Friday, 18th June 2021

ಪತ್ರಕರ್ತ ಜಿ.ಎನ್.ನಾಗರಾಜ್ ನಿಧನ

ಪಾವಗಡ : ತಾಲೂಕಿನ ಪತ್ರಕರ್ತ ಹಾಗೂ ಸಂಪಾದಕರಾಗಿದ್ದ ಜಿ.ಎನ್ ನಾಗರಾಜ್  ಅನಾರೋಗ್ಯದಿಂದ ಶುಕ್ರವಾರ ದವಾಡಬೆಟ್ಟ ಗ್ರಾಮದ ಸ್ವ ಗ್ರಾಮದಲ್ಲಿ ನಿಧನ ರಾಗಿದ್ದಾರೆ.
ಇವರಿಗೆ ಪತ್ನಿ ಹಾಗೂ ತಂದೆ ತಾಯಿ ಹಾಗೂ ಇಬ್ಬರು ತಮ್ಮಂದಿರನ್ನು ಅಗಲಿದ್ದಾರೆ. ಹಲವು ರಾಜ್ಯ ಹಾಗೂ ಜಿಲ್ಲಾ ಪತ್ರಿಕೆಗಳಲ್ಲಿ ವರದಿಗಾರರಾಗಿ ಕೆಲಸ ಮಾಡಿದ್ದಾರೆ.ವಿವಿಧ ಪ್ರಶಸ್ತಿಗಳನ್ನು ಸಹ ಪಡೆದಿದ್ದರು.
ಇವರ ನಿಧನಕ್ಕೆ ಸ್ಥಳೀಯ ಶಾಸಕರಾದ ವೆಂಕಟರ ಮಣಪ್ಪ, ಮಾಜಿ ಶಾಸಕ ತಿಮ್ಮಾರಾಯಪ್ಪ ಹಾಗೂ ಕಾರ್ಯನಿರತ ಪತ್ರಕರ್ತ ಸಂಘದ ಅಧ್ಯಕ್ಷ ಹನಮಂತರಾಯಪ್ಪ, ಜಿಲ್ಲಾ ಪತ್ರಕರ್ತ ಸಂಘದ ಉಪಾಧ್ಯಕ್ಷ ಎಸ್.ಎನ್.ಪ್ರಸನ್ನ ಮೂರ್ತಿ, ತಾಲ್ಲೂಕು ಕನ್ನಡ ಪರಿಷತ್ತಿನ  ಅಧ್ಯಕ್ಷರ ಆರ್ .ಟಿ.ಖಾನ್ .ಸಣ್ಣ ನಾಗಪ್. ಮತ್ತು ಪತ್ರಕರ್ತರುಗಳಾದ ಜಯಸಿಂಹ. ಗೋಪಾಲ್ ನಾಯ್ಕ್.ವಡ್ಡೆ ಶ್ರೀನಿವಾಸ್.ರಾಮಾಂಜಿ.ಕೆ.ಪಿ.ಎನ್.ನಾಗೇಂದ್ರ.ಹಲವು ಮಂದಿ ಸಂತಾಪ ವ್ಯಕ್ತಪಡಿಸಿದ್ದಾರೆ .

Leave a Reply

Your email address will not be published. Required fields are marked *