Saturday, 14th December 2024

ಸಿಐಎ ನಿರ್ದೇಶಕರಾಗಿ ವಿಲಿಯಂ ಜೆ ಬರ್ನ್ಸ್

ವಾಷಿಂಗ್ಟನ್‌: ಅಮೆರಿಕದ ಅಧ್ಯಕ್ಷ ಹುದ್ದೆಗೆ ಆಯ್ಕೆಯಾಗಿರುವ ಜೋ ಬೈಡನ್, ವಿಲಿಯಂ ಜೆ ಬರ್ನ್ಸ್‌ ಅವರನ್ನು ಸಿಐಎನ ನಿರ್ದೇಶಕರಾಗಿ ನಾಮನಿರ್ದೇಶನ ಮಾಡಿದ್ದಾರೆ.

ಬರ್ನ್ಸ್‌ ಅವರು ಅಮೆರಿಕದ ವಿದೇಶಾಂಗ ಇಲಾಖೆಯ ಸೇವೆಗಳಲ್ಲಿ 33 ವರ್ಷಗಳ ಕಾಲ ಕಾರ್ಯ ನಿರ್ವಹಿಸಿದ್ದಾರೆ. ಅಲ್ಲದೆ ಡೆಮಾ ಕ್ರಟಿಕ್ ಮತ್ತು ರಿಪಬ್ಲಿಕನ್ ಪಕ್ಷದ ಕೆಲ ಅಧ್ಯಕ್ಷರ ಆಡಳಿತಾವಧಿಯಲ್ಲಿ ವಿವಿಧ ರಾಷ್ಟ್ರೀಯ ಭದ್ರತಾ ಸ್ಥಾನಗಳಲ್ಲಿ ಸೇವೆ ಸಲ್ಲಿಸಿ ದ್ದಾರೆ.

ಬರ್ನ್ಸ್ ಅವರು ಒಬ್ಬ ಉತ್ತಮ ರಾಜತಾಂತ್ರಿಕ ಅಧಿಕಾರಿ. ದೇಶ ಮತ್ತು ಜನರನ್ನು ಸುರಕ್ಷಿತವಾಗಿರಿಸುವಲ್ಲಿ ದಶಕಗಳ ಉತ್ತಮ ಅನುಭವವನ್ನು ಹೊಂದಿದ್ದಾರೆ’ ಎಂದು ಜೋ ಬೈಡನ್‌ ಅಭಿಪ್ರಾಯಪಟ್ಟಿದ್ದಾರೆ.