Monday, 16th May 2022

ನಾನೇನು ನಿಮ್ಮ ವೈರಿನಾ? ದೊಡ್ಡದಾಗಿ ಹೆಸರು ಬರೆಸಿ ಹಾಕಿ: ಸಂಸದ ಜಿ.ಎಂ.‌ಸಿದ್ದೇಶ್ವರ‌

ದಾವಣಗೆರೆ: ಸಂಸದರ ಅನುದಾನದಲ್ಲಿ ಕೈಗೊಂಡ ಕಾಮಗಾರಿಗಳಲ್ಲಿ ನನ್ನ ಹೆಸರು ಸಣ್ಣದಾಗಿ ಹಾಕುತ್ತಿದ್ದಾರೆ. ನಾನೇನು ನಿಮ್ಮ ವೈರಿನಾ ಎಂದು ಸಂಸದ ಜಿ.ಎಂ.‌ಸಿದ್ದೇಶ್ವರ‌ ಅಧಿಕಾರಿಗಳನ್ನು ಪ್ರಶ್ನಿಸಿದ್ದಾರೆ.

ದಾವಣಗೆರೆ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಸಂಸತ್ ಸದಸ್ಯರ ಸ್ಥಳೀಯ ಪ್ರದೇಶಾಭಿವೃದ್ಧಿ ಅನುದಾನದಡಿ ಕೈಗೊಂಡ ಕಾಮಗಾರಿಗಳ ಕುರಿತು, ಸಂಸದ್ ಆದರ್ಶ ಗ್ರಾಮ ಯೋಜನೆಯ ಪ್ರಗತಿ ಪರಿಶೀಲನಾ ಸಭೆಯನ್ನುದ್ದೇಶಿಸಿ ಮಾತನಾಡಿದರು.

ಶಾಸಕರ ಅನುದಾನದಲ್ಲಿ ಕೈಗೊಂಡ ಕಾಮಗಾರಿ ನಾಮಫಲಕದಲ್ಲಿ ಶಾಸಕರಾದ ರೇಣುಕಾಚಾರ್ಯ,ಮಾಡಾಳ್ ವಿರೂಪಾಕ್ಷಪ್ಪ, ಎಸ್. ರಾಮಪ್ಪ ಅವರು ಹೆಸರನ್ನು ದೊಡ್ಡದಾಗಿ ಬರೆಸಿಕೊಳ್ಳುತ್ತಾರೆ. ಆದರೆ, ನನ್ನ ಅನುದಾನದಲ್ಲಿ ಕೈಗೊಂಡ ಕಾಮಗಾರಿಯಲ್ಲಿ ಅಧಿಕಾರಿಗಳು ನನ್ನ ಹೆಸರು ಸಣ್ಣ ಬರೆಸುತ್ತಾರೆ. ನಾನೇನು ನಿಮ್ಮ ವೈರಿನಾ..? ದೊಡ್ಡದಾಗಿ ಹೆಸರು ಬರೆಸಿ ಹಾಕಿ ಎಂದು ನಿರ್ಮಿತಿ ಕೇಂದ್ರದ ಅಧಿಕಾರಿಗಳಿಗೆ ಸೂಚಿಸಿದರು.