Wednesday, 1st February 2023

ವೈಷಮ್ಯ ಮರೆತು ಪಕ್ಷದ ಗೆಲುವಿಗೆ ದುಡಿಯಬೇಕು

ಕಾಂಗ್ರೆೆಸ್-ಬಿಜೆಪಿ ಕಾರ್ಯಕರ್ತರ ಮಿಲನ ಕಾರ್ಯಕ್ರಮದಲ್ಲಿ ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಮಾತನಾಡಿದರು.

ವಿಶ್ವವಾಣಿ ಸುದ್ದಿಮನೆ ಗೋಕಾಕ
ಕಾಂಗ್ರೆೆಸ್ ಹಾಗೂ ಬಿಜೆಪಿ ಕಾರ್ಯಕರ್ತರು ಹಳೆಯ ವೈಷಮ್ಯ ಮರೆತು ಯಾವುದೇ ಭೇದಭಾವ ಮಾಡಿಕೊಳ್ಳದೇ ಒಗ್ಗಟ್ಟಾಾಗಿ ಈ ಉಪಚುನಾವಣೆಯಲ್ಲಿ ದುಡಿಯಬೇಕು. ಬಿ.ಎಸ್.ಯಡಿಯೂರಪ್ಪನವರ ಸ್ಥಿಿರ ಸರಕಾರ ಮುಂದುವರಿಯಲು ರಮೇಶ ಜಾರಕಿಹೊಳಿ ಅವರ ಪರವಾಗಿ ಪ್ರತಿ ಮನೆ-ಮನೆಗೆ ತೆರಳಿ ಮತಯಾಚಿಸುವಂತೆ ಅರಭಾವಿ ಶಾಸಕ ಹಾಗೂ ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಕಾರ್ಯಕರ್ತರಲ್ಲಿ ಮನವಿ ಮಾಡಿಕೊಂಡರು.
ಗೋಕಾಕ ಮತಕ್ಷೇತ್ರದ ಕಾಂಗ್ರೆೆಸ್ ಮತ್ತು ಬಿಜೆಪಿ ಕಾರ್ಯಕರ್ತರ ಮಿಲನ ಕಾರ್ಯಕ್ರಮದಲ್ಲಿ ಮಾತನಾಡಿ, ಡಿ.5ರಂದು ನಡೆಯಲಿರುವ ಈ ಚುನಾವಣೆಯನ್ನು ಕಾರ್ಯಕರ್ತರು ಪ್ರತಿಷ್ಠೆೆಯನ್ನಾಾಗಿ ತೆಗೆದುಕೊಳ್ಳಬೇಕು. ಹಳೆಯ ವ್ಯತ್ಯಾಾಸಗಳನ್ನು ಮರೆಯಬೇಕು. ಧೈರ್ಯದಿಂದ ಚುನಾವಣೆಯನ್ನು ಎದುರಿಸಬೇಕು. ರಾಜ್ಯದ ಸರ್ವಾಂಗೀಣ ಅಭಿವೃದ್ಧಿಿಗೆ ಟೊಂಕ ಕಟ್ಟಿಿ ನಿಂತಿರುವ ಮುಖ್ಯಮಂತ್ರಿಿ ಬಿ.ಎಸ್.ಯಡಿಯೂರಪ್ಪನವರ ಕೈ ಬಲಪಡಿಸಲು ಬಿಜೆಪಿಗೆ ಹೆಚ್ಚಿಿನ ಮತಗಳನ್ನು ಹಾಕಿಸಲು ಶ್ರಮಿಸುವಂತೆ ತಿಳಿಸಿದರು.
ರಮೇಶ್ ಜಾರಕಿಹೊಳಿ ಅವರು ಗಟ್ಟಿಿಯಾಗಿ ನಿಂತು ರಾಜ್ಯದಲ್ಲಿ ಬಿಜೆಪಿ ಸರ್ಕಾರ ರಚನೆಗೆ ಕಾರಣೀಕರ್ತರಾಗಿದ್ದಾಾರೆ. ಯಡಿಯೂರಪ್ಪನವರನ್ನು ಮುಖ್ಯಮಂತ್ರಿಿಯನ್ನಾಾಗಿ ಮಾಡಿಯೇ ತೀರುತ್ತೇನೆಂದು ಹಠ ಹಿಡಿದು ಕಾಂಗ್ರೆೆಸ್ ಅನ್ನು ತೊರೆದು ಬಿಜೆಪಿಗೆ ಸೇರ್ಪಡೆಯಾಗಿದ್ದಾಾರೆ. ಒಂದು ವೇಳೆ ರಮೇಶ್ ಇಂತಹ ದಿಟ್ಟ ನಿರ್ಧಾರ ತೆಗೆದುಕೊಳ್ಳದಿದ್ದಲ್ಲಿ ಯಡಿಯೂರಪ್ಪನವರನ್ನು ಮುಖ್ಯಮಂತ್ರಿಿಯನ್ನಾಾಗಿ ನಾವು ನೋಡುತ್ತಿಿರಲಿಲ್ಲ ಎಂದರು.
ರಮೇಶ್ ಜಾರಕಿಹೊಳಿ ಅವರನ್ನು ವಿಧಾನಸಭೆಗೆ ಆಯ್ಕೆೆ ಮಾಡಿ ಕಳುಹಿಸಲೇಬೇಕು. ಇದರಲ್ಲಿ ನಮ್ಮ ಸ್ವಾಾರ್ಥವೇನೂ ಇಲ್ಲ. ಕ್ಷೇತ್ರದ ಹಾಗೂ ಜಿಲ್ಲೆೆಯ ಸರ್ವಾಂಗೀಣ ಅಭಿವೃದ್ಧಿಿಯಾಗಬೇಕಾದರೆ ಇವರ ಗೆಲುವು ಅವಶ್ಯಕವಾಗಿದೆ. ಶಾಸಕ ಸ್ಥಾಾನದ ಜತೆಗೆ ಮಹತ್ವದ ಸಚಿವ ಸ್ಥಾಾನವೂ ದೊರೆಯಲಿದೆ. ರಮೇಶ್ ಜಾರಕಿಹೊಳಿ ಅವರು ಆಯ್ಕೆೆಯಾದರೆ ಕಾರ್ಯಕರ್ತರನ್ನು ಎಂದಿಗೂ ಕೈಬಿಡುವುದಿಲ್ಲ. ಕಾರ್ಯಕರ್ತರ ಕೆಲಸಗಳು ಆಗದಿದ್ದರೆ ನಮ್ಮ ಎನ್‌ಎಸ್‌ಎಫ್ ಕಚೇರಿ ಸದಾ ತೆರೆದಿರುತ್ತದೆ. ನಿಮ್ಮ ಕೆಲಸ ಕಾರ್ಯಗಳನ್ನು ಮಾಡಿಸಿಕೊಡುವ ಜವಾಬ್ದಾಾರಿ ನಾನೇ ಹೊತ್ತುಕೊಳ್ಳುತ್ತೇನೆಂದು ಹೇಳಿದರು.

22ರಿಂದ ಬಿರುಸಿನ ಪ್ರಚಾರ
ನ.22 ರಿಂದ ಗೋಕಾಕ ಮತಕ್ಷೇತ್ರಾಾದ್ಯಂತ ಬಿರುಸಿನ ಪ್ರಚಾರ ನಡೆಯಲಿದೆ. ಗೋಕಾಕ ನಗರದ ಪ್ರಮುಖರ ಹಾಗೂ ಕಾರ್ಯಕರ್ತರನ್ನು ಭೇಟಿ ಮಾಡುತ್ತೇವೆ. ನನ್ನೊೊಂದಿಗೆ ಕೇಂದ್ರ ಸಚಿವ ಸುರೇಶ್ ಅಂಗಡಿ ಹಾಗೂ ಇನ್ನೂಳಿದ ಬಿಜೆಪಿ ಮುಖಂಡರುಗಳು ಇರಲಿದ್ದಾಾರೆ. ಯಾರದೇ ಪ್ರಭಾವಕ್ಕೆೆ ಒಳಗಾಗದೇ ಗೋಕಾಕ ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಿಗಾಗಿ ಕಮಲ ಗುರುತಿಗೆ ಮತ ನೀಡಿ ಪ್ರಚಂಡ ಬಹುಮತದಿಂದ ರಮೇಶ್ ಜಾರಕಿಹೊಳಿ ಅವರನ್ನು ಆಯ್ಕೆೆ ಮಾಡುವಂತೆ ಬಾಲಚಂದ್ರ ಜಾರಕಿಹೊಳಿ ಕೋರಿದರು.

error: Content is protected !!