Friday, 13th December 2024

ಆರ್ಥಿಕ ಬಿಕ್ಕಟ್ಟು: ಉದ್ಯೋಗಿಗಳಿಗೆ ಎರಡು ವಾರ ವರ್ಕ್ ಫ್ರಂ ಹೋಮ್‌

ಕೊಲಂಬೊ : ಅತ್ಯಂತ ಭೀಕರ ಆರ್ಥಿಕ ಬಿಕ್ಕಟ್ಟನ್ನು ಎದುರಿಸುತ್ತಿರುವ ದ್ವೀಪ ರಾಷ್ಟ್ರ ಶ್ರೀಲಂಕಾ, ತೀವ್ರ ಇಂಧನ ಕೊರತೆ ಯಿಂದಾಗಿ ಸಾರ್ವಜನಿಕ ವಲಯದ ಉದ್ಯೋಗಿಗಳಿಗೆ ಎರಡು ವಾರ ಮನೆಯಿಂದಲೇ ಕೆಲಸ ಮಾಡುವಂತೆ ಸರ್ಕಾರ ಆದೇಶಿಸಿದೆ ಎನ್ನಲಾಗುತ್ತಿದೆ.

ಶ್ರೀಲಂಕಾ ಅಗತ್ಯವಿರುವ ಇಂಧನ ಆಮದುಗಳನ್ನು ಪಾವತಿಸಲು ವಿದೇಶಿ ವಿನಿಮಯವನ್ನು ಹುಡುಕಲು ಪರದಾಡುತ್ತಿದೆ ಮತ್ತು ಅದರ ಅಸ್ತಿತ್ವದಲ್ಲಿರುವ ಪೆಟ್ರೋಲ್ ಮತ್ತು ಡೀಸೆಲ್ ಸಂಗ್ರಹವು ಕೆಲವೇ ದಿನಗಳಲ್ಲಿ ಖಾಲಿಯಾಗಲಿದೆ ಎಂದು ನಿರೀಕ್ಷಿಸಲಾಗಿದೆ.

ಸಾರ್ವಜನಿಕ ಸಾರಿಗೆ ವ್ಯವಸ್ಥೆ ಮತ್ತು ಖಾಸಗಿ ವಾಹನಗಳನ್ನು ಬಳಸುವಲ್ಲಿನ ತೊಂದರೆಗಳನ್ನು ಪರಿಗಣಿಸಿ ಸೋಮವಾರದಿಂದ ಕೆಲವೇ ಕೆಲವು ಸಿಬ್ಬಂದಿ ಕಚೇರಿಗಳಿಗೆ ಬಂದು ಕೆಲಸ ಮಾಡಬೇಕು. ಉಳಿದವರು ಮನೆಯಿಂದಲೇ ಕೆಲಸ ಮಾಡುವಂತೆ ಸಾರ್ವಜನಿಕ ಆಡಳಿತ ಮತ್ತು ಗೃಹ ವ್ಯವಹಾರಗಳ ಸಚಿವಾ ಲಯ ಸುತ್ತೋಲೆಯಲ್ಲಿ ತಿಳಿಸಿದೆ.

ಒಂದು ಮಿಲಿಯನ್ ಸರ್ಕಾರಿ ನೌಕರರಲ್ಲಿ, ಆರೋಗ್ಯ ಸೇವೆಗಳಂತಹ ಅಗತ್ಯ ಸೇವೆಗಳನ್ನು ಒದಗಿಸುವವರು ತಮ್ಮ ಕಚೇರಿಗಳಲ್ಲಿ ಕರ್ತವ್ಯಕ್ಕೆ ವರದಿ ಮಾಡುವುದನ್ನು ಮುಂದುವರಿಸುತ್ತಾರೆ ಎಂದು ಸುತ್ತೋಲೆ ಹೇಳಿದೆ.

ಅನೇಕ ಗ್ಯಾಸ್ ಸ್ಟೇಷನ್‌ಗಳಲ್ಲಿ ಹಲವು ಕಿಲೋಮೀಟರ್‌ಗಳಷ್ಟು ವ್ಯಾಪಿಸಿರುವ ವಾಹನಗಳ ಸಾಲುಗಳು ರೂಪುಗೊಂಡಿವೆ. ಕೆಲವು ಜನರು ಇಂಧನಕ್ಕಾಗಿ 10 ಗಂಟೆಗಳಿಗೂ ಹೆಚ್ಚು ಕಾಲ ಕಾಯುತ್ತಿದ್ದಾರೆ ಎನ್ನಲಾಗುತ್ತಿದೆ.