ಮಧುಗಿರಿ : ತಾಲೂಕಿನಲ್ಲಿರುವ ಸಮಾಜ ಕಲ್ಯಾಣ ಇಲಾಖೆ ಹಾಗೂ ಹಿಂದುಳಿದ ವರ್ಗಗಳ ಇಲಾಖೆಗೆ ಸೇರಿದ ಸರಕಾರಿ ವಸತಿ ಗೃಹಗಳಿಗೆ ಕಡಿಮೆ ವಿದ್ಯುತ್ ದಕ್ಷತೆಯ ಪ್ಲೋರೋಸೆಂಟ್, ಟ್ಯೂಬ್ ಲೈಟ್, ಸಿಎಫ್ಎಲ್ ದೀಪಗಳು ಮತ್ತು ಬಿ.ಎಲ್.ಡಿ.ಸಿ ಫ್ಯಾನ್ಗಳಿಗೆ ಅನುದಾನ ಬಿಡುಗಡೆ ಮಾಡಲಾಗಿದೆ ಎಂದು ತಾ.ಪಂ ಇ.ಒ ದೊಡ್ಡಸಿದ್ದಯ್ಯ ತಿಳಿಸಿದರು.
ಪಟ್ಟಣದ ಬಿ.ಸಿ.ಎಂ ಮೆಟ್ರಿಕ್ ನಂತರದ ಬಾಲಕಿಯರ ವಿದ್ಯಾರ್ಥಿ ನಿಲಯದಲ್ಲಿ ವಿದ್ಯುತ್ ಪರಿಕರಗಳನ್ನು ವೀಕ್ಷಿಸಿ ಮಾತನಾಡಿ ದ ಅವರು, ಬೆಟ್ಟದ ತಪ್ಪಲಿನಲ್ಲಿರುವ ವಿದ್ಯಾರ್ಥಿ ನಿಲಯಗಳಿಗೆ ಇತ್ತೀಚೆಗೆ ಕಾಡು ಪ್ರಾಣಿಗಳ ಕಾಟ ಹೆಚ್ಚಾಗುತ್ತಿರುವ ಹಿನ್ನೆಲೆ ಯಲ್ಲಿ ಮೂಲಸೌಕರ್ಯ ಒದಗಿಸಲು ಕ್ರಮ ಕೈಗೊಳ್ಳಲಾಗಿದೆ. ಸ್ಥಳೀಯ ಪ್ರಾದೇಶಿಕ ಅಭಿವೃದ್ಧಿ ನಿಗಮ ಹಾಗೂ ಕೆ.ಆರ್.ಇ.ಡಿ.ಎಲ್ ವತಿಯಿಂದ 9 ಲಕ್ಷ ರೂ ಅನುದಾನ ಬಿಡುಗಡೆ ಮಾಡಲಾಗಿದೆ. ಈ ಕೆಲಸ ಕಾರ್ಯಗಳು ಜರೂರಾಗಿ ಮಾಡಬೇಕೆಂದರು.
ತಾ.ಪಂ ಸದಸ್ಯ ರಂಗನಾಥ್ ಮಾತನಾಡಿ. ತಾಲೂಕು ಅತ್ಯಂತ ಹಿಂದುಳಿದ ಪ್ರದೇಶವಾಗಿದ್ದು ಸರ್ಕಾರದಿಂದ ಅನುದಾನ ಬರುವುದು ಕಷ್ಟಕರವಾಗಿದ್ದು ಕೆ.ಆರ್.ಇ.ಡಿ.ಎಲ್ ವ್ಯವಸ್ಥಾಪಕ ನಿರ್ದೇಶಕ ಡಾ.ಎಚ್.ಬಿ.ಬೂದಪ್ಪ ನವರ ಸಹಾಯದಿಂದ ತಾಲ್ಲೂಕಿನ ಹಾಸ್ಟಲ್ಗಳಿಗೆ ಅನುದಾನ ಬಿಡುಗಡೆಯಾಗಿರುವುದು ವಿದ್ಯಾರ್ಥಿಗಳಿಗೆ ಸಾಕಷ್ಟು ಅನುಕೂ¯ವಾಗಲಿದೆ ಎಂದರು.
ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಹರೀಶ್, ಬಿ.ಸಿ.ಎಂ ಇಲಾಖೆ ವಿಸ್ತರಣಾಧಿಕಾರಿ ಕೆ.ಎಂ.ಜಯರಾಮಯ್ಯ, ತಾಲ್ಲೂಕು ಸರ್ಕಾರಿ ನೌಕರರ ಸಂಘದ ಖಜಾಂಚಿ ಚಿಕ್ಕರಂಗಪ್ಪ, , ಗುತ್ತಿಗೆದಾರ ವಿ.ಶಂಕರ್, ಕೆ.ಎಸ್.ಧನಂಜಯ , ಅನಂದ್ ಮತ್ತಿತರರು ಇದ್ದರು.