Sunday, 14th August 2022

ಟೋಲ್ ಗೇಟ್​ನಲ್ಲಿ ಗ್ಯಾಸ್​ ಟ್ಯಾಂಕರ್​ ಕಾರು ಡಿಕ್ಕಿ: ಮೂವರ ದುರ್ಮರಣ

ಚಿತ್ರದುರ್ಗ: ಟೋಲ್ ಗೇಟ್​ನಲ್ಲಿ ನಿಂತಿದ್ದ ಗ್ಯಾಸ್​ ಟ್ಯಾಂಕರ್​ ಕಾರು ಡಿಕ್ಕಿಯಾಗಿದ್ದು, ಕಾರಿನಲ್ಲಿದ್ದ ಮೂವರು ಸ್ಥಳದಲ್ಲೇ ದುರ್ಮರಣಕ್ಕೀಡಾದ ಘಟನೆ ಹಿರಿಯೂರು ತಾಲೂಕಿನ ಗುಯಿಲಾಳುನಲ್ಲಿ ಸಂಭವಿಸಿದೆ.

ಗುರುವಾರ ಗುಯಿಲಾಳು ಟೋಲ್​ ಗೇಟ್​ನಲ್ಲಿ ಗ್ಯಾಸ್​ ಟ್ಯಾಂಕರ್​ ನಿಂತಿತ್ತು. ವೇಗವಾಗಿ ಬಂದ ಕಾರು ಹಿಂಬದಿಯಿಂದ ಟ್ಯಾಂಕರ್​ಗೆ ಡಿಕ್ಕಿ ಹೊಡೆದಿದೆ. ಡಿಕ್ಕಿ ಹೊಡೆದ ರಭಸಕ್ಕೆ ಕಾರು ನಜ್ಜುಗುಜ್ಜಾಗಿದ್ದು, ಕಾರಿನಲ್ಲಿದ್ದ ಮೂವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮೃತದೇಹಗಳನ್ನು ಕಾರಿನಿಂದ ಹೊರ ತೆಗೆಯಲು ಪೊಲೀಸರು ಹರಸಾಹಸಪಟ್ಟರು.

ಮೃತರ ಗುರುತು ಇನ್ನೂ ಪತ್ತೆ ಆಗಿಲ್ಲ. ಮೃತದೇಹಗಳನ್ನು ಸ್ಥಳೀಯ ಶವಾಗಾರಕ್ಕೆ ರವಾನಿಸಲಾಗಿದೆ. ಬೀಕರ ಅಪಘಾತದ ದೃಶ್ಯ ಕಂಡ ಸ್ಥಳೀಯರು ಬೆಚ್ಚಿಬಿದ್ದಿದ್ದಾರೆ. ಐಮಂಗಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.