ಇಸ್ಲಾಮಾಬಾದ್: ಇಸ್ಲಾಮಾಬಾದ್ ಮಹಾನಗರ ಪಾಲಿಕೆಯಿಂದ ದೈಹಿಕ, ಮಾನಸಿಕ ಮತ್ತು ಆಧ್ಯಾತ್ಮಿಕ ಅಭ್ಯಾಸ ‘ಯೋಗ’ ತರಗತಿ ಆರಂಭವಾಗಿದೆ.
ಪಾಕಿಸ್ತಾನ ರಾಜಧಾನಿ ಇಸ್ಲಾಮಾಬಾದ್ ಉಸ್ತುವಾರಿ ಹೊಣೆ ಹೊತ್ತಿರುವ ರಾಜಧಾನಿ ಅಭಿವೃದ್ಧಿ ಮಂಡಳಿಯು (ಸಿಡಿಎ) ತನ್ನ ಅಧಿಕೃತ ಫೇಸ್ಬುಕ್ ಪೇಜ್ನಲ್ಲಿ, ‘ಇಸ್ಲಾಮಾಬಾದ್ ಮಹಾನಗರ ಪಾಲಿಕೆಯು ಎಫ್-9 ಪಾರ್ಕ್ನಲ್ಲಿ ಉಚಿತ ಯೋಗ ತರಗತಿ ಆರಂಭಿಸಿದ್ದು, ಹಲವರು ಈಗಾಗಲೇ ತರಗತಿಗೆ ಸೇರ್ಪಡೆಯಾಗಿದ್ದಾರೆ ಎಂದು ಸಿಡಿಎ ತಿಳಿಸಿದೆ.
ವಿಶ್ವಸಂಸ್ಥೆಯು 2014 ಡಿಸೆಂಬರ್ 11ರಂದು ಭಾರತ ಮೂಲದ ಯೋಗಕ್ಕೆ ಜಾಗತಿಕ ಮನ್ನಣೆ ನೀಡಿ ಜೂನ್ 21 ಅನ್ನು ‘ಅಂತಾರಾಷ್ಟ್ರೀಯ ಯೋಗ ದಿನ’ವೆಂದು ಘೋಷಿಸಿತ್ತು. ಈ ಕುರಿತ ಮಹತ್ವದ ಪ್ರಸ್ತಾವಕ್ಕೆ 175 ರಾಷ್ಟ್ರಗಳು ಅಂದು ಸಹಿ ಹಾಕಿದ್ದವು.
ಪಾಕಿಸ್ತಾನದಲ್ಲಿ ಯೋಗವು ಔಪಚಾರಿಕವಾಗಿ ಮಾತ್ರ ಬಳಕೆಯಲ್ಲಿತ್ತು. ಸದ್ಯ ಯೋಗಾಭ್ಯಾಸಕ್ಕೆ ಅಧಿಕೃತ ಮಾನ್ಯತೆ ಸಿಕ್ಕಂತಾಗಿದೆ.