Thursday, 3rd December 2020

ತಂಬಾಕಿನ ಉತ್ಪನ್ನಗಳ ನಿಷೇಧಿಸುವ ಸರ್ಕಾರದ ನಿರ್ಧಾರ ಸರಿಯಲ್ಲ: ದೀಪಕ್ ದೊಡ್ಡುರು

ಶಿರಸಿ: ತಂಬಾಕಿನ ಉತ್ಪನ್ನಗಳನ್ನು ನಿಷೇಧ ಮಾಡುವ ಕುರಿತು ಸರಕಾರ ಚಿಂತಿಸುತ್ತಿದೆ ಎಂಬುದು ಮಾಧ್ಯಮಗಳ ಮೂಲಕ ಪ್ರಚಾರ ಪಡೆಯುತ್ತಿದೆ. ಆದರೆ, ಹೀಗೆ ಸರ್ಕಾರವು ಏಕಾಏಕಿ ಒಮ್ಮೆಲೆ ಈ ಬಗೆಯ ದಿಢೀರ್ ನಿರ್ಧಾರ ಕೈಗೊಳ್ಳಬಾರದು ಎಂದು ಜಿಲ್ಲಾ ಕಾಂಗ್ರೆಸ್ ವಕ್ತಾರ ಶ್ರೀ ದೀಪಕ್ ದೊಡ್ಡುರು ತಿಳಿಸಿದ್ದಾರೆ.
ತಂಬಾಕಿನ ಉತ್ಪನ್ನಗಳೊಂದಿಗೆ ಅಡಿಕೆ ಉಪಯೋಗವೂ ಬೆಸೆದಿದೆ. ಲಕ್ಷಾಂತರ ಕುಟುಂಬಗಳು ಅಡಿಕೆಯನ್ನು ಆಧರಿಸಿ ಬದುಕು ಕಟ್ಟಿಕೊಂಡಿದೆ. ಮಲೆನಾಡು ಹಾಗೂ ಕರಾವಳಿಯ ಆರ್ಥಿಕತೆಯೇ ಅಡಿಕೆಯನ್ನು ಆಧರಿಸಿದೆ.. ಅಡಿಕೆಯೇನೂ ಆರೋಗ್ಯಕ್ಕೆ ಹಾನಿಯಲ್ಲ. ಆದರೆ, ಸರ್ಕಾರ ದಿಢೀರ್ ಆಗಿ ತಂಬಾಕನ್ನು ನಿಷೇಧಿಸಿದರೆ, ಅಡಿಕೆ ಕೃಷಿಯನ್ನು ಆಧರಿಸಿದ ಎಲ್ಲರಿಗೂ ಬರೆ ಬೀಳಬಹುದು. ಆದ್ದರಿಂದ, ಯಾವುದೇ ನಿರ್ಧಾರಕ್ಕೆ ಬರುವ ಮುನ್ನ ವ್ಯಾಪಕ ಚರ್ಚೆಯಾಗಬೇಕಿದೆ ಎಂದು ಅವರು ಹೇಳಿದ್ದಾರೆ.
ಸರ್ಕಾರವು ಕೃಷಿಕರ ಹಾಗೂ ಅಡಿಕೆ ಮಾರುಕಟ್ಟೆ ವ್ಯವಹಾರದಲ್ಲಿ ತೊಡಗಿಕೊಂಡಿರುವ ಸಹಕಾರಿ ಸಂಘಟನೆಗಳೊಂದಿಗೆ ಈ ಕುರಿತಾಗಿ ಸಮಾಲೋಚನೆ ನಡೆಸಬೇಕು.ಅಡಿಕೆ ಬದಲಿ ಉತ್ಪನ್ನಗಳಾದ ಚಹಾ, ಪಾನ್ masala, ಮೌತ್ ಫ್ರೆಶ್ನೆರ್, ಔಷದಿ ಇತ್ಯಾದಿ ಗಲ್ಲೆದರ ಕುರಿತು ಸರ್ಕಾರ ಸೂಕ್ತ ಪ್ರೋತ್ಸಾಹ ಯೋಜನೆಗಳನ್ನು ಜಾರಿಗೆ ತರಬೇಕು.ರಾಷ್ಟ್ರೀಯ ಹಾಗೂ ಅಂತಾ ರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಈ ಬಗೆಯ ಅಡಿಕೆಯ ಸುರಕ್ಷಿತ ಉತ್ಪನ್ನಗಳು ಆದ್ಯತೆ ಪಡೆದ ಮೇಲೆ, ತಂಬಾಕು ನಿಷೇದದ ಕುರಿತು ಚಿಂತನೆ ಮಾಡಲು ಸಾಧ್ಯವಾಗಬಹುದು.
ಹೀಗಾಗಿ, ಈ ಕುರಿತು ಸರ್ಕಾರ ಯಾವುದೇ ದಿಢೀರ್ ನಿರ್ಧಾರ ಕೈಗೊಳ್ಳದೇ, ಅಡಿಕೆ ಕೃಷಿಕರೊಂದಿಗೆ ಶೀಘ್ರ ಸಮಾಲೋಚನೆ ಕೈಗೊಳ್ಳಬೇಕೆಂದು ದೊಡ್ಡೂರು ಆಗ್ರಹಿಸಿದ್ದಾರೆ.

Leave a Reply

Your email address will not be published. Required fields are marked *