Wednesday, 11th December 2024

ಮಿಲಿಟರಿ ಕಾರ್ಯಾಚರಣೆಗೆ ರಷ್ಯಾದಲ್ಲೇ ವಿರೋಧ: 1,700 ಪ್ರತಿಭಟನಾಕಾರರ ಬಂಧನ

ಮಾಸ್ಕೋ: ಉಕ್ರೇನ್‌ ಮೇಲಿನ ಮಿಲಿಟರಿ ಕಾರ್ಯಾಚರಣೆಗೆ ರಷ್ಯಾದ ಪ್ರಜೆಗಳಿಂದಲೇ ವಿರೋಧ ವ್ಯಕ್ತವಾದ ಬೆನ್ನಲ್ಲೇ  ರಸ್ತೆಗಿಳಿದ ಪ್ರತಿಭಟನಾ ಕಾರರನ್ನು ಬಂಧಿಸಲಾಗಿದೆ.

ಮಾಸ್ಕೋದ ಪುಷ್ಕಿನ್ ಚೌಕದ ಬಳಿ ನೆರೆದಿದ್ದ ಪ್ರತಿಭಟನಾಕಾರರು ‘ಯುದ್ಧ ಬೇಡ’ ಎಂದು ಘೋಷಣೆ ಕೂಗಿದ್ದಾರೆ. ಇದೇ ಪ್ರತಿಭಟನೆಗಳು ರಷ್ಯಾದ ಸೇಂಟ್‌ ಪೀಟರ್ಸ್‌ಬರ್ಗ್‌ನಲ್ಲೂ ಕಂಡುಬಂದಿದೆ. ಈವರೆಗೆ ರಷ್ಯಾದ ಭದ್ರತಾ ಪಡೆಗಳು 1,700 ಕ್ಕೂ ಹೆಚ್ಚು ಯುದ್ಧ ವಿರೋಧಿ ಪ್ರತಿಭಟನಾಕಾರರನ್ನು ಬಂಧಿಸಿವೆ.

ಪಾಶ್ಚಿಮಾತ್ಯ ದೇಶಗಳು ಮತ್ತು ವಿಶ್ವ ಸಮುದಾಯದ ಎಚ್ಚರಿಕೆ ಧಿಕ್ಕರಿಸಿ ಪುಟಿನ್ ಗುರುವಾರ ಉಕ್ರೇನ್‌ ನಲ್ಲಿ ‘ಮಿಲಿಟರಿ ಕಾರ್ಯಾಚರಣೆ’ ಘೋಷಿಸಿ ದ್ದಾರೆ.

ನನ್ನ ಸಂಬಂಧಿಕರು ಮತ್ತು ಪ್ರೀತಿಪಾತ್ರರು ಉಕ್ರೇನ್‌ನಲ್ಲಿ ವಾಸಿಸುತ್ತಿದ್ದಾರೆ’ ಎಂದು ಮಾಸ್ಕೋದ ಯುದ್ಧ ವಿರೋಧಿ ಪ್ರತಿಭಟನಾಕಾರ ತಿಳಿಸಿದ್ದಾರೆ.

‘ಅಧಿಕಾರಿಗಳು ಹುಚ್ಚರಾಗಿದ್ದಾರೆ. ಪ್ರಚಾರದಿಂದ ಜನರು ಮೂರ್ಖರಾಗಿದ್ದಾರೆ ಎಂಬ ಭಾವನೆ ನನ್ನಲ್ಲಿದೆ’ ಎಂದು ಸ್ವೆಟ್ಲಾನಾ ವೋಲ್ಕೊವಾ ತಿಳಿಸಿದ್ದಾರೆ. ಪುಟಿನ್ ಅವರನ್ನು ಬಂಧಿಸುವಂತೆ ಪ್ರತಿಭಟನಾಕಾರರು ಒತ್ತಾಯಿಸಿದ್ದಾರೆ.