Tuesday, 17th May 2022

ಮಗುವಿನ ಮೇಲೆ ಗ್ಯಾಂಗ್ ರೇಪ್, ಹತ್ಯೆ: ನಾಲ್ವರ ಬಂಧನ

ಮಂಗಳೂರು: ಮಗುವಿನ ಮೇಲೆ ಗ್ಯಾಂಗ್ ರೇಪ್ ನಡೆಸಿ, ಹತ್ಯೆಗೈದು ಪರಾರಿಯಾಗಿದ್ದ ನಾಲ್ವರು ಕಾಮುಕರನ್ನು ಮಂಗಳೂರು ಪೊಲೀಸರು ಬಂಧಿಸಿ ದ್ದಾರೆ.

ಬಂಧಿತರು ಮಧ್ಯಪ್ರದೇಶ ಹಾಗೂ ಜಾರ್ಖಂಡ್ ಮೂಲದವರು ಎಂದು ತಿಳಿದುಬಂದಿದೆ. ನ.21ರಂದು ಸಂಜೆ ಬಾಲಕಿಯನ್ನು ಅಪಹರಿಸಿದ್ದ ಆರೋಪಿ ಗಳು ಟೈಲ್ಸ್ ಫ್ಯಾಕ್ಟರಿ ಆವರಣದಲ್ಲಿ ಪೈಶಾಚಿಕ ಕೃತ್ಯವೆಸಗಿ ಬಳಿಕ ಮೃತದೇಹವನ್ನು ಫ್ಯಾಕ್ಟರಿ ಡ್ರೈನೇಜ್ ಗೆ ಬಿಸಾಕಿ ಹೋಗಿದ್ದರು.

ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದ ಮಂಗಳೂರು ಪೊಲೀಸರು ಫ್ಯಾಕ್ಟರಿಯಲ್ಲಿಯೇ ಕೆಲಸ ಮಾಡುತ್ತಿದ್ದ 20 ಜನರನ್ನು ವಿಚಾರಣೆ ನಡೆಸಿದ್ದರು. ಈ ವೇಳೆ ನಾಲ್ವರನ್ನು ಬಂಧಿಸಿದ್ದಾರೆ.