ಜೆರುಸೆಲಂ : ಅಕ್ಟೋಬರ್ 7, 2023 ರಂದು ಹಮಾಸ್ ಇಸ್ರೇಲ್ನ (Hamas-Israel) ಮೇಲೆ ನಡೆಸಿದ್ದ ದಾಳಿಯಲ್ಲಿ ಹಮಾಸ್ ಒತ್ತೆಯಾಳಾಗಿ (Hamas captivity) 54 ದಿನಗಳ ಕಾಲ ಸೆರೆಯಲ್ಲಿದ್ದ ಇಸ್ರೇಲ್ನ ಯುವತಿಯೊಬ್ಬಳು ತನ್ನ ಬಾಲ್ಯದ ಗೆಳೆಯನ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾಳೆ. ಆಕೆಯನ್ನು ಮಿಯಾ ಸ್ಕೆಮ್ (Mia Schem) ಎಂದು ಗುರುತಿಸಲಾಗಿದ್ದು,ಆಕೆ ತನ್ನ ನಿಶ್ಚಿತಾರ್ಥದ ಸುದ್ದಿಯನ್ನು ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾಳೆ (Viral News).
ಮಿಯಾ ಸ್ಕೆಮ್, ನವೆಂಬರ್ 28 ರಂದು 24 ವರ್ಷದ ಯಿನಾನ್ ಹಸನ್ ಜೊತೆ ತಾನು ಮದುವೆಯಾಗುತ್ತೇನೆ ಎಂದು ಘೋಷಿಸಿದ್ದಾಳೆ. ಕಳೆದ ಅಕ್ಟೋಬರ್ನಲ್ಲಿ ಇಸ್ರೇಲ್ ಮೇಲೆ ಹಮಾಸ್ ದಾಳಿ ನಡೆಸಿ ಹಲವರನ್ನು ಒತ್ತೆಯಾಳಾಗಿರಿಸಿಕೊಂಡಿತ್ತು. ನಂತರ ಹಲವಾರು ಸುತ್ತಿನ ಮಾತುಕತೆಯ ಬಳಿಕ ನವೆಂಬರ್ ಕೊನೆಯಲ್ಲಿ ಕೆಲವರನ್ನು ಬಿಡುಗಡೆ ಮಾಡಲಾಗಿತ್ತು. ಅದರಲ್ಲಿ ಮಿಯಾ ಸ್ಕೆಮ್ ಕೂಡ ಸೇರಿದ್ದಳು. ಇದೀಗ ಆಕೆ ತನ್ನ ಬಾಲ್ಯದ ಗೆಳೆಯ ಯಿನಾನ್ ಹಸನ್ ಜೊತೆ ಮದುವೆಯಾಗಲು ಸಜ್ಜಾಗಿದ್ದಾಳೆ. ನಿಶ್ಚಿತಾರ್ಥದ ಉಂಗುರ ಹಾಗೂ ತನ್ನ ಗೆಳೆಯನ ಜೊತೆ ಇರುವ ಫೋಟೋವನ್ನು ಹಂಚಿಕೊಂಡಿದ್ದಾಳೆ.
ಆಕೆಯ ಈ ಪೋಸ್ಟ್ ನೋಡಿದ ನೆಟ್ಟಿಗರು ಶುಭ ಹಾರೈಸಿದ್ದಾರೆ. ಇಸ್ರೇಲ್ನ ಕೆಲ ರೆಸ್ಟೋರೆಂಟ್ಗಳು ಬ್ಯಾಚುಲರ್ ಪಾರ್ಟಿ ನೀಡಲು ತಾವು ಆಫರ್ ನೀಡುತ್ತೇವೆ ಎಂದು ತಿಳಿಸಿದ್ದಾರೆ.
ಅಕ್ಟೋಬರ್ 7, 2023 ರಂದು ಇಸ್ರೇಲ್ನ ಟ್ರೈಬ್ ಆಫ್ ನೋವಾ ಸಂಗೀತ ಉತ್ಸವದ ಮೇಲೆ ಹಮಾಸ್ ಬಂಡುಕೋರರು ದಾಳಿ ನಡೆಸಿದ್ದರು. ಘಟನೆಯಲ್ಲಿ ಹಲವರು ಮೃತ ಪಟ್ಟಿದ್ದರೆ, ಇನ್ನೂ ಕೆಲವರನ್ನು ಹಮಾಸ್ ಬಂಡುಕೋರರು ಒತ್ತೆಯಾಳಾಗಿರಿಸಿದ್ದರು. ಅವರಲ್ಲಿ ಮಿಯಾ ಸ್ಕೆಮ್ ಕೂಡ ಸೇರಿದ್ದು, ದಾಳಿಯಲ್ಲಿ ಆಕೆಯ ಕೈಗೆ ಗುಂಡೇಟಿನ ಗಾಯಗಳಾಗಿದ್ದವು. ನಂತರ ಆಕೆ ಬಿಡುಗಡೆಯಾದ ಬಳಿಕ ಅಲ್ಲಿನ ನರಕ ಯಾತನೆ ಬಗ್ಗೆ ಮಾತನಡಿದ್ದಳು. ಅಲ್ಲಿ ತಮ್ಮನ್ನು ಮೃಗಗಳಂತೆ ನೋಡಿಕೊಂಡರು. ತಾನು ಪಂಜರದಲ್ಲಿ ಬಂಧಿಯಾಗಿದ್ದೇನೆ ಎಂದೆನಿಸಿತ್ತು. ನನ್ನ ಕೈ ಗೆ ಗುಂಡು ತಗುಲಿ ಗಾಯವಾಗಿತ್ತು ಆದರೆ ಅಲ್ಲಿ ಯಾವ ಚಿಕಿತ್ಸೆ ನೀಡಲಿಲ್ಲ. ಅವರು ನಮ್ಮನ್ನು ನಿಂದಿಸುತ್ತಿದ್ದರು, ಥಳಿಸುತ್ತಿದ್ದರು ಎಂದು ಹೇಳಿದ್ದಳು.
ಇತ್ತೀಚೆಗೆ ಖಾಸಗಿ ವಾಹಿನಿಯೊಂದರಲ್ಲಿ ನಡೆದ ಸಂದರ್ಶನದಲ್ಲಿ ತಾನು ಒತ್ತಯಾಳುಗಳ ಪರವಾಗಿ ಹೋರಾಡುತ್ತೇನೆ. ಅವರ ಮಾನಸಿಕ ಸ್ಥಿತಿ ಕುಗ್ಗಿರುತ್ತದೆ. ಅಂತವರಿಗಾಗಿ ನಾನು ಕೆಲಸ ಮಾಡುತ್ತಿದ್ದೇನೆ. ನನ್ನ ಕಥೆಯನ್ನು ಜನರೊಂದಿಗೆ ಹಂಚಿಕೊಳ್ಳಲು ಬಯಸುತ್ತೇನೆ ಎಂದು ಹೇಳಿದ್ದಳು.
ಇದನ್ನೂ ಓದಿ : Israel–Hamas war: ಸೈನಿಕರ ಕೊರತೆ ಎದುರಿಸುತ್ತಿರುವ ಇಸ್ರೇಲ್; ಸೈನ್ಯಕ್ಕೆ ಸೇರಲು ಸರ್ಕಾರ ಮನವಿ