Wednesday, 1st December 2021

ಐಎಂಎಫ್ ಮುಖ್ಯಸ್ಥೆ ಸ್ಥಾನ ತ್ಯಜಿಸಲಿದ್ದಾರೆ ಗೀತಾ ಗೋಪಿನಾಥ್

ವಾಷಿಂಗ್ಟನ್: ಅಂತಾರಾಷ್ಟ್ರೀಯ ಹಣಕಾಸು ನಿಧಿ ಸಂಸ್ಥೆ ಐಎಂಎಫ್ ಮುಖ್ಯಸ್ಥೆ ಕರ್ನಾಟಕ ಮೂಲದ ಗೀತಾ ಗೋಪಿನಾಥ್ ತಮ್ಮ ಸ್ಥಾನ ತ್ಯಜಿಸಲಿದ್ದಾರೆ.

ಗೀತಾ ಗೋಪಿನಾಥ್ ಅವರು ಐ.ಎಂ.ಎಫ್ ನಲ್ಲಿ ಸಂಶೋಧನಾ ವಿಭಾಗದ ಮುಖ್ಯಸ್ಥರಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು. 2018ರಲ್ಲಿ ನಿಯುಕ್ತಿಗೊಂಡಿ ದ್ದರು. ಐ.ಎಂ.ಎಫ್ ಮುಖ್ಯಸ್ಥ ಹುದ್ದೆಯಲ್ಲಿ ಗೀತಾ ಅವರು ಮೂರು ವರ್ಷ ಸೇವೆ ಸಲ್ಲಿಸಿದ್ದಾರೆ.

ಐ.ಎಂ.ಎಫ್ ವ್ಯವಸ್ಥಾಪಕ ನಿರ್ದೇಶಕಿ ಜಾರ್ಜೀವಾ, ಕೊರೊನಾ ಸಂದರ್ಭ ಗೀತಾ ಅವರು ನಿರ್ವಹಿಸಿದ ಜವಾಬ್ದಾರಿ ಅನನ್ಯವಾದುದು ಎಂದು ಅವರು ಗೀತಾ ಅವರ ಕೆಲಸಕ್ಕೆ ಮೆಚ್ಚುಗೆ ಸೂಚಿಸಿದ್ದಾರೆ. ಗೀತಾ ಗೋಪಿನಾಥ್ ಅವರು ಹಾರ್ವರ್ಡ್ ವಿಶ್ವವಿದ್ಯಾಲಯದ ಉಪನ್ಯಾಸಕ ಹುದ್ದೆಗೆ ಮರಳಲಿದ್ದಾರೆ.

ಈ ಹಿಂದೆ ಐ.ಎಂ.ಎಫ್ ವ್ಯವಸ್ಥಾಪಕ ನಿರ್ದೇಶಕಿ ಜಾರ್ಜಿವಾ ಅವರ ಮೇಲೆ ಆಪಾದನೆಗಳು ಕೇಳಿಬಂದಿದ್ದವು. ಅವರು ಪ್ರಭಾವಿ ದೇಶಗಳ ಬ್ಯಾಂಕುಗಳ ಪರ ತಮಗೆ ಬೇಕಾದಂತೆ ದಾಖಲೆ ತಿದ್ದಲು ಆರ್ಥಿಕ ತಜ್ಞರ ಮೇಲೆ ಒತ್ತಡ ಹೇರುತ್ತಿರುವುದಾಗಿ ಆಪಾದನೆ ಮಾಡಲಾಗಿತ್ತು.