Saturday, 23rd November 2024

Viral Video: 1582ರ ಕ್ಯಾಲೆಂಡರ್‌ನ ಅಕ್ಟೋಬರ್‌ ತಿಂಗಳಲ್ಲಿ ಹತ್ತು ದಿನಗಳೇ ಇರಲಿಲ್ಲ!

Viral Video

1582ರ ಗ್ರೆಗೊರಿಯನ್ ಕ್ಯಾಲೆಂಡರ್‌ನ (Gregorian calendar) ಅಕ್ಟೋಬರ್‌ ತಿಂಗಳಲ್ಲಿ (October month) ಹತ್ತು ದಿನಗಳು ಕಡಿಮೆಯಾಗಿತ್ತು. ಇದರ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ (social media) ವೈರಲ್ (Viral Video) ಆಗಿದ್ದು, ಸಾಕಷ್ಟು ಚರ್ಚೆಯನ್ನು ಹುಟ್ಟು ಹಾಕಿದೆ.

ರಿಯಲ್ ಟ್ರೂತ್ ಎಂಬ ಹೆಸರಿನ ಇನ್‌ಸ್ಟಾಗ್ರಾಮ್ ಬಳಕೆದಾರರು ಪೋಸ್ಟ್ ಮಾಡಿರುವ ಈ ವೈರಲ್ ವಿಡಿಯೋದಲ್ಲಿ 1582ರ ಅಕ್ಟೋಬರ್‌ನಲ್ಲಿ ಸಾಮಾನ್ಯಕ್ಕಿಂತ 10 ದಿನ ಕಡಿಮೆ ಇತ್ತು ಎಂದು ಹೇಳಿದೆ. ಇದು ವ್ಯಾಪಕ ಕುತೂಹಲ ಮತ್ತು ಚರ್ಚೆಯನ್ನು ಹುಟ್ಟುಹಾಕಿದೆ. “ಇಂದಿನ ದಿನಾಂಕ ತಪ್ಪಾಗಿದೆ” ಎನ್ನುವ ಶೀರ್ಷಿಕೆಯೊಂದಿಗೆ 1582ರ ಕ್ಯಾಲೆಂಡರ್ ಅನ್ನು ಪೋಸ್ಟ್ ಮಾಡಲಾಗಿದೆ. ಇದು ಕಳೆದುಹೋದ ದಿನಗಳ ಹಿಂದಿನ ಆಳವಾದ ರಹಸ್ಯವನ್ನು ಶೋಧಿಸುವಂತೆ ಮಾಡುತ್ತದೆ.

ಈ ವಿಡಿಯೋದಲ್ಲಿ ಅಕ್ಟೋಬರ್ 1582ರ ಕ್ಯಾಲೆಂಡರ್ ಅನ್ನು ಪ್ರದರ್ಶಿಸಲಾಗಿದೆ. ಇದರಲ್ಲಿ ಅಕ್ಟೋಬರ್ 5 ರಿಂದ ಅಕ್ಟೋಬರ್ 14 ರವರೆಗಿನ ದಿನಾಂಕಗಳು ಸ್ಪಷ್ಟವಾಗಿಲ್ಲ. ಇದರಿಂದ ಗೊಂದಲಕ್ಕೆ ಒಳಗಾಗಿರುವ ಅನೇಕರು ಪ್ರಶ್ನೆಗಳನ್ನು ಕೇಳಿದ್ದಾರೆ.

ಒಬ್ಬರು 1582 ರ ಅಕ್ಟೋಬರ್‌ನ ಎರಡನೇ ವಾರದಲ್ಲಿ ಏನಾಯಿತು ಎಂದು ಪ್ರಶ್ನಿಸಿದ್ದಾರೆ. ಇನ್ನೊಬ್ಬ ಬಳಕೆದಾರರು ಐತಿಹಾಸಿಕ ವಿವರಣೆಯನ್ನು ನೀಡಿ, ಕ್ಯಾಲೆಂಡರ್ ಅನ್ನು ಸೌರ ವರ್ಷದೊಂದಿಗೆ ಹೆಚ್ಚು ನಿಖರವಾಗಿ ಜೋಡಿಸಲು ಅಕ್ಟೋಬರ್ 1582 ರಲ್ಲಿ 10 ದಿನಗಳನ್ನು ತೆಗೆದುಹಾಕಲಾಯಿತು ಎಂದು ತಿಳಿಸಿದ್ದಾರೆ.

ಏನಿದರ ರಹಸ್ಯ?

ಹೆಸರಾಂತ ಅಮೆರಿಕನ್ ಖಗೋಳ ಭೌತಶಾಸ್ತ್ರಜ್ಞ ನೀಲ್ ಡಿಗ್ರಾಸ್ ಟೈಸನ್ ನಾಲ್ಕು ವರ್ಷಗಳ ಹಿಂದೆ ಇದರ ಕುರಿತು ಸಂಪೂರ್ಣ ಮಾಹಿತಿ ನೀಡಿದ್ದರು. 1582ರ ವೇಳೆಗೆ ಜೂಲಿಯನ್ ಕ್ಯಾಲೆಂಡರ್ ಪ್ರತಿ ನಾಲ್ಕು ವರ್ಷಗಳಿಗೊಮ್ಮೆ ಅಧಿಕ ದಿನದೊಂದಿಗೆ ಭೂಮಿಯ ಕಕ್ಷೆಗೆ ಸಂಬಂಧಿಸಿದಂತೆ ಹತ್ತು ಹೆಚ್ಚುವರಿ ದಿನಗಳನ್ನು ಸಂಗ್ರಹಿಸಿತ್ತು. ಆದ್ದರಿಂದ ಪೋಪ್ ಗ್ರೆಗೊರಿ ತಮ್ಮ ಹೊಸ ಮತ್ತು ಅಂದವಾದ ನಿಖರವಾದ ಕ್ಯಾಲೆಂಡರ್ ಅನ್ನು ಆ ವರ್ಷದಲ್ಲಿ 10 ದಿನಗಳನ್ನು ರದ್ದುಗೊಳಿಸಿದರು. ಹೀಗಾಗಿ ಅಕ್ಟೋಬರ್ 4 ರಿಂದ 15ರವರೆಗೆ ದಿನಾಂಕಗಳನ್ನು ಬರೆಯಲಿಲ್ಲ.

ಇದು ಜೂಲಿಯನ್ ಕ್ಯಾಲೆಂಡರ್‌ನ ತಪ್ಪುಗಳನ್ನು ಸರಿಪಡಿಸಲು 8ನೇ ಪೋಪ್ ಗ್ರೆಗೊರಿ ಪ್ರಾರಂಭಿಸಿದ ಗ್ರೆಗೋರಿಯನ್ ಕ್ಯಾಲೆಂಡರ್ ಸುಧಾರಣೆಯ ಭಾಗವಾಗಿತ್ತು ಎಂದು ತಿಳಿಸಿದ್ದಾರೆ. ಅಧಿಕ ವರ್ಷಗಳ ದಿನಗಳನ್ನು ಸರಿದೂಗಿಸಲು 1582ರ ಅಕ್ಟೋಬರ್ ತಿಂಗಳಿನಲ್ಲಿ ಹತ್ತು ದಿನಗಳನ್ನು ಕಡಿಮೆ ಮಾಡಲಾಗಿತ್ತು. 1582ರ ತನಕ ಅಧಿಕ ವರ್ಷ ಲೆಕ್ಕ ಹಾಕದ ಕಾರಣ ಫೆಬ್ರವರಿಯಲ್ಲಿ 29 ದಿನಗಳು ಇರುತ್ತಿರಲಿಲ್ಲ. ಹೀಗಾಗಿ ಕ್ಯಾಲೆಂಡರ್ ಸರಿಪಡಿಸುವ ಸಲುವಾಗಿ 10 ದಿನಗಳನ್ನು ಕಳೆಯಲಾಗಿತ್ತು. ಆದ್ದರಿಂದ ಆ ವರ್ಷದಲ್ಲಿ ಅಕ್ಟೋಬರ್ ತಿಂಗಳಿನಲ್ಲಿ 4ರ ಬಳಿಕ ನೇರವಾಗಿ 15ನೇ ದಿನಾಂಕವನ್ನು ಮುದ್ರಿಸಲಾಗಿತ್ತು.

Viral Video: ಗೂಗಲ್‌ನಿಂದ 65 ಲಕ್ಷ ರೂ. ಸಂಬಳದ ಆಫರ್ ಪಡೆದ ಉದ್ಯೋಗಿ; ಪೋಸ್ಟ್ ವೈರಲ್

ಈ ಬದಲಾವಣೆಯನ್ನು ಆರಂಭದಲ್ಲಿ ಇಟಲಿ, ಸ್ಪೇನ್ ಮತ್ತು ಪೋರ್ಚುಗಲ್‌ನಂತಹ ಕ್ಯಾಥೊಲಿಕ್ ದೇಶಗಳು ಮಾತ್ರ ಅಳವಡಿಸಿಕೊಂಡವು. ಹಲವಾರು ಶತಮಾನಗಳ ಬಳಿಕ ಉಳಿದ ದೇಶಗಳು ಬಳಸಲು ಪ್ರಾರಂಭಿಸಿದವು.