Sunday, 3rd July 2022

ಕೆಎಎಸ್, ಪಿಎಸ್ ಐ, ಎಫ್ ಡಿಎ ಪರೀಕ್ಷೆಗಳಿಗೆ ಉಚಿತ ತರಬೇತಿ

ಬೆಂಗಳೂರು: ಕೆಎಎಸ್, ಪಿಎಸ್ ಐ, ಎಫ್ ಡಿಎ, ಎಸ್ ಡಿಎ, ಪಿಡಿಓ, ಗ್ರೂಪ್ ಸಿ, ಪೊಲೀಸ್ ಕಾನ್‌ಸ್ಟೇಬಲ್ ಹಾಗೂ ಬ್ಯಾಂಕಿಂಗ್ ಪರೀಕ್ಷೆಗಳಿಗೆ ಬೆಂಗಳೂರಿನ ಕೆಆರ್‌ಪುರದಲ್ಲಿರುವ ಇಂಡಿಯನ್ ಐಎಎಸ್ & ಕೆಎಎಸ್ ಕೋಚಿಂಗ್ ಅಕಾಡೆಮಿ ವತಿಯಿಂದ 4 ತಿಂಗಳ ಉಚಿತ ತರಬೇತಿ ನೀಡಲಾಗುತ್ತಿದೆ. ಜೂ.23ರಿಂದ ತರಗತಿಗಳು ಆರಂಭವಾಗುತ್ತಿದ್ದು, ಇಂದಿ ನಿಂದಲೇ ಪ್ರವೇಶ ಪಡೆಯಹುದಾಗಿದೆ.

ಎಲ್ಲಾ ಸಮುದಾಯದ ಅಭ್ಯರ್ಥಿಗಳು ಇದರ ಸದುಪಯೋಗ ಪಡೆದುಕೊಳ್ಳಬಹುದು. ಅಕಾಡಮಿ ಯಲ್ಲಿ ತರಬೇತಿ ನೀಡಲು ಅತ್ಯುತ್ತಮ ಪರಿಣಿತಿಯ ಉಪನ್ಯಾಸಕರನ್ನು ನೇಮಿಸಲಾಗಿದೆ. ಇನ್ನು ನಮ್ಮ ಅಕಾಡಮಿಯಲ್ಲಿ ಉತ್ತಮ ಗ್ರಂಥಾಲಯ ವ್ಯವಸ್ಥೆಯಿದ್ದು, ತರಗತಿಗಳು ಮುಗಿದ ಬಳಿಕ ಗ್ರಂಥಾಲಯ ದಲ್ಲಿ ಕುಳಿತು ಓದಿಕೊಳ್ಳಬಹುದು. ಇನ್ನು ವಿದ್ಯಾರ್ಥಿಗಳಿಗೆ ಅನುಕೂಲವಾಗಲಿ ಎಂದು ಪರೀಕ್ಷೆ ಭಯ ಹೋಗಲಾಡಿಸಲು ಪ್ರತಿ ವಾರ ಟೆಸ್ಟ್ ಗಳನ್ನು ಸಹ ನಡೆಸಲಾಗುವುದು ಎಂದು ಅಕಾಡಮಿಯ ನಿರ್ದೇಶಕ ಭಾಸ್ಕರ್ ರೆಡ್ಡಿ ತಿಳಿಸಿದ್ದಾರೆ.

ವಿಳಾಸ: ಇಂಡಿಯನ್ ಐಎಎಸ್ & ಕೆಎಎಸ್ ಕೋಚಿಂಗ್ ಅಕಾಡೆಮಿ , GRT ಜ್ಯುವೆಲರ್ಸ್ ಎದುರು, ಕೆ.ಆರ್ ‌ಪುರ, ಬೆಂಗಳೂರು-36. ಹೆಚ್ಚಿನ ಮಾಹಿತಿಗಾಗಿ-9902829811 ಸಂಪರ್ಕಿಸಿ.