Sunday, 14th August 2022

ದುರ್ವಾಸನೆ ತಡೆಗೆ ಫೆನಾಯಿಲ್ ಸಿಂಪಡಿಸಬೇಕೇ ಹೊರತು ಊದಿನಬತ್ತಿ ಅಲ್ಲ

ಅಭಿಪ್ರಾಯ

ದೇವಿ ಮಹೇಶ್ವರ ಹಂಪಿನಾಯ್ಡು, ಬೆಂಗಳೂರು 

ಇತ್ತೀಚೆಗೆ ನಡೆದ ಪೊಲೀಸ್ ಆಯುಕ್ತ ಭಾಸ್ಕರ್‌ರಾವ್ ಅವರ ನೇತೃತ್ವದಲ್ಲಿ ಬಂಧಿತರನ್ನು ಬಾಂಗ್ಲಾಾದೇಶದ ರಾಯಭಾರಿ ಕಚೇರಿಯೊಂದಿಗೆ ಸಂವಹನ ನಡೆಸಿ ಗಡಿ ಭದ್ರತಾ ಪಡೆಯವರ ನೇತೃತ್ವದಲ್ಲಿ ರೈಲ್ವೆೆ ಮೂಲಕ ಅವರನ್ನು ಬಾಂಗ್ಲಾಾದೇಶಕ್ಕೆೆ ರವಾನಿಸುವ ಕಾರ್ಯಕ್ಕೆೆ ಚಾಲನೆ ನೀಡಿರುವುದು ಮಹತ್ವದ ಸಂಗತಿ.

ಆಧುನಿಕ ಇಸ್ಲಾಾಮಿಕ್ ದಾಳಿಯ ಭಾಗವಾದ ಲವ್ ಜಿಹಾದ್ ಕುತಂತ್ರಕ್ಕೆೆ ಒಳಗಾದ ಹಿಂದೂ ಹೆಣ್ಣು ಮಗಳು ಮುಸ್ಲಿಿಂ ಯುವಕನೊಂದಿಗೆ ಪ್ರೇಮಾಂಕುರವಾಗಿ, ಅದು ಮದುವೆಯಲ್ಲಿ ಮಾರ್ಪಾಟಾಗಿ, ಮತಾಂತರದಲ್ಲಿ ಯಶಸ್ವಿಿಯಾಗಿ ಪಕ್ಕಾಾ ಜಿಹಾದಿಯಾಗಿ ಬದಲಾವಣೆಗೊಂಡು ಹಿಂದೂ ಧರ್ಮದ ವಿರುದ್ಧದ ಹುನ್ನಾಾರದಲ್ಲಿನ ಭಯೋತ್ಪಾಾದಕ ಚಟುವಟಿಕೆಗಳಲ್ಲಿ ಪಾತ್ರವಹಿಸುವ ಅಥವಾ ಗಂಡನ ಧರ್ಮಕ್ಕೆೆ ಅನುಗುಣವಾಗಿ ನಡೆದುಕೊಳ್ಳುವ ಹಲವಾರು ಹಿಂದೂ ಹೆಣ್ಣುಮಕ್ಕಳ ದುರಂತ ಕಥೆಗಳನ್ನು ಟಿವಿಯಲ್ಲಿ, ಪತ್ರಿಿಕೆಗಳಲ್ಲಿ ವರದಿಯಾಗಿದ್ದನ್ನು ನೋಡಿದ್ದೇವೆ, ಕೇಳಿದ್ದೇವೆ. ಹಾಗೆಯೇ ನೈಜ ಪ್ರೀತಿಯು ಹುಟ್ಟಿಿ ಮುಸ್ಲಿಿಂ ಹೆಣ್ಣು ಮಗಳನ್ನು ಹಿಂದೂ ಧರ್ಮದ ವ್ಯಕ್ತಿಿ ಮದುವೆಯಾದರೆ ಆ ಹೆಣ್ಣು ಮಗಳು ಹಿಂದೂ ಧರ್ಮದ ರೀತಿಯಲ್ಲಿ ನಡೆದುಕೊಳ್ಳುವುದು ಸಹಜ. ಆದರೆ, ನೋಡಿ, ಮುಸಲ್ಮಾಾನ ಹೆಣ್ಣು ಮಗಳನ್ನು ವರಿಸಿದ ಹಿಂದೂ ಧರ್ಮಿಯವನೊಬ್ಬ ಪಕ್ಕಾಾ ಜಿಹಾದಿ ದೀಕ್ಷೆ ಪಡೆದವನ ಹಾಗೆ ಓವೈಸಿಯಂತೆ ವರ್ತಿಸುವ ಅಯೋಗ್ಯನನ್ನು ಎಲ್ಲಾಾದರು ಕಂಡಿದ್ದೀರಾ?. ಹಿಂದೂತ್ವವನ್ನು ವಿರೋಧಿಸುವ, ಬಹುಸಂಖ್ಯಾಾತರನ್ನು ನೋಯಿಸುವ, ಹಿಂದೂ ಸಂತರಿಗೆ ಚಪ್ಪಲಿಯಲ್ಲಿ ಹೊಡೆಯಬೇಕೆನ್ನುವ, ದೇಶಕ್ಕೆೆ ಪೀಡೆಯಂತ್ತಿಿದ್ದ 370 ‘ವಿಧಿ ಬರಹ’ವನ್ನು ಅಳಿಸಿ ಹಾಕಿ ಶಾಪಗ್ರಸ್ತ ಕಾಶ್ಮೀರವನ್ನು ಮುಕ್ತಿಿಗೊಳಿಸಿದರೆ ಅದನ್ನು ಅಸಂಬದ್ಧವಾಗಿ ಖಂಡಿಸಿ ವೈರಿದೇಶ ಪಾಕಿಸ್ತಾಾನದ ರಾಯಭಾರಿಯಂತೆ ಹೇಳಿಕೆ ನೀಡುವ, ಹಲವಾರು ವಿಚಾರಗಳಲ್ಲಿ ದೇಶ ವಿರೋಧಿ ತಿಕ್ಕಲು ಹೇಳಿಕೆಗಳನ್ನು ನೀಡುವ ಏಕೈಕ ಆಕೃತಿಯನ್ನು ನಾವುಗಳು ಇಂದು ನೋಡುವಂತ್ತಾಾಗಿದ್ದರೆ ಅದು ರಾಜಕಾರಣದ ಅದ್ಭುತ.

ಮತ್ತೊೊಬ್ಬನಿದ್ದಾಾನೆ ಈತ ಹುಟ್ಟು ಹಿಂದುತ್ವವಾದಿಯಾಗಿ ಸಂಘಟನೆಯಲ್ಲಿ ಪಾಲ್ಗೊೊಂಡು ಯಾವುದೋ ಒಂದು ಕಾರಣದಿಂದ ಉಲ್ಟಾಾ ಹೊಡೆದು ಈಗ ಹಿಂದೂ ಧರ್ಮದ ವಿರುದ್ಧ ಹಿಂದೂ ಸಂಘಟನೆಗಳ ವಿರುದ್ಧ ಅವಿವೇಕಿಯಂತೆ ಮಾತನಾಡುತ್ತಾಾನೆ. ಇವನೊಬ್ಬ ಕಮ್ಮಿಿ ಇದ್ದ. ಈತನ ರೌಡಿಸಂ ಆಧಾರಿತ ಒಂದೇ ಒಂದು ಸಿನಿಮಾ ಸುದ್ದಿಯಾದ ತಕ್ಷಣವೇ ನೊಬೆಲ್ ಶಾಂತಿ ಪುರಸ್ಕೃತನಂತೆ ವರ್ತಿಸುವ ನಟನೊಬ್ಬ ಅಕ್ರಮ ಬಾಂಗ್ಲಾಾ ದೇಶದ ವಲಸಿಗರ ಪರ ಮಾನವ ಹಕ್ಕನ್ನು ಮಂಡಿಸಿ ಅವರ ಪರ ನಿರಶನ ಕೂರುತ್ತಾಾನೆ. ಇಂತಹ ಜಂತುಗಳನ್ನು ಎಲಿಮೆಂಟುಗಳನ್ನು ಬೆಳೆಸುತ್ತಲೇ ಇಂದು ರಾಜಕೀಯ ಪಕ್ಷಗಳು ವೊಟ್‌ಬ್ಯಾಾಂಕ್‌ನ್ನು ವಿಸ್ತರಿಸಿ ಭದ್ರಗೊಳಿಸಿಕೊಳ್ಳುವುದರಲ್ಲಿ ನಿರತವಾಗುತ್ತವೆ. ಇಂತವರಿಗೆ ದೇಶದ ಭದ್ರತೆ, ಸಾರ್ವಭೌಮತೆ, ಘನತೆ, ಏಕತೆ, ಸಮಗ್ರತೆ ಪದದ ಅರ್ಥವೇ ತಿಳಿದಿರುವುದಿಲ್ಲ. ಏನೇ ಹೇಳಿಕೆ ಕೊಟ್ಟರೂ ಅದು ಬಹುಸಂಖ್ಯಾಾತ ಹಿಂದೂಗಳ ನಂಬಿಕೆಗಳನ್ನು ಅವಹೇಳನ ಮಾಡುವುದು, ಅಲ್ಪಸಂಖ್ಯಾಾತರನ್ನು, ದಲಿತರನ್ನು ವಿಕೇಂದ್ರಿಿಕರಣಗೊಳಿಸಿ ಅವರ ಮನಸ್ಸುಗಳನ್ನು ಸೂತಕದ ಮನಸ್ಥಿಿತಿಗೆ ದೂಡುವ ಯತ್ನವೇ ಆಗಿರುತ್ತದೆ.

ಇವರುಗಳು ದೇಶದಲ್ಲಿ ದಲಿತರನ್ನು ಹಿಂದೂಗಳ ಭಾಗವಾಗಿ ಜೀವಿಸಲು ಬಿಡುವುದಿಲ್ಲ. ಮುಸಲ್ಮಾಾನರು ಹಿಂದೂಗಳೊಡನೆ ಸಹಬಾಳ್ವೆೆಯಿಂದ ಬದುಕುವುದನ್ನು ಸಹಿಸುವುದಿಲ್ಲ. ಎಲ್ಲಕ್ಕಿಿಂತ ಅಪಾಯಕಾರಿ ಎಂದರೆ ಇವರುಗಳಿಂದ ದೇಶದ್ರೋಹಿಗಳನ್ನು ದೇಶದ್ರೋಹಿಗಳಂತೆಯೇ ಕಾಣಲು ಸಾಧ್ಯವೇ ಇಲ್ಲ. ಇಲ್ಲೇ ಹುಟ್ಟಿಿ ಇಲ್ಲೇ ಬೆಳೆದು ಇದೇ ನೆಲದಲ್ಲಿ ಬದುಕು ಕಟ್ಟಿಿಕೊಂಡು ಇದೇ ದೇಶದ ಪರಂಪರೆಯನ್ನು ಅವಹೇಳನ ಮಾಡುವ ಇವರುಗಳೇ ಹೀಗಿರಬೇಕಾದರೆ, ಇನ್ನು ನಮ್ಮ ದೇಶದ ವಿರುದ್ಧದ ಕುತಂತ್ರಕ್ಕೆೆ ಸದಾ ಸಿದ್ಧವಿರುವ ಶಂಕಿತ ಬಾಂಗ್ಲಾಾದೇಶದ ಅಕ್ರಮ ವಲಸಿಗರನ್ನು ನಂಬಲು ಸಾಧ್ಯವೇ?

ಇಷ್ಟೆೆಲ್ಲಾಾ ವಿವರಿಸಲು ಕಾರಣ ಮೊನ್ನೆೆ ಬೆಂಗಳೂರಿನಲ್ಲಿ ಇಂತವರ ಕರಳುಕಿವುಚುವ ಬೆಳವಣೆಗೆ ನಡೆದುಹೋಗಿದೆ. ಅದೇನೆಂದರೆ ನಮ್ಮ ಬೆಂಗಳೂರು ನಗರದ ದಿಟ್ಟ ಪೊಲೀಸ್ ಆಯುಕ್ತರಾದ ಭಾಸ್ಕರ್‌ರಾವ್ ಅವರು ನಿಜಕ್ಕೂ ದೇಶಕ್ಕೆೆ ಬೇಕಾದ ಕೆಲಸವನ್ನು ಮಾಡಿ ತೋರಿಸಿದ್ದಾಾರೆ. ಇದು ‘ಪಿತೃ’ಪಕ್ಷಗಳ ನಿದ್ದೆೆಗೆಡಿಸಿದೆ. ನಗರದ ಕೃಷ್ಣರಾಜಪುರ, ಬೆಳ್ಳಂದೂರು, ರಾಮಮೂರ್ತಿ ನಗರ, ಮಾರತಹಳ್ಳಿಿ ಇನ್ನಿಿತರ ಪ್ರದೇಶಗಳಲ್ಲಿ ಅಕ್ರಮವಾಗಿ ನೆಲೆಸಿರುವ ಭಾರತಕ್ಕೆೆ ಅಪಾಯಕಾರಿ ದೇಶವಾದ ಬಾಂಗ್ಲಾಾದೇಶದ 60 ಮಂದಿ ವಲಸಿಗರನ್ನು ಬಂಧಿಸಿ ವಿದೇಶಿ ಕಾಯಿದೆ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾಾರೆ. ಇದು ಏಕಾಏಕಿ ಒಂದೇ ದಿನದಲ್ಲಿ ಕೈಗೊಂಡ ಕ್ರಮವಲ್ಲ. ಹಲವಾರು ತಿಂಗಳುಗಳಿಂದ ಅಕ್ರಮವಾಗಿ ನೆಲೆಸಿರುವ ವಿದೇಶಿಗರ ಬಗ್ಗೆೆ ದೂರುಗಳು ಬರುತ್ತಿಿದ್ದವು. ಕೇಂದ್ರ ಗುಪ್ತಚರ ಇಲಾಖೆ, ಅಕ್ರಮ ವಿದೇಶಿ ವಲಸಿಗರ ನಿಗಾವಹಿಸಿ ಅವರ ಚಟುವಟಿಕೆಗಳ ಬಗ್ಗೆೆ ಕಣ್ಣಿಿಡುವಂತೆ ಎಚ್ಚರಿಕೆ ನೀಡಲಾಗಿತ್ತು. ಇದರ ಬೆನ್ನಲ್ಲೇ ಮೇಲ್ಕಂಡ ಪ್ರದೇಶಗಳಲ್ಲಿ ದಾಳಿ ನಡೆಸಿ ಅಕ್ರಮವಾಗಿ ನೆಲೆಸಿದ ಬಾಂಗ್ಲಾಾದೇಶಿಗರನ್ನು ಬಂಧಿಸಿ ನಗರ ಪೊಲೀಸರು ದೇಶಕ್ಕೆೆ ಮಾಡಲೇ ಬೇಕಾದ ಕೆಲಸವನ್ನು ಮಾಡಿದ್ದಾಾರೆ.

ಅಷ್ಟೇ ಅಲ್ಲದೆ ನಗರದಲ್ಲಿರುವ ಎಲ್ಲಾಾ ವಿದೇಶಿಗರ ಪಾಸ್‌ಪೋರ್ಟ್, ವೀಸಾವನ್ನು ವಲಸೆ ಅಧಿಕಾರಿಗಳ ಸಹಕಾರದೊಂದಿಗೆ ಪರಿಶೀಲಿಸಿ ಪತ್ತೆೆ ಕಾರ್ಯ ಕೈಗೊಂಡು ಅವರನ್ನು ಕೂಡಲೇ ಗಡಿಪಾರು ಮಾಡುವಂತ ಕ್ರಮಕ್ಕೆೆ ಮುಂದಾಗಿರುವುದು ಒಳ್ಳೆೆಯ ಬೆಳವಣೆಗೆ. ಇಂತಹ ದಿಟ್ಟ ಕ್ರಮ ಕೈಗೊಳ್ಳುವುದರಲ್ಲಿ ಪೊಲೀಸ್ ಆಯುಕ್ತರಾದ ಭಾಸ್ಕರ್‌ರಾವ್ ಅವರು ಡೈನಾಮಿಕ್ ಎನ್ನುವ ಖ್ಯಾಾತಿಗೆ ತಕ್ಕಂತೆ ತಮ್ಮ ಕರ್ತವ್ಯದ ಬಿಸಿ ಮುಟ್ಟಿಿಸಿದ್ದಾಾರೆ. ಈಗ ಈ ಬಂಧಿತರನ್ನು ಬಾಂಗ್ಲಾಾದೇಶದ ರಾಯಭಾರಿ ಕಚೇರಿಯೊಂದಿಗೆ ಸಂವಹನ ನಡೆಸಿ ಗಡಿ ಭದ್ರತಾ ಪಡೆಯವರ ನೇತೃತ್ವದಲ್ಲಿ ರೈಲ್ವೆೆ ಮೂಲಕ ಅವರನ್ನು ಬಾಂಗ್ಲಾಾದೇಶಕ್ಕೆೆ ರವಾನಿಸುವ ಕಾರ್ಯಕ್ಕೆೆ ಚಾಲನೆ ನೀಡಿರುವುದು ಮಹತ್ವದ ಬೆಳವಣಿಗೆಯೇ ಸರಿ. ಭಾಸ್ಕರ್‌ರಾವ್ ಅವರ ಇಂತಹ ಸೇವೆ ತುರ್ತಾಗಿ ಪಶ್ಚಿಿಮ ಬಂಗಾಳಕ್ಕೆೆ ಭಾರಿ ಅವಶ್ಯಕತೆ ಇದೆ. ಇಂತಹ ಹತ್ತು ಅಧಿಕಾರಿಗಳು ಅಲ್ಲಿದ್ದರೆ ಸಾಕು ಸಾವಿರಾರು ವೋಟ್ ಬ್ಯಾಾಂಕ್‌ಗಳನ್ನು ಪಕ್ಕದ ಬಾಂಗ್ಲಾಾದೇಶಕ್ಕೆೆ ಗಂಟುಮೂಟೆಯ ಸಮೇತ ತೇಲಿಸಿ ಬಿಡುತ್ತಾಾರೆ.

ಇದಿಷ್ಟೇ ಅಲ್ಲ, ಇಂತಹ ಬಾಂಗ್ಲಾಾದವರ್ನು ಅಕ್ರಮವಾಗಿ ಕರೆದುಕೊಂಡು ಬಂದವರ ಬೆನ್ನತ್ತಿಿ ಬೇಟೆಯಾಡುವುದನ್ನು ಆರಂಭಿಸಲಾಗಿದೆ. ಇವರೊಂದಿಗೆ, ಸಾಕಷ್ಟು ಹಣ ನೀಡಿದರೆ ಎಂತವರಿಗೂ ಬಾಡಿಗೆಗೆ ಮನೆ ನೀಡುವ ಮನೆ ಮಾಲೀಕರಿಗೂ, ಅವರಿಗೆ ಆಶ್ರಯ ನೀಡಿದವರಿಗೂ, ಅವರಿಗೆ ಅಕ್ರಮವಾಗಿ ವೋಟರ್ ಐಡಿ, ಆಧಾರ್ ಕಾರ್ಡ್ ಇನ್ನಿಿತರ ಸರಕಾರಿ ದಾಖಲೆಗಳನ್ನು ಸೃಷ್ಟಿಿಸಿ ಮನೆದ್ರೋಹಿಗಳಿಗೂ ಕಾದಿದೆ ಮಾರಿಹಬ್ಬ. ಇವರುಗಳ ಮೇಲೆಯೂ ಕ್ರಿಿಮಿನಲ್ ಕೇಸ್ ದಾಖಲಾಗುವ ಕಟ್ಟುನಿಟ್ಟಿಿನ ಕ್ರಮಕ್ಕೆೆ ಮುಂದಾಗಿರುವುದು ಬೆಂಗಳೂರಿನ ಮಟ್ಟಕ್ಕೆೆ ಭದ್ರತೆಯ ಬೆಳವಣಿಗೆ.

ಭಾಸ್ಕರ್‌ರಾವ್ ಅವರು ದಿಟ್ಟ ಅಧಿಕಾರಿ ಎಂಬುದು ತಿಳಿದ ವಿಷಯ. ಮುಖ್ಯಮಂತ್ರಿ ಯಡಿಯೂರಪ್ಪನವರು ಅಧಿಕಾರಕ್ಕೆೆ ಬಂದ ಕೂಡಲೇ ಇವರನ್ನು ಮಹಾನಗರದ ಆಯುಕ್ತರನ್ನಾಾಗಿ ನೇಮಿಸಿದ್ದು ಸರಿಯಾಗಿಯೇ ಇತ್ತು.

ಮುಖ್ಯವಾಗಿ ಇಂತಹ ಅಕ್ರಮ ವಲಸಿಗರನ್ನು ಭಯೋತ್ಪಾಾದನೆಯ ಚಟುವಟಿಕೆಗಳ ಹಿನ್ನೆೆಲೆಯಲ್ಲಿ ತನಿಖೆ ಆರಂಭಿಸಿರುವುದು ಗಂಭೀರವಾದ ವಿಚಾರ. ಆಳುವ ಸರಕಾರಕ್ಕೆೆ ಇಂತಹ ನೈಜ ಇಚ್ಛಾಾಶಕ್ತಿ ಇದ್ದರೆ ಇಂತಹ ಕ್ರಮಗಳು ಸಹಜವಾಗಿ ನಡೆಯುತ್ತದೆ. ಆದರೆ, ಇಂಹತ ಕ್ರಮಗಳಿಂದ ರೋದಿಸುತ್ತಿರುವುದು ವೇದನೆಪಡುತ್ತಿರುವುದು ಕಳವಳಗೊಂಡು ಆತಂಕದಲ್ಲಿರುವುದು ಖಂಡಿತಾ ಬಾಂಗ್ಲ ವಲಸಿಗರಲ್ಲ. ಬದಲಾಗಿ ಕಂಗಾಲಾಗುತ್ತಿರುವುದು, ಇವರ ಅನೈತಿಕ ಮತಗಳನ್ನು ಪಡೆಯುತ್ತಿಿದ್ದ ಅಧಿಕಾರ ದಾಹದ ರಾಜಕಾರಣಿಗಳು ಮತ್ತು ಅವರ ಪಿತೃಪಕ್ಷಗಳು.

ರಾಜ್ಯಕ್ಕೆೆ ದೇಶಕ್ಕೆೆ ಇಂತಹ ಶತ್ರುದೇಶದ ವಲಸಿಗರು ಅಕ್ರಮವಾದರೆ ಇವರುಗಳೇ ಇಲ್ಲಿನ ಪುಡಾರಿಗಳಿಗೆ ಮತದಾರರು. ಇವರ ಪರವಾಗಿ ಮಾನವ ಹಕ್ಕು ಎಂಬ ಅಸ್ತ್ರವನ್ನು ಹಿಡಿದು ಬಾಯಿಬಡಿದುಕೊಳ್ಳುವ ಅಯೋಗ್ಯರುಗಳಿಗೆ ನಮ್ಮದೇ ದೇಶದ ರಾಜ್ಯವಾದ ಕಾಶ್ಮೀರದಿಂದ ಜೀವ ಉಳಿದರೆ ಸಾಕು ಎಂದು ಉಟ್ಟಬಟ್ಟೆೆಯಲ್ಲಿ ತಮ್ಮ ಪಿತ್ರಾಾರ್ಜಿತ ಸ್ವಯಾರ್ಜಿತ ಆಸ್ತಿಿಗಳನ್ನು ಬಿಟ್ಟು ಓಡಿ ಹೋದರಲ್ಲ ಆಗ ಈ ಮಾನವ ಹಕ್ಕು ದೂತರು ಯಾವ ಕೊಳಚೆ ಮೋರಿಯೊಳಗೆ ತಲೆಮರೆಸಿಕೊಂಡಿದ್ದರು? ಸಾಮಾನ್ಯವಾಗಿ ಇಂತಹ ಜೇನುಗೂಡುಗಳಿಗೆ ಕೈಹಾಕಲು ಆಡಳಿತ ಸರಕಾರದ ಅನುಮತಿಗಾಗಿ ಕಾದು, ಅದರಿಂದ ಯಾರಿಗೆ ಲಾಭ-ನಷ್ಟವಾಗುತ್ತದೆ ಎಂಬ ಲೆಕ್ಕಚಾರದ ನಂತರ ದಾಳಿ ಮಾಡಲಾಗುತ್ತದೆ. ಆದರೆ, ಐಪಿಎಸ್ ಭಾಸ್ಕರ್‌ರಾವ್ ಅವರು ದಿಟ್ಟ ಅಧಿಕಾರಿ ಎಂಬುದು ತಿಳಿದ ವಿಷಯ. ಈಗನ ಮುಖ್ಯಮಂತ್ರಿಿ ಯಡಿಯೂರಪ್ಪನವರು ಅಧಿಕಾರಕ್ಕೆೆ ಬಂದ ಕೂಡಲೇ ಇವರನ್ನು ಮಹಾನಗರದ ಆಯುಕ್ತರನ್ನಾಾಗಿ ನೇಮಿಸಿದ್ದು ಸರಿಯಾಗಿಯೇ ಇದೆ.

ನೋಡಿ, ಇಡೀ ಬದುಕನ್ನೇ ದೇಶದ ಸೇವೆಗೆ ಮುಡಿಪಾಗಿಟ್ಟು ಸೇನೆ ಸೇರಿದ ವಿಂಗ್ ಕಮಾಂಡರ್ ಅಭಿನಂದನ್ ವರ್ತಮಾನ್ ಅವರು ಅದೇ ಹೋರಾಟದಲ್ಲಿ ಆಕಸ್ಮಿಿಕವಾಗಿ ಶತ್ರುದೇಶ ಪಾಕಿಸ್ತಾಾನಕ್ಕೆೆ ಸೆರೆಯಾಗಿ ಅಲ್ಲಿ 30 ಗಂಟೆಗಳಿಗೂ ಹೆಚ್ಚು ಸಮಯ ಕಳೆದು ವೈರಿಗಳೊಂದಿಗೆ ಚಹಾ ಕುಡಿದು ಯಮಕೂಪದಿಂದ ಹುಲಿಯಂತೆ ದೇಶದೊಳಗೆ ಬಂದ ಅವರನ್ನೇ ನಮ್ಮ ದೇಶ ತಿಂಗಳುಗಳ ಕಾಲ ನಾನಾ ರೀತಿಯ ತಪಾಸಣೆಗಳಿಗೆ ಒಳಪಡಿಸಿ ಅವರನ್ನು ಪರೀಕ್ಷಿಸಿ ನಂತರ ಅವರು ಕರ್ತವ್ಯದಲ್ಲಿ ಮುಂದುವರೆಯಲು ಅವಕಾಶ ಕಲ್ಪಿಿಸಿದೆ. ಅಂತಹದರಲ್ಲಿ ವ್ಯವಸ್ಥಿಿತವಾಗಿ ಹಲವು ಬದಲಾವಣೆಗಳನ್ನು ಮಾಡಿಕೊಂಡು ನೂರಾರು ಜನರನ್ನು ನಂಬಿಸಿ ದಾರಿ ತಪ್ಪಿಿಸಿ ದೇಶದ ಶಾಂತಿ ಕದಡುವ ಹುನ್ನಾಾರದೊಂದಿಗೆ ದೇಶದೊಳಗೆ ನುಸುಳುವ ಭಯೋತ್ಪಾಾದಕ ಪ್ರೇರಿತನ್ನು ಆಗಿರುವುದಿಲ್ಲ.

ಕೇವಲ ಮತದಾರರನ್ನಾಾಗಿ ಸಾಕಿಕೊಳ್ಳುವ ದರ್ದು ಮತ್ತು ಖಯಾಲಿ ದೇಶದ್ರೋಹಿ ರಾಜಕಾರಣಿಗಳಿಗೆ ಅವರ ಪಕ್ಷಗಳಿಗೆ ಇರಬಹುದೇ ಹೊರತು ದೇಶಾಭಿಮಾನಿ ಪ್ರಜೆಗಳಿಗಲ್ಲ ಹಾಗೂ ಪ್ರಾಾಮಾಣಿಕ ನಿಷ್ಠಾಾವಂತ ಪೊಲೀಸ್ ಅಧಿಕಾರಿಗಳಿಗೂ ಇರುವುದಿಲ್ಲ. ನೋಡಿ, ನಮ್ಮಲ್ಲಿನ ರಾಜಕಾರಣ ಎಷ್ಟು ಕುಲಗೆಟ್ಟು ಹೋಗಿದೆ ಎಂದರೆ ಹತ್ತು ವರ್ಷ ಪಕ್ಷದೊಳಗಿದ್ದು ಐದು ವರ್ಷಗಳ ಕಾಲ ರಾಜ್ಯ ಮುಖ್ಯಮಂತ್ರಿಿ ಎನಿಸಿದ್ದ ಸಿದ್ದರಾಮಯ್ಯರನ್ನು ಪಕ್ಷದಲ್ಲಿ ಈಗಲೂ ವಲಸಿಗ ಎಂದು ದೂರುತ್ತಾಾರೆ. ಹಾಗಾದರೆ ಅಕ್ರಮ ಬಾಂಗ್ಲಾಾ ವಲಸಿಗರು ಯಾರ ದೊಡ್ಡಮ್ಮನ ಮಕ್ಕಳು? ತಮಗೆ ತಮ್ಮ ಪಕ್ಷಕ್ಕೆೆ ವೋಟ್ ನೀಡುತ್ತಾಾರೆ ಎಂದರೆ ಎಂತಹ ಪರಮಪಾಪಿಗೂ ಆಶ್ರಯ ನೀಡಿ ಅವರಿಗೂ ಆಧಾರ್ ಕಾರ್ಡ್, ಪಡಿತರ ಚೀಟಿ, ವೋಟರ್ ಐಡಿ ಕಾರ್ಡ್‌ಗಳಂತ ಸರಕಾರಿ ಗುರುತಿನ ಚೀಟಿಯನ್ನು ಮಾಡಿಕೊಟ್ಟು ಸಾಕಿಕೊಳ್ಳುವಂಥ ನೀಚ ಕೆಲಸಗಳನ್ನು ಮಾಡುವ ಅನೇಕ ರಾಜಕಾರಣಿಗಳು ಇಂದು ಚಲಾವಣೆಯಲ್ಲಿದ್ದಾಾರೆ.

ಇಂತಹ ಅಕ್ರಮ ವಲಸಿಗರ ತಂಟೆಗೆ ಹೋದರೆ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡು ಸುಮ್ಮನಾಗಿಸುವ ರಾಜಕಾರಣಿಗಳಿರುವುದು ತಿಳಿಯದ ವಿಚಾರವೇನಲ್ಲ. ವ್ಯವಸ್ಥೆೆ ಇಷ್ಟೊೊಂದು ಭಯಾನಕವಾಗಿರುವಾಗ ನಾವುಗಳು ಆಯುಕ್ತರಾದ ಭಾಸ್ಕರ್‌ರಾವ್ ರಂತಹ ಅಧಿಕಾರಿಗಳನ್ನು ಮನ ಪೂರ್ವಕವಾಗಿ ಪ್ರಶಂಸಿಲೇಬೇಕು. ಮತ್ತು ಅವರೊಂದಿಗೆ ನೈತಿಕವಾಗಿ ನಿಲ್ಲಬೇಕು. ಇಂತಹ ಅಧಿಕಾರಿಗಳು ಪ್ರತಿ ಠಾಣೆಗಳಲ್ಲೂ ಇರಬೇಕು. ದೇಶದ ಭದ್ರತೆ ,ಘನತೆ, ಸ್ವಾಾಭಿಮಾನಕ್ಕಿಿಂತ ದೊಡ್ಡದು ಸಮಾಜದಲ್ಲಿ ಯಾವುದೂ ಇಲ್ಲ. ರಾಜಕಾರಣಿಗಳು ಚಲಿಸುವ ಮೋಡವಿದ್ದಂತೆ. ಆದರೆ, ಅಧಿಕಾರಿಗಳು ಸೂರ್ಯಚಂದ್ರರಿದ್ದಂತೆ ಸ್ವಾಾರ್ಥ ರಾಜಕಾರಣಿಗಳೆಂಬ ಕರಿಮೋಡಕ್ಕೆೆ ಹೆದರದೇ ಬೆದರದೇ ಕರ್ತವ್ಯ ನಿರ್ವಹಿಸಿ ಸಮಾಜಕ್ಕೆೆ ಬೆಳಕನ್ನು ನೀಡಿದರೆ ಪ್ರಜೆಗಳೇ ಹೊತ್ತು ಮೆರವಣಿಗೆ ಮಾಡುತ್ತಾಾರೆ.

ಪೂರ್ವ ತಯಾರಿಗಳನ್ನು ಮಾಡಿಕೊಂಡು ಯಾವುದೇ ಕಾರಣಕ್ಕೂ ಗುರಿತಪ್ಪದಂತೆ ವಿಫಲವಾಗದಂತೆ ದಾಳಿ ನಡೆಸಿ ದೇಶವನ್ನು ಆತಂಕದಲ್ಲಿ ದೂಡುತ್ತಿಿದ್ದ ಕಾಲ ಈಗ ಇಲ್ಲ. ಏಕೆಂದರೆ ಕೇಂದ್ರದಲ್ಲಿರುವುದು ‘ಮೋದಿ ಮತ್ತು ಅಮಿತ್ ಶಾ’ ಎಂಬ ಜೋಡಿ ಸಿಂಹಗಳು. ಇದೇ ದೇಶದೊಳಗಿನ ಅನೇಕ ಮೂಲವ್ಯಾಾದಿಗಳಿಗೆ ಕಳವಳಕಾರಿ ವಿಷಯವಾಗಿದೆ. ಇಂತವರನ್ನು ಕಾನೂನಿನ ಅಸ್ತ್ರಗಳ ಮೂಲಕ ಹೆಡೆಮುರಿ ಕಟ್ಟಿಿ ಕ್ರಮಗೊಳ್ಳುವ ಅಧಿಕಾರಿಗಳು ಇಂದು ಸಮಾಜಕ್ಕೆೆ ಅವಶ್ಯಕತೆ ಇದೆ. ನೋಡಿ, ಪೊಲೀಸ್ ಆಯುಕ್ತರಾದ ಭಾಸ್ಕರ್‌ರಾವ್ ಅವರ ನೇತೃತ್ವದಲ್ಲಿ ಈಗ ಮೊದಲ ಬೇಟೆಯಾಗಿ 60 ಮಂದಿ ಅಕ್ರಮ ಬಾಂಗ್ಲಾಾ ಪ್ರಜೆಗಳನ್ನು ಬಂಧಿಸಿ ಅವರಿಗೆ ’ತಾಂಬೂಲ’ ಕೊಟ್ಟು ಗಡಿಪಾರು ಮಾಡುವ ತಯಾರಿ ನಡೆದಿದೆ. ಇದು ಬರಿಯ ಬೆಂಗಳೂರಿನಲ್ಲಿ ಮಾತ್ರವಲ್ಲ ದೇಶದ ಅನೇಕ ಕಡೆ ಇಂತವರ ಸಂಖ್ಯೆೆ ಲಕ್ಷಗಳಲ್ಲಿರುವುದು ಸುಳ್ಳಲ್ಲ. ಶೌಚಾಲಯದ ದುರ್ವಾಸನೆಗೆ ಫೆನಾಯಿಲ್. ಡೆಟಾಲ್ ಆಸಿಡ್ ಸಿಂಪಡಿಸಬೇಕೇ ಹೊರತು ಸುಗಂಧ ಊದಿನಬತ್ತಿಿ ಹಚ್ಚಿಿ ಕೂರುವುದಲ್ಲ. ಅದನ್ನು ಮಾಡಲು ರಾಜಕೀಯವಿರಬಹುದು ಆದರೆ, ಕಾನೂನು ಅಲ್ಲ.