Thursday, 12th December 2024

Viral News: ಇದೆಂಥಾ ವಿಚಿತ್ರ ಮದ್ವೆ; ವಧು-ವರರು, ಅತಿಥಿಗಳ ಮೈ ಮೇಲೆ ಒಂದಿಂಚು ಬಟ್ಟೆಯೂ ಇಲ್ಲ- ಇದು ನಗ್ನ ಸಾಮೂಹಿಕ ವಿವಾಹವಂತೆ!

Viral News

ಜಮೈಕಾ: ಮದುವೆಯೆನ್ನುವುದು ಒಂದು ದೊಡ್ಡ ಸಂಭ್ರಮ. ಇನ್ನೇನು ಮದುವೆಗೆ ಕೆಲವೇ ತಿಂಗಳುಗಳಿವೆ ಎನ್ನುವಾಗ ಬಟ್ಟೆಯ ಶಾಪಿಂಗ್‌ ಎಲ್ಲಿ ಮಾಡುವುದು? ಇವಾಗ ಯಾವ ಸೀರೆ ಟ್ರೆಂಡ್‌ನಲ್ಲಿದೆ ಎಂಬಿತ್ಯಾದಿ ವಿಷಯಗಳ ಚರ್ಚೆಯಾಗುತ್ತಿರುತ್ತದೆ. ಆದರೆ ಜಮೈಕಾದ ರೆಸಾರ್ಟ್‍ನಲ್ಲಿ ನಡೆದ ಈ ಮದುವೆ ಕಾರ್ಯಕ್ರಮದಲ್ಲಿ ವಧು-ವರರು ಉಡುಪುಗಳನ್ನು ಧರಿಸಿರಲಿಲ್ಲವಂತೆ! ಇನ್ನು ಈ ಮದುವೆ ಕಾರ್ಯಕ್ರಮಕ್ಕೆ ಬಂದ ಅತಿಥಿಗಳು ಕೂಡ ಬಟ್ಟೆಯ ಹಂಗಿಲ್ಲದೇ ಖುಷಿಯಾಗಿ ಸಂಭ್ರಮಿಸಿದ್ದರಂತೆ. ಈ ಸುದ್ದಿ ಸೋಶಿಯಲ್‌ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್‌(Viral News) ಆಗಿತ್ತು.

ಈ ಮದುವೆಯಲ್ಲಿ ಅತ್ಯಂತ ಆಸಕ್ತಿದಾಯಕ ವಿಚಾರವೇನೆಂದರೆ  ಇದು ಕೇವಲ ಒಂದು ಜೋಡಿಯ ಮದುವೆಯಾಗಿರಲಿಲ್ಲ, ಬದಲಿಗೆ 29 ಜೋಡಿಗಳ ಮದುವೆಯಾಗಿತ್ತು. ಮತ್ತು ಎಲ್ಲಾ ಜೋಡಿಗಳು ಕೂಡ ಯಾವುದೇ ಬಟ್ಟೆ ಧರಿಸದೆ ನಗ್ನರಾಗಿ ಮದುವೆಯ ಆಚರಣೆಗಳಲ್ಲಿ ಪಾಲ್ಗೊಂಡಿದ್ದಾರಂತೆ. ಇನ್ನು ಈ ಮದುವೆ ನಡೆದಿದ್ದು 2003ರ ಪ್ರೇಮಿಗಳ ದಿನದಂದು.

Viral News

ಜಮೈಕಾದ ಸೇಂಟ್ ಆನ್‍ನ ರನ್‍ವೇ ಬೇಯಲ್ಲಿರುವ ಹೆಡೋನಿಸಂ 3 ರೆಸಾರ್ಟ್‍ನಲ್ಲಿ ಈ ಮದುವೆ ನಡೆದಿತ್ತು. ಆ ಸಮಯದಲ್ಲಿ, ಈ ಮದುವೆಯು ಮಾಧ್ಯಮಗಳಲ್ಲಿ ಸಾಕಷ್ಟು ಸದ್ದು ಮಾಡಿತ್ತು. ಹೋಟೆಲ್‍ನ ಕಡಲತೀರದ ಹುಲ್ಲುಹಾಸಿನಲ್ಲಿ ಆಯೋಜಿಸಲಾದ ಒಂದು ಗಂಟೆಗಳ ಕಾಲ ನಡೆದ ಸಮಾರಂಭದಲ್ಲಿ, ಎಲ್ಲಾ ಜೋಡಿಗಳು ನಗ್ನರಾಗಿದ್ದರಂತೆ. 29 ದಂಪತಿಗಳಲ್ಲಿ ರಷ್ಯನ್, ಕ್ರೋ ಬುಡಕಟ್ಟಿನ ಸದಸ್ಯರು, ಸ್ಥಳೀಯ ಅಮೆರಿಕನ್ ಮತ್ತು ಕೆನಡಾದ ಪ್ರಜೆಗಳು ಇದ್ದರಂತೆ.

ವರದಿಗಳ ಪ್ರಕಾರ, ವಿವಿಧ ದೇಶಗಳು ಮತ್ತು ವಿವಿಧ ವೃತ್ತಿಗಳಿಂದ ಬಂದ ದಂಪತಿಗಳ ಮದುವೆ ಇದಾಗಿತ್ತು. ಫ್ಲೋರಿಡಾದ ಯುನಿವರ್ಸಲ್ ಲೈಫ್ ಚರ್ಚ್‍ನ ರೆವರೆಂಡ್ ಫ್ರಾಂಕ್ ಸೆರ್ವಾಸಿಯೊ ಸಾಮೂಹಿಕ ವಿವಾಹ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರಂತೆ. ಈ ರೆಸಾರ್ಟ್ ಈ ಹಿಂದೆ ಕೂಡ ಇದೇ ರೀತಿಯ ವಿವಾಹಗಳನ್ನು ಆಯೋಜಿಸಿ ಪ್ರಸಿದ್ಧಿಯಾಗಿತ್ತು ಎನ್ನಲಾಗಿದೆ.

ಇದನ್ನೂ ಓದಿ:ಟ್ರಾಫಿಕ್ ಕ್ಯಾಮೆರಾ ಮುಂದೆ ಸಖತ್ತಾಗಿ ಪೋಸ್ ನೀಡಿದ ‘ಆಂಗ್ರಿ’ ಮೈನಾ; ವಿಡಿಯೊ ವೈರಲ್

ಆದರೆ, 2003 ರಲ್ಲಿ ನಡೆದ ಈ ನಗ್ನ ವಿವಾಹವು ಬಹಳ ವಿಶೇಷವಾಗಿತ್ತು. ರೆವರೆಂಡ್ ಫ್ರಾಂಕ್ ಸೆರ್ವಾಸಿಯೊ ಕಳೆದ ಮೂರು ವರ್ಷಗಳಿಂದ ರೆಸಾರ್ಟ್‍ನಲ್ಲಿ ಇಂತಹ ಅನೇಕ ವಿವಾಹ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಆದರೆ 2003ರ ಈ ವಿವಾಹವು ದಾಖಲೆ ಮುರಿಯಿತು. ಹಿಂದಿನ ಎರಡು ವರ್ಷಗಳಲ್ಲಿ, ಪ್ರತಿ ವರ್ಷ ಸುಮಾರು ಒಂದು ಡಜನ್ ದಂಪತಿಗಳು ರೆಸಾರ್ಟ್‍ನಲ್ಲಿ ಮದುವೆಯಾಗುತ್ತಿದ್ದರು. ಈ ಬಾರಿ ಇನ್ನೂ ಹೆಚ್ಚಿನ ದಂಪತಿಗಳು ಮದುವೆಯಾಗಿದ್ದಾರೆ.