Tuesday, 21st March 2023

ವಿಹಾರ ಕ್ರೂಸ್ ಎಂವಿ ಗಂಗಾ ವಿಲಾಸ್‌’ಗೆ ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಚಾಲನೆ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಶುಕ್ರವಾರ ಉತ್ತರ ಪ್ರದೇಶದ ವಾರಣಾಸಿಯಲ್ಲಿ ವಿಶ್ವದ ಅತಿ ಉದ್ದದ ನದಿ ವಿಹಾರ ಕ್ರೂಸ್ ಎಂವಿ ಗಂಗಾ ವಿಲಾಸ್‌’ಗೆ ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಚಾಲನೆ ನೀಡಿದರು.
32 ಸ್ವಿಸ್ ಪ್ರವಾಸಿಗರು ಬಾಂಗ್ಲಾದೇಶದ ಮೂಲಕ ಅಸ್ಸಾಂನ ದಿಬ್ರುಗಢ ವನ್ನು ತಲುಪಲು ಮೊದಲ ಪ್ರಯಾಣವನ್ನು ಇದರ ಮೂಲಕ ಕೈಗೊಂಡಿ ದ್ದಾರೆ. ಇದರೊಂದಿಗೆ ಮೋದಿ ಅವರು 1,000 ಕೋಟಿ ರೂಗೂ ಹೆಚ್ಚು ಮೌಲ್ಯದ ಹಲವಾರು ಒಳನಾಡು ಜಲಮಾರ್ಗ ಯೋಜನೆಗಳಿಗೆ ಮೋದಿ ಅವರು ಅಡಿಪಾಯ ಹಾಕಿದರು.
ಎಂವಿ ಗಂಗಾ ವಿಲಾಸ್ ಭಾರತದಲ್ಲಿ ತಯಾರಾದ ಮೊದಲ ವಿಹಾರ ನೌಕೆಯಾಗಿದ್ದು, ಇದು 51 ದಿನಗಳಲ್ಲಿ 3,200 ಕಿ.ಮೀ ಕ್ರಮಿಸಲಿದೆ. ಮೊದಲ ಪ್ರಯಾಣವನ್ನು ಕೈಗೊಳ್ಳಲಿರುವ ಸ್ವಿಟ್ಜರ್ಲೆಂಡ್ನ 32 ಪ್ರವಾಸಿಗ ರನ್ನು ವಾರಣಾಸಿ ಬಂದರಿನಲ್ಲಿ ಹೂಮಾಲೆ ಮತ್ತು ಶೆಹನಾಯಿ ನಾದ ದೊಂದಿಗೆ ಸ್ವಾಗತಿಸಲಾಯಿತು.
ಅವರು ವಿಹಾರಕ್ಕೆ ತೆರಳುವ ಮೊದಲು ವಾರಣಾಸಿಯ ವಿವಿಧ ಧಾರ್ಮಿಕ ಮತ್ತು ಐತಿಹಾಸಿಕ ಸ್ಥಳಗಳಿಗೆ ಭೇಟಿ ನೀಡುತ್ತಾರೆ.
ಈ ಪಂಚತಾರಾ ಚಲಿಸುವ ಹೋಟೆಲ್ 36 ಪ್ರವಾಸಿಗರ ಸಾಮರ್ಥ್ಯದೊಂದಿಗೆ 18 ಸೂಟ್ಗಳನ್ನು ಹೊಂದಿದೆ ಎಂದು ಕ್ರೂಸ್‌ನ ನಿರ್ದೇಶಕ ರಾಜ್ ಸಿಂಗ್ ತಿಳಿಸಿದರು. ಇದಲ್ಲದೆ, ಇದು 40 ಸಿಬ್ಬಂದಿಗೆ ವಸತಿ ಹೊಂದಿದೆ. ಆಧುನಿಕ ಹಡಗು 62 ಮೀಟರ್ ಉದ್ದ ಮತ್ತು 12 ಮೀಟರ್ ಅಗಲವಿದೆ. ಇದು 27 ನದಿ ವ್ಯವಸ್ಥೆಗಳ ಮೂಲಕ ಪ್ರವಾಸಿಗರನ್ನು ಕರೆದೊಯ್ಯುತ್ತದೆ ಮತ್ತು ವಿವಿಧ ಪ್ರಮುಖ ಸ್ಥಳಗಳ ಮೂಲಕ ಪ್ರಯಾಣಿಸುತ್ತದೆ.
error: Content is protected !!