Monday, 3rd October 2022

ವಿಗ್ರಹ ಕಳವಾಗಿದ್ದು ತಮಿಳುನಾಡಿನಲ್ಲಿ, ನ್ಯೂಯಾರ್ಕ್‌ನಲ್ಲಿ ಪತ್ತೆ

ಚೆನ್ನೈ: ತಮಿಳು ನಾಡಿನ ದೇವಾಲಯದಿಂದ 50 ವರ್ಷಗಳ ಹಿಂದೆ ಕಳುವಾಗಿದ್ದ ಪಾರ್ವತಿ ವಿಗ್ರಹವನ್ನು ರಾಜ್ಯ ಪೊಲೀಸರು ನ್ಯೂಯಾರ್ಕ್‌ನ ಹರಾಜಿನಲ್ಲಿ ಪತ್ತೆ ಹಚ್ಚಿದ್ದಾರೆ.

1971ರ ಮೇ 12ರಂದು ಕುಂಬಕೋಣಂನಲ್ಲಿನ ನಾದನಪುರೇಶ್ವರ ದೇವಾಲಯದಲ್ಲಿ ಕಳುವಾಗಿದ್ದ 5 ವಿಗ್ರಹಗಳ ಪೈಕಿ ಪಾರ್ವತಿ ವಿಗ್ರಹವು ಒಂದಾಗಿತ್ತು. ವಿಗ್ರಹಗಳ ಪತ್ತೆಗಾಗಿ ಪೊಲೀಸರು ಸಾಕಷ್ಟು ಪರಿಶ್ರಮ ಪಟ್ಟಿದ್ದರು. ಈಗ ನ್ಯೂಯಾರ್ಕ್‌ ನಲ್ಲಿನ ಬೊನ್‌ ಹ್ಯಾಮ್ಸ್ ಹರಾಜು ಕೇಂದ್ರ ದಲ್ಲಿ ವಿಗ್ರಹ ಪತ್ತೆಯಾಗಿದೆ.

ಪೊಲೀಸರು 1972ರ ಯುನೆಸ್ಕೊದ ವಿಶ್ವ ಪಾರಂಪರಿಕ ಸಮಾವೇಶದಡಿ ಭಾರತಕ್ಕೆ ಮತ್ತೆ ತರಲು ಪ್ರಕ್ರಿಯೆ ಕೈಗೊಂಡಿದ್ದಾರೆ.