Saturday, 27th February 2021

ಮಂತ್ರಿ ಮಾಡಿ, ಇಲ್ಲ ಸರ್ಕಾರ ವಿಸರ್ಜಿಸಿ

ಓದುಗರ ಓಣಿ

ಲತಾ ಆರ್‌.

ಬಿಜೆಪಿ 105 ಸ್ಥಾನ ಪಡೆದು ದೊಡ್ಡ ಪಕ್ಷವಾಗಿದ್ದರೂ, 113 ಮ್ಯಾಜಿಕ್ ನಂಬರ್ ತಲುಪದ ಕಾರಣ ಸರಕಾರ ರಚನೆ ಮಾಡುವುದಕ್ಕೆ ಸಾಧ್ಯವಾಗಿರಲಿಲ್ಲ. ಇದು ನಾಡಿನ ಬಹಳಷ್ಟು ಜನರಿಗೆ ಹಾಗೂ ಪಕ್ಷದ ಕಾರ್ಯಕರ್ತರಿಗೂ ಭಾರಿ ನೋವು ಉಂಟುಮಾಡಿತು.

ಆದರೆ, 17 ಜನ ಅನ್ಯ ಪಕ್ಷದ ಶಾಸಕರು ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಟ್ಟ ಕಾರಣ, ಬಿಜೆಪಿಗೆ ಸರಕಾರ ರಚಿಸುವುದಕ್ಕೆ  ಸದಾವಕಾಶ ಲಭಿಸಿತು. ಅಂದರೆ ಬಿಜೆಪಿಗೆ ಸರಕಾರ ರಚನೆ ಮಾಡಲು ಅವಕಾಶ ದೊರೆತ್ತಿದ್ದು, ಬಿಜೆಪಿಯ 105 ಶಾಸಕರಿಂದಲ್ಲ. ಮುನಿರತ್ನರಂತೆ ಕಾಂಗ್ರೆಸ್-ಜೆಡಿಎಸ್‌ನ 17 ಜನ ಶಾಸಕರು ರಾಜೀನಾಮೆ ಕೊಟ್ಟಿದ್ದರಿಂದ. ಆದ್ದರಿಂದ ಈ ಸರಕಾರದಲ್ಲಿ ಮೊದಲು ಮಂತ್ರಿಯಾಗುವುದಕ್ಕೆ  ಆದ್ಯತೆ ನೀಡಬೇಕಾಗಿರುವುದು ಆ 17 ಜನ ಶಾಸಕರಿಗೆ. ಆದ ಕಾರಣ ಬಿಜೆಪಿ ಯಾವುದೇ ಜವಾಬು ಹೇಳದೇ, ಮೊದಲು ಮುನಿರತ್ನಂರವರನ್ನ ಮಂತ್ರಿ ಮಾಡಿ. ಇಲ್ಲ ಅಂದರೆ ಸರಕಾರ ವಿರ್ಸಜನೆ ಮಾಡಿ.

ಪ್ರಸುತ್ತ ಬಿಜೆಪಿ ಸರಕಾರದಲ್ಲಿ ನಿಷ್ಠಾವಂತ ಕಾರ್ಯಕರ್ತ, ಹಲವು ಭಾರಿ ಗೆದ್ದಂತಹ ಶಾಸಕ, ಹಿರಿಯ ನಾಯಕ ಈ ಎಲ್ಲಾ ಆಧಾರ ಗಳ ಮೇಲೆ ಸಾಕಷ್ಟು ಶಾಸಕರು ಸಚಿವರಾಗಿದ್ದಾರೆ. ಇವತ್ತು ಬಿಜೆಪಿ ಅಧಿಕಾರದಲ್ಲಿ ಇರುವುದು ಪಕ್ಷದ ನಾಯಕರ ಸಿನ್ಸಯಾರಿಟಿ, ಸಿನಿಯಾರಿಟಿ ಯಿಂದಲ್ಲ. ಬದಲಾಗಿ ಮುನಿರತ್ನರಂತೆ 17 ಶಾಸಕರು ರಾಜೀನಾಮೆ ಕೊಟ್ಟು, ಶಾಸಕರ ಸ್ಥಾನ ತ್ಯಾಗ ಮಾಡಿದ್ದ ರಿಂದ ಬಿಜೆಪಿ ಇಂದು ಅಧಿಕಾರದಲ್ಲಿದೆ.

ಎಂ.ಟಿ.ಬಿ ನಾಗರಾಜ್‌ರವರು ಮಂತ್ರಿ ಪದವಿಗೆ ರಾಜೀನಾಮೆ ಕೊಟ್ಟು, ಬಿಜೆಪಿಗೆ ಬಂದರು, ಅಂತವರನ್ನು ನಿಮ್ಮ ಪಕ್ಷದವರೇ ಸೋಲಿಸಿಬಿಟ್ಟರು. ಇದಕ್ಕಿಂತ ದುರಂತ ಬೇ ರೊಂದು ಇದೆಯಾ? ಚುನಾವಣೆಗಳಲ್ಲಿ ನಿಂತು ಗೆಲ್ಲುವುದು ಎಂದರೆ ಅದೊಂದು ಮಹಾನ್ ಸಾಹಸ. ಅಂತಹದರಲ್ಲಿ ಗೆದ್ದಿರೋ ಸ್ಥಾನಕ್ಕೆ ರಾಜೀನಾಮೆ ಕೊಟ್ಟು, ಮತ್ತೆ ಚುನಾವಣೆ ಎದುರಿಸುವುದು ಅಂದರೆ ಗಟ್ಟಿತನ ಬೇಕು ಮತ್ತು ಜನನಾಯಕರಾಗಿರಬೇಕು.

ಅಂತಹ ಒಂದು ಧೈರ್ಯವಂತಿಕೆ ಹಾಗೂ ಜನಬೆಂಬಲ ಮುನಿರತ್ನರವರಿಗೆ ಇತ್ತು. ಕ್ಷೇತ್ರದ ಜನತೆಗೆ ಅವರ ಮಾಡಿರುವ ಜನಪರ ಕೆಲಸದ ಬಗ್ಗೆ ಅಪಾರವಾದ ಗೌರವ ಇದೆ. ಅವರಿಗೆ ಯಾವುದೇ ಪಕ್ಷದ ಬೆಂಬಲವಿಲ್ಲದಿದ್ದರೂ ಪಕ್ಷೇತರವಾಗಿ ನಿಂತು ಗೆದ್ದು ಬರುವ ಶಕ್ತಿ ಅವರಿಗಿದೆ. ಚುನಾವಣೆ ಪ್ರಚಾರದ ವೇದಿಕೆಯಲ್ಲಿ ಮಾನ್ಯ ಮುಖ್ಯಮಂತ್ರಿಗಳು ಮುನಿರತ್ನರವರನ್ನು ಈ ಬಾರಿ ಸರಕಾರದಲ್ಲಿ ಮಂತ್ರಿ ಮಾಡಲಾಗುವುದೆಂದು ಆರ್.ಆರ್.ನಗರದ ಜನತೆಗೆ ಪ್ರಚಾರದ ಮೂಲಕ ಭರವಸೆ ನೀಡಿದ್ದರು.

ಮಂತ್ರಿಮಂಡಲದಿಂದ ಮುನಿರತ್ನರವರನ್ನು ಹೊರಗಿಟ್ಟಿರುವುದು, ಅದು ಕೇವಲ ಮುನಿರತ್ನರ ವರಿಗೆ ಮಾಡಿದ ನ್ಯಾಯವಲ್ಲ,
ಇಡೀ ಆರ್.ಆರ್. ನಗರದ ಜನತೆಗೆ ಮಾಡಿದ ದ್ರೋಹ. ಈಗಾಲೂ ಕಾಲ ಮಿಂಚಿಲ್ಲ, ಆದಷ್ಟು ಬೇಗ ಮುನಿರತ್ನರವರನ್ನು ಮಂತ್ರಿಮಂಡಲಕ್ಕೆ ಸೇರಿಸಿಕೊಳ್ಳುವುದರ ಮೂಲಕ ತಮ್ಮ ತಪ್ಪನ್ನು ಸರಿಪಡಿಸಿಕೊಳ್ಳಿ, ಇಲ್ಲ ಅಂದರೆ ಬಿಜೆಪಿ ಇದಕ್ಕೆ ಭಾರಿ ಬೆಲೆತೆರಬೇಕಾಗುತ್ತದೆ.

ಎಲ್.ಕೆ.ಅಡ್ವಾಣಿ ಯವರ ಉಗ್ರ ಹಿಂದೂತ್ವ ಹಾಗೂ ಪರಿಶ್ರಮದಿಂದ ಮೊದಲ ಬಾರಿಗೆ ಕೇಂದ್ರದಲ್ಲಿ ಬಿಜೆಪಿ ಅಧಿಕಾರದ ಬಾಗಿಲಿಗೆ ಬಂತು. ಆದರೆ, ಸರಕಾರ ರಚನೆ ಮಾಡುವುದಕ್ಕೆ ಸಾಕಾಗುವಷ್ಟು ಸಂಖ್ಯಾ ಬಲ ಇರಲಿಲ್ಲ. ಅಡ್ವಾಣಿಯವರಿಗೆ ಆ ಚುನಾವಣೆ ಸಂದರ್ಭದಲ್ಲಿ ದೇಶದ ಜನತೆ ಪ್ರಧಾನಿಯಾಗಲಿ ಎಂದೇ ಬಿಜೆಪಿಗೆ ಆಶೀರ್ವಾದ ಮಾಡಿದ್ದರು.

ಅಡ್ವಾಣಿಯವರು ಪ್ರಧಾನಿ ಮಂತ್ರಿಯಾಗುವುದಕ್ಕೆ ಮುಂದಾಗಿದ್ದರೆ, ಕೇಂದ್ರದಲ್ಲಿ ಸರಕಾರ ರಚನೆ ಮಾಡಲು ಸಾಧ್ಯವಾಗು ತ್ತಿರಲಿಲ್ಲ. ಏಕೆಂದರೆ ಅವರು ಉಗ್ರ ಹಿಂದೂತ್ವವಾದಿ ಎನ್ನುವ ಕಾರಣಕ್ಕೆ ಕಾಂಗ್ರೆಸೇತರ ಪಕ್ಷಗಳು ಬೆಂಬಲ ಕೊಡುತ್ತಿರಲಿಲ್ಲ. ಇದ
ನ್ನು ಅರಿತೇ ಅಡ್ವಾಣಿಯವರು ಪ್ರಧಾನಿ ಪಟ್ಟದಿಂದ ಹಿಂದೆ ಸರಿದು, ವಾಜಪೇಯಿ ಅಂತ ಸೌಮ್ಯ ವ್ಯಕ್ತಿಯನ್ನು ಪ್ರಧಾನಿ ಅಭ್ಯರ್ಥಿಯಾಗಿ ಘೋಷಣೆ ಮಾಡಿದ್ದರು. ಆ ಮೂಲಕ ಅನ್ಯ ಪಕ್ಷಗಳ ಬೆಂಬಲ ಪಡೆದುಕೊಂಡು ಕೇಂದ್ರದಲ್ಲಿ ಮೊದಲ ಬಾರಿಗೆ ಬಿಜೆಪಿ ಸರಕಾರ ಬರುವುದಕ್ಕೆೆ ಶ್ರಮಿಸಿದರು. ಅಂದು ಅಡ್ವಾಣಿಯವರಿಗೆ ತಾನು ಪ್ರಧಾನಿಮಂತ್ರಿಯಾಗುವುದಕ್ಕಿಂತ ಪಕ್ಷ ಅಧಿಕಾರಕ್ಕೆ ಬರುವುದು ಮುಖ್ಯ ಧ್ಯೇಯ ಆಗಿತ್ತು.

ಪಕ್ಷದಲ್ಲಿರುವ ಬಿಜೆಪಿ ನಾಯಕರಿಗೆ, ಶಾಸಕರಿಗೆ, ಈಗ ಮಂತ್ರಿಯಾಗಿ ರುವವರಿಗೆ ನಿಜವಾಗಲೂ ಅಡ್ವಾಣಿಯವರ ಬಗ್ಗೆ ಗೌರವ ಇದ್ದರೆ, ಪಕ್ಷದ ಬಗ್ಗೆೆ ನಿಷ್ಠೆ ಇದ್ದರೆ, ಬಿಜೆಪಿ ಕರ್ನಾಟಕದಲ್ಲಿ ಅಧಿಕಾರಕ್ಕೆ ಬರುವುದಕ್ಕೆ ತಮ್ಮ ಶಾಸಕ ಸ್ಥಾನವನ್ನು ತ್ಯಾಗ ಮಾಡಿ ದವರಲ್ಲಿ ಒಬ್ಬರಾಗಿರುವ ಮುನಿರತ್ನರವರನ್ನು ಮೊದಲು ಮಂತ್ರಿ ಮಾಡಿ.

Leave a Reply

Your email address will not be published. Required fields are marked *