Saturday, 14th December 2024

ಆರ್ಥಿಕ ನೆರವು ವಿತರಣಾ ಕಾರ್ಯಕ್ರಮದಲ್ಲಿ ಕಾಲ್ತುಳಿತ: 78 ಜನರ ಸಾವು

ಯೆಮೆನ್(ಸನಾ) : ಯೆಮೆನ್‌ನ ರಾಜಧಾನಿಯಲ್ಲಿ ಬುಧವಾರ ತಡರಾತ್ರಿ ನಡೆದ ಆರ್ಥಿಕ ನೆರವು ವಿತರಿಸುವ ಕಾರ್ಯಕ್ರಮವೊಂದರಲ್ಲಿ ಜನರು ಮುಗಿಬಿದ್ದಿದ್ದು, ಕಾಲ್ತುಳಿತದಿಂದ ಸುಮಾರು 78 ಜನರು ಸಾವನ್ನಪ್ಪಿದ್ದಾರೆ ಮತ್ತು ಹಲವರು ಗಾಯಗೊಂಡಿದ್ದಾರೆ.

ಸನಾ ಮಧ್ಯಭಾಗದಲ್ಲಿರುವ ಓಲ್ಡ್ ಸಿಟಿಯಲ್ಲಿ ನೂರಾರು ಬಡವರು ವ್ಯಾಪಾರಿಗಳು ಆಯೋಜಿಸಿದ್ದ ಕಾರ್ಯಕ್ರಮ ದಲ್ಲಿ ಜಮಾಯಿಸಿದಾಗ ಈ ಘಟನೆ ಸಂಭವಿಸಿದೆ.

ಗಾಯಾಳುಗಳನ್ನು ಹತ್ತಿರದ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ. ಹೌತಿಯ ಅಲ್-ಮಸಿರಾ ಉಪಗ್ರಹ ಟಿವಿ ಚಾನೆಲ್ ಪ್ರಕಾರ, ಸನಾದಲ್ಲಿನ ಹಿರಿಯ ಆರೋಗ್ಯ ಅಧಿಕಾರಿ ಮೊಟಾಹೆರ್ ಅಲ್-ಮರೂನಿ ಅವರು ಸಾವಿನ ಸಂಖ್ಯೆಯನ್ನು ನೀಡಿದರು ಮತ್ತು 13 ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಹೇಳಿದರು.

ಬಂಡುಕೋರರು ತ್ವರಿತವಾಗಿ ಕಾರ್ಯಕ್ರಮವನ್ನು ಆಯೋಜಿಸಿದ್ದ ಶಾಲೆಗೆ ಸೀಲ್ ಮಾಡಿದರು ಮತ್ತು ಪತ್ರಕರ್ತರು ಸೇರಿದಂತೆ ಜನರನ್ನು ಸಮೀಪಿಸ ದಂತೆ ನಿರ್ಬಂಧಿಸಿದರು.