Tuesday, 17th May 2022

ಬಿಜೆಪಿಯ ಗಣಪತಿ ಉಳ್ವೇಕರ್ ಗೆ ಗೆಲುವು

ಶಿರಸಿ/ಕಾರವಾರ: ವಿಧಾನ ಪರಿಷತ್ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಗಣಪತಿ ಉಳ್ವೇಕರ್ ಗೆಲುವು ಸಾಧಿಸಿದ್ದಾರೆ.

ಕಾಂಗ್ರೆಸ್ ನ ಭೀಮಣ್ಣ ನಾಯ್ಕ ವಿರುದ್ಧ 170ಕ್ಕೂ ಅಧಿಕ ಮತಗಳಿಂದ ಬಿಜೆಪಿ ಅಭ್ಯರ್ಥಿ ಉಳ್ವೇಕರ್ ವಿಜಯ ಸಾಧಿಸಿದ್ದಾರೆ. ಗಣಪತಿ ಉಳ್ವೇಕರ್ 1514 ಮತಗಳನ್ನು ಪಡೆದಿದ್ದರೇ ಕಾಂಗ್ರೆಸ್ ನ ಭೀಮಣ್ಣ ನಾಯ್ಕ ಅವರಿಗೆ 1331 ಮತಗಳು ಬಂದಿದೆ.

ಕೊನೆವರೆಗೂ ಕಾಂಗ್ರೆಸ್ ಬಿಜೆಪಿ ನಡುವೆ ಏರ್ಪಟ್ಟಿದ್ದ ನೇರಾ ನೇರ ಹಣಾಹಣಿಯಲ್ಲಿ ಕೊನೆಗೂ ಬಿಜೆಪಿಯ ಗಣಪತಿ ಈ ಭಾರಿ ಗೆಲುವು ಕಂಡಿದ್ದಾರೆ.