Thursday, 3rd December 2020

ಅರಣ್ಯ ಇಲಾಖೆ ಕಾರ್ಯಕ್ರಮಗಳು ಜನಸ್ನೇಹಿಯಾಗಿರಬೇಕು: ಸಚಿವ ಮಾಧುಸ್ವಾಮಿ

ತುಮಕೂರು: ಅರಣ್ಯ ಇಲಾಖೆ ಕಾರ್ಯಕ್ರಮಗಳು ಜನಸ್ನೇಹಿಯಾಗಿರಬೇಕು ಎಂದು ಕಾನೂನು ಸಂಸದೀಯ ವ್ಯವಹಾರ, ಶಾಸನ ರಚನೆ ಹಾಗೂ ಸಣ್ಣ ನೀರಾವರಿ ಸಚಿವರು ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ. ಮಾಧುಸ್ವಾಮಿ ತಿಳಿಸಿದರು.

ಪಾವಗಡದಲ್ಲಿಂದು ಅರಣ್ಯ ಇಲಾಖೆ ಏರ್ಪಡಿಸಿದ್ದ ಸಾಲು ಮರದ ತಿಮ್ಮಕ್ಕ ಸಸ್ಯೋದ್ಯಾನದ ಉದ್ಘಾಟನೆ ನೆರವೇರಿಸಿ ಮಾತನಾ ಡಿದ ಅವರು ಅರಣ್ಯ ಇಲಾಖೆ ಕಾರ್ಯಕ್ರಮಗಳು ಸಮರ್ಪಕವಾಗಿ ಜನರನ್ನು ತಲುಪುತ್ತಿಲ್ಲ. ಗಿಡಗಳನ್ನು ಬೆಳೆಸುವ, ಅರಣ್ಯ ಅಭಿವೃದ್ಧಿ, ಸಸ್ಯೋದ್ಯಾನದ ನಿರ್ಮಾಣ ಕಾರ್ಯಕ್ರಮಗಳು ನಿರಂತರವಾಗಿ ಹಮ್ಮಿಕೊಳ್ಳುತ್ತಿರಬೇಕು ಎಂದು ಸಲಹೆ ನೀಡಿದರು.
ಈ ಸಸ್ಯೋದ್ಯಾನದ ಬಳಕೆ ಸದಾಕಾಲ ದೊರೆಯುವಂತಾಗಬೇಕು. ವಯೋವೃದ್ಧರು, ಸಸ್ಯಪ್ರೇಮಿಗಳು ಬಂದು ನೋಡುವಂತಾಗ ಬೇಕು. ಬಂದವರಿಗೆ ಒಂದು ಗಿಡ ಕೊಡುವುದನ್ನು ರೂಡಿಸಿಕೊಳ್ಳಬೇಕು. ಪಾವಗಡ ಹಸಿರಿನಿಂದ ಕಂಗೊಳಿಸು ವಂತಾಗಬೇಕು ಎಂದು ಹೇಳಿದರು.

ಪಾವಗಡದಂತಹ ಒಣ ವಾತಾವರಣಕ್ಕೆ ಹೊಂದುವಂತಹ ಜಾತಿಯ ಗಿಡಗಳನ್ನು ಬೆಳೆದು ತೋರಿಸಬೇಕು. ಗಿಡ-ಮರ ಬೆಳೆಸುವು ದರಿಂದ ಉತ್ತಮ ಪರಿಸರ ನಿರ್ಮಾಣವಾಗಿ ಸ್ವಾಸ್ಥ್ಯ ವಾತಾವರಣ ಸಿಗುತ್ತದೆ ಎಂದು ತಿಳಿಸಿದರು.

ಶಾಸಕ ವೆಂಕಟರಮಣಪ್ಪ ಮಾತನಾಡಿ, ಅತ್ಯಂತ ಕಡಿಮೆ ಮಳೆ ಬರುವ ಪ್ರದೇಶವಾದ ಪಾವಗಡದಲ್ಲಿ ಅಗತ್ಯವಿರುವ ಕಡೆ ಚೆಕ್‌ ಡ್ಯಾಂ ನಿರ್ಮಾಣ ಮಾಡಬೇಕು. ಇದರಿಂದ ನೀರು ನಿಂತು ಮರ-ಗಿಡಗಳು ಸೊಂಪಾಗಿ ಬೆಳೆಯುತ್ತವೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಉಪವಿಭಾಗಾಧಿಕಾರಿಗಳಾದ ಡಾ.ನಂದಿನಿದೇವಿ, ಅರಣ್ಯ ಇಲಾಖೆ ಅಧಿಕಾರಿ ಹೆಚ್.ಸಿ. ಗಿರೀಶ್, ಪಾವಗಡದ ಮುಖ್ಯ ವೈದ್ಯಾಧಿಕಾರಿಗಳಾದ ಡಾ.ಚಂದ್ರಕಲಾ, ಡಾ.ಅಭಿಷೇಕ್, ಮತ್ತಿತರ ಅಧಿಕಾರಿಗಳು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *