Friday, 3rd February 2023

ಉದ್ಯಾನವನ ಅಭಿವೃದ್ದಿ ಸೂಕ್ತ ಕ್ರಮ: ಪುರಸಭೆ ಅಧ್ಯಕ್ಷ ತಿಮ್ಮರಾಜು

ಮಧುಗಿರಿ : 2ನೇ ವಾರ್ಡ್ನಲ್ಲಿ ಉದ್ಯಾನವನ ಅಭಿವೃದ್ದಿ ಪಡಿಸುವ ಮೂಲಕ ಉತ್ತಮ ವಾತಾವರಣ ನಿರ್ಮಿಸಲಾಗುವುದು ಎಂದು ಪುರಸಭೆ ಅಧ್ಯಕ್ಷ ತಿಮ್ಮರಾಜು ತಿಳಿಸಿದರು.

ಪಟ್ಟಣದ ಎರಡನೇ ವಾರ್ಡ್ನಲ್ಲಿ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಸದಸ್ಯರ ನಡಿಗೆ ವಾರ್ಡ್ ಕಡೆಗೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು 15 ನೇ ಹಣಕಾಸು ಯೋಜನೆ ಯಡಿ 2ಲಕ್ಷ ರೂ. ವೆಚ್ಚದಲ್ಲಿ ಡೆಕ್ ನಿರ್ಮಾಣ ಹಾಗೂ 4 ಲಕ್ಷ ರೂ. ವೆಚ್ಚದಲ್ಲಿ ಪಾರ್ಕ ಅಭಿವೃದ್ದಿಗೆ ಗುದ್ದಲಿ ಪೂಜೆ ನಡೆಸಲಾಗಿದೆ.ಮುಂದಿನ ದಿನಗಳಲ್ಲಿ ಈ ವಾರ್ಡ್ನ ರಸ್ತೆ ಸಮಸ್ಯೆ ಬಗೆ ಹರಿಸುವು ದಾಗಿ ತಿಳಿಸಿದರು.

ಪುರಸಭೆ ಸದಸ್ಯ ಎಂ.ವಿ ಗೋವಿಂದರಾಜು ಮಾತನಾಡಿ ಬೆಳಗ್ಗೆ 9 ರಿಂದ ಸಂಜೆ 5 ರವರೆಗೆ ಪರಸಭೆಯ ಅಧಿಕಾರಿಗಳು, ಸಿಬ್ಬಂದಿ ವರ್ಗ ಸ್ಥಳದಲ್ಲಿದ್ದು ನಾಗರೀಕರ ಸಮಸ್ಯೆಗಳನ್ನು ಆಲಿಸಿ ಪರಿಹರಿಸಲಾಗುವುದು ಎಂದರು.

ಮುಖ್ಯಾಧಿಕಾರಿ ಅಮರನಾರಾಯಣ, ಪುರಸಭೆ ಉಪಾಧ್ಯಕ್ಷೆ ರಾಧಿಕ, ಸದಸ್ಯರಾದ ಎಂ.ಎಸ್. ಚಂದ್ರಶೇಖರ್, ಜೆ. ನರಸಿಂಹ ಮೂರ್ತಿ, ಎಂ.ಎಸ್ ಚಂದ್ರಶೇಖರ್ ಬಾಬು, ಜೆ.ಇ ಶ್ರೀರಂಗಯ್ಯ, ವ್ಯವಸ್ಥಾಪಕಿ ವಸಂತಕುಮಾರಿ ಹಾಗೂ ಸಿಬ್ಬಂದಿ ವರ್ಗ ಹಾಜರಿ ದ್ದರು.

error: Content is protected !!