭವನದಲ್ಲೇ ಇದ್ದರು ಎನ್ನಲಾಗಿದೆ. ​ 17ನೇ ಬೀದಿ ಮತ್ತು ಪೆನ್ಸಿಲ್ವೇನಿಯಾ ಅವೆನ್ಯೂ ವಾಯುವ್ಯದ ಮೂಲೆಯಲ್ಲಿ ಗುಂಡಿನ ದಾಳಿ ನಡೆದಿದೆ.

ಸಂಗ್ರಹ ಚಿತ್ರ

ವಾಷಿಂಗ್ಟನ್‌: ಅಮೆರಿಕದ ಶ್ವೇತಭವನ ಸಂಕೀರ್ಣದ ಬಳಿ ಗುಂಡಿನ ದಾಳಿ ನಡೆದಿದೆ. ಗುಂಡಿನ ದಾಳಿ ನಡೆದಾಗ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಶ್ವೇತಭವನದಲ್ಲೇ ಇದ್ದರು ಎನ್ನಲಾಗಿದೆ. ​ 17ನೇ ಬೀದಿ ಮತ್ತು ಪೆನ್ಸಿಲ್ವೇನಿಯಾ ಅವೆನ್ಯೂ ವಾಯುವ್ಯದ ಮೂಲೆಯಲ್ಲಿ ಗುಂಡಿನ ದಾಳಿ ನಡೆದಿದೆ ಎಂದು ಸೇವಾ (Viral Video) ಅಧಿಕಾರಿಗಳು ದೃಢಪಡಿಸಿದ್ದಾರೆ. ಸೀಕ್ರೆಟ್ ಸರ್ವಿಸ್ ಏಜೆಂಟರು ತಕ್ಷಣ ಇಡೀ ಪ್ರದೇಶವನ್ನು ಲಾಕ್‌ಡೌನ್‌ ಮಾಡಿದ್ದಾರೆ.

X ನಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾದ ವೀಡಿಯೊವೊಂದರಲ್ಲಿ, ದೂರದರ್ಶನ ವರದಿಗಾರನೊಬ್ಬ ಡೊನಾಲ್ಡ್ ಟ್ರಂಪ್ ಮತ್ತು ರಿಪಬ್ಲಿಕನ್ ಬೆಂಬಲದ ಬಗ್ಗೆ ತನ್ನ ಲೈವ್ ವರದಿಯನ್ನು ನೀಡುತ್ತಿರುವಾಗ ಗುಂಡಿನ ದಾಳಿ ನಡೆದ ದೃಶ್ಯಗಳು ಆನ್‌ಲೈನ್‌ನಲ್ಲಿ ವೈರಲ್‌ ಆಗಿದೆ. ಮತ್ತೊಂದು ವೈರಲ್ ಕ್ಲಿಪ್‌ನಲ್ಲಿ ಎಬಿಸಿ ನ್ಯೂಸ್ ವರದಿಗಾರ್ತಿ ಸೆಲಿನಾ ವಾಂಗ್ ಮತ್ತು ಇತರ ವರದಿಗಾರರು ಶ್ವೇತಭವನದ ಮೈದಾನದ ಬಳಿ 15 ರಿಂದ 30 ಕ್ಷಿಪ್ರ ಗುಂಡು ಹಾರಾಟಗಳನ್ನು ಕೇಳಿದ ನಂತರ ಸುರಕ್ಷತೆಗಾಗಿ ಓಡುತ್ತಿರುವುದು ಕಂಡು ಬಂದಿದೆ. ವೈರಲ್ ಆದ ಮೂರನೇ ವೀಡಿಯೊದಲ್ಲಿ ವರದಿಗಾರನೊಬ್ಬ ಹಠಾತ್ ಗುಂಡಿನ ದಾಳಿಗೆ ಪ್ರತಿಕ್ರಿಯಿಸುತ್ತಾ "ಅದು ಏನು?" ಎಂದು ಪದೇ ಪದೇ ಕೇಳುತ್ತಿರುವುದನ್ನು ಕಾಣಬಹುದು.

ವಿಡಿಯೋ



ಸಂಜೆ ಸುಮಾರು 6 ಗಂಟೆಯ ನಂತರ ವ್ಯಕ್ತಿಯೋರ್ವ ಭದ್ರತಾ ತಪಾಸಣಾ ಕೇಂದ್ರದತ್ತ ಬಂದು ತನ್ನ ಬ್ಯಾಗಿನಿಂದ ಗನ್ ತೆಗೆದು ಕರ್ತವ್ಯದಲ್ಲಿದ್ದ ಅಧಿಕಾರಿಗಳ ಮೇಲೆ ಗುಂಡಿನ ದಾಳಿ ಆರಂಭಿಸಿದ್ದ ಎನ್ನಲಾಗಿದೆ.ದಾಳಿಯ ವೇಳೆ ಅದಕ್ಕೆ ಪ್ರತಿಯಾಗಿ ಅಧಿಕಾರಿಗಳು ಗುಂಡು ಹಾರಿಸಿದ್ದು, ಶಂಕಿತನಿಗೆ ಗುಂಡು ತಗುಲಿತ್ತು. ಬಳಿಕ ಆತನನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾನೆ ಎಂದು ಸೀಕ್ರೆಟ್ ಸರ್ವಿಸ್ ತಿಳಿಸಿದೆ.

ʼʼ2-3 ದಿನ ಅಥವಾ ಮುಂದಿನ ವಾರʼʼ: ಇರಾನ್‌ ವಿರುದ್ಧದ ದಾಳಿಗೆ ಮುಹೂರ್ತ ಫಿಕ್ಸ್‌ ಮಾಡಿದ್ರಾ ಡೊನಾಲ್ಡ್‌ ಟ್ರಂಪ್‌?

ಘಟನೆಯಲ್ಲಿ ಓರ್ವ ಪಾದಚಾರಿಗೂ ಗಾಯಗಳಾಗಿವೆ. ಆದರೆ ಆ ವ್ಯಕ್ತಿಗೆ ಶಂಕಿತನ ಗುಂಡಿನಿಂದ ಗಾಯವಾಗಿದೆಯೋ ಅಥವಾ ಅಧಿಕಾರಿಗಳ ಪ್ರತಿದಾಳಿಯ ವೇಳೆ ಗಾಯವಾಗಿದೆಯೋ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಸೀಕ್ರೆಟ್ ಸರ್ವಿಸ್ ಅಧಿಕಾರಿಗಳಲ್ಲಿ ಯಾರಿಗೂ ಗಾಯಗಳಾಗಿಲ್ಲ. ಘಟನೆ ನಡೆಯುವ ವೇಳೆ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವೈಟ್ ಹೌಸ್ ಒಳಗೇ ಇದ್ದರು. ಆದರೆ ಅವರಿಗೆ ಯಾವುದೇ ಅಪಾಯವಾಗಿಲ್ಲ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

Vishakha Bhat Heggar

View all posts by this author