Wednesday, 1st December 2021

ಗಣಿ ಉದ್ಯಮಿ ಗೊಗ್ಗ ಸಿದ್ರಾಮಯ್ಯ ನಿಧನ

ಬಳ್ಳಾರಿ; ದಾನಿ, ವೀರಶೈವ ಸಮಾಜದ ಮುಖಂಡ, ಗಣಿ ಉದ್ಯಮಿ ಗೊಗ್ಗ ಸಿದ್ರಾಮಯ್ಯ (76) ಅವರು ತೀವ್ರ ಹೃದಯಾಘಾತ ದಿಂದ ಬೆಂಗಳೂರಿನಲ್ಲಿ ಮೃತಪಟ್ಟಿದ್ದಾರೆ.

ಹೊಸಪೇಟೆ ಸಮೀಪದ ಇಂಗಳಗಿ ಗ್ರಾಮದಲ್ಲಿ ಇರುವ `ಸಾಯಿ ಶರಣ ಫಾರಂ’ನಲ್ಲಿ ವೀರಶೈವ ವಿಧಿ ಸಂಪ್ರದಾಯಗಳ ಪ್ರಕಾರ ಅಂತ್ಯಕ್ರಿಯೆ ನೆರವೇರಿತು.

ಶುಕ್ರವಾರ ಬೆಂಗಳೂರಿನ ಅಪೋಲೋ ಆಸ್ಪತ್ರೆಯಲ್ಲಿ ತೀವ್ರ ಹೃದಯಾಘಾತಕ್ಕೆ ಒಳಗಾಗಿ ನಿಧನರಾದರು. ಹೊಸಪೇಟೆ ಸಮೀಪದ ಇಂಗಳಗಿ ಗ್ರಾಮದಲ್ಲಿಯ `ಸಾಯಿ ಶರಣ ಫಾರಂ’ನಲ್ಲಿ ವೀರಶೈವ ವಿಧಿ ಸಂಪ್ರದಾಯಗಳ ಪ್ರಕಾರ ಶುಕ್ರವಾರ ಸಂಜೆ ಅಂತ್ಯಕ್ರಿಯೆ ನೆರವೇರಿತು.

ಮೃತರು ಪತ್ನಿ, ಪುತ್ರ ಹಾಗೂ ಮೂವರು ಹೆಣ್ಣು ಮಕ್ಕಳನ್ನು, ಅಪಾರ ಸಂಖ್ಯೆಯ ಬಂಧುವರ್ಗವನ್ನು, ಮಿತ್ರರನ್ನು ಅಗಲಿದ್ದಾರೆ.