Monday, 6th February 2023

ತೈಲ ದರ ಲೀಟರ್‌ಗೆ 14 ರೂ. ಇಳಿಕೆ ?

ನವದೆಹಲಿ: ಕೋವಿಡ್ ಬಳಿಕ ಹಾಗೂ ಉಕ್ರೇನ್-ರಷ್ಯಾ ಯುದ್ಧ ಆರಂಭದ ಬಳಿಕ ಕಚ್ಚಾ ತೈಲ ದರ ಪ್ರತಿ ಬ್ಯಾರೆಲ್‌ಗೆ 120 ಡಾಲರ್‌ ಅನ್ನು ದಾಟಿದೆ. ಆದರೆ ಇತ್ತೀಚೆಗೆ ಕಚ್ಚಾತೈಲ ದರ ಇಳಿಕೆಯಾಗಿದೆ. ಇದರಿಂದಾಗಿ, ಪೆಟ್ರೋಲ್ ಹಾಗೂ ಡೀಸೆಲ್ ದರವು ಪ್ರತಿ ಲೀಟರ್‌ಗೆ ಸುಮಾರು 14 ರೂಪಾಯಿ ಇಳಿಕೆಯಾಗುವ ಸಾಧ್ಯತೆಯಿದೆ.

ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾತೈಲ ದರ ಇಳಿಕೆಯಾಗಿದೆ. ಆದರೂ ಭಾರತ ದಲ್ಲಿ ತೈಲ ಕಂಪನಿಗಳು ಪೆಟ್ರೋಲ್ ಹಾಗೂ ಡೀಸೆಲ್ ದರದಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ.

ಪೆಟ್ರೋಲ್ ಪ್ರತಿ ಲೀಟರ್‌ಗೆ 8 ರೂಪಾಯಿ ಹಾಗೂ ಡೀಸೆಲ್ ಪ್ರತಿ ಲೀಟರ್‌ಗೆ 6 ರೂಪಾಯಿ ಕಡಿತಗೊಳಿಸಿದೆ. ಅದಾದ ಬಳಿಕ ಪೆಟ್ರೋಲ್ ಬೆಲೆ 9.50 ರೂಪಾಯಿ ಹಾಗೂ ಡೀಸೆಲ್ ಬೆಲೆ 7 ರೂಪಾಯಿ ಇಳಿಕೆಯಾಗಿದೆ. ಬಳಿಕ ಕೇರಳ, ಮಹಾರಾಷ್ಟ್ರ, ರಾಜಸ್ಥಾನ ಸೇರಿದಂತೆ ಹಲವಾರು ರಾಜ್ಯಗಳು ಇಂಧನದ ಮೇಲಿನ ವ್ಯಾಟ್ ಕಡಿತ ಮಾಡಿದೆ.

ಮೆಟ್ರೋ ನಗರದಲ್ಲಿ ಇಂಧನ ದರ
ಬೆಂಗಳೂರು: ಪೆಟ್ರೋಲ್ ದರ 101.94 ರೂಪಾಯಿ, ಡೀಸೆಲ್ ದರ 87.89 ರೂಪಾಯಿ
ನವದೆಹಲಿ: ಪೆಟ್ರೋಲ್ ದರ 96.72 ರೂಪಾಯಿ, ಡೀಸೆಲ್ ದರ 89.62 ರೂಪಾಯಿ
ಕೋಲ್ಕತ್ತಾ: ಪೆಟ್ರೋಲ್ ದರ 106.03 ರೂಪಾಯಿ, ಡೀಸೆಲ್ ದರ 92.76 ರೂಪಾಯಿ
ಮುಂಬೈ: ಪೆಟ್ರೋಲ್ ದರ 106.31 ರೂಪಾಯಿ, ಡೀಸೆಲ್ ದರ 94.27 ರೂಪಾಯಿ
ಚೆನ್ನೈ: ಪೆಟ್ರೋಲ್ ದರ 102.63 ರೂಪಾಯಿ, ಡೀಸೆಲ್ ದರ 94.24 ರೂಪಾಯಿ

error: Content is protected !!