Monday, 3rd October 2022

ಸರಕಾರದ ಜಮೀನು ರಕ್ಷಣೆ ಮಾಡಬೇಕು

ಇಂಡಿ: ಇಂಡಿ ಪಟ್ಟಣದಲ್ಲಿ ಬ್ರಿಟೀಷ ಸರಕಾರದ ಮುಂಬೈ ಗವರ‍್ನರ್ ಮೂಲಕ ೧೯೨೪ ರಲ್ಲಿ ಅಂದರೆ ೯೮ ವರ್ಷಗಳ ಹಿಂದೆ ಬರಗಾಲ ನಿವಾರಣಾ ಸಂಸ್ಥೆ ಹುಟ್ಟು ಹಾಕಿ ಇಂಡಿ ಪಟ್ಟಣದ ಹಿರೇ ಇಂಡಿ ಹತ್ತಿರದಲ್ಲಿ ೧೩ ಎಕರೆ ಹಾಗೂ ೫ ಎಕರೆ ಒಟ್ಟು ೧೮ ಎಕರೆ ಜಮೀನು ಪಶು ಪೋಷಣೆಗಾಗಿ ಜಮೀನು ಮೀಸಲಾಗಿಡಲಾಗಿತ್ತು.

ತದನಂತರ ತೋಟಗಾರಿಕೆ ಇಲಾಖೆಗೆ ಜಮೀನು ಬಿಟ್ಟುಕೊಡಲಾಗಿತ್ತು. ಆದರೆ ಸರಕಾರದ ಆಸ್ತಿ ಇಂದು ಸಾರ್ವಜನಿಕ ವಲಯ ದಲ್ಲಿ ಪರಭಾರೆ ಮಾಡುತ್ತಿದ್ದು, ಸರಕಾರದ ೧೮ ಎಕರೆ ಜಮೀನು ವಯಕ್ತಿ ಆಸ್ತಿ ಮಾಡಿಕೊಂಡಿರುವುದು ದುರಂತ ಎಂದು ಶಾಸಕ ಯಶವಂತರಾಯಗೌಡ ಪಾಟೀಲ ಸದನದಲ್ಲಿ ಸದನದ ಸಭಾಪತಿ ಮೂಲಕ ತೋಟ ಗಾರಿಕೆ ಸಚಿವರ ಗಮನ ಸೆಳೆದರು.

ಅಂದು ಪ್ರಜಾಪ್ರಭುತ್ವ ಇಲ್ಲದಕ್ಕಾಗಿ ಬರಗಾಲ ನಿವಾರಣೆ ಸಂಸ್ಥೆ ಹುಟ್ಟು ಹಾಕಿ ಜಾಗ ನೀಡಲಾಗಿದೆ. ಆದರೆ ಇಂದು ಪ್ರಜಾಪ್ರಭುತ್ವ ದೇಶ ಇರುವುದರಿಂದ ಬರಗಾಲ ನಿವಾರಣೆ ಗಾಗಿ ತೋಟಗಾರಿಕೆ,ಕೃಷಿ ಇತರೆ ಇಲಾಖೆ ಮೂಲಕ ಬರ ನಿವಾರಣೆಗೆ ಸರ್ಕಾರ ಕ್ರಮ ಕೈಗೊಳ್ಳುತ್ತಿದೆ. ಇಂದು ಬರಗಾಲ ನಿವಾರಣೆ ಸಂಸ್ಥೆಯ ಕೆಲಸವೇ ಇಲ್ಲ. ಸರ್ಕಾರದ ಜಮೀನು ಒಂದು ಯವಕ್ತಿಕ ಸಂಸ್ಥೆಯ ಮೂಲಕ ಬೆರೊಬ್ಬರು ಬಳಕೆ ಮಾಡಿಕೊಳ್ಳು ತ್ತಿದ್ದಾರೆ. ೧೮ ಎಕರೆ ಜಮೀನದಲ್ಲಿ ತೋಟಗಾರಿಕೆ ಇಲಾಖೆಯ ಮೂಲಕ ನರ್ಸರಿ ಮಾಡ ತೊಟಗಾರಿಕೆ ಬೆಳೆ ಉತ್ತೇಜನ ಮಾಡಲು ಬರುತ್ತದೆ. ಈ ರೀತಿ ಇಂಡಿಯಲ್ಲಿಯೂ ಹಾಗೂ ವಿಜಯಪುರದಲ್ಲಿಯೂ ಆಗಿದೆ.

ಕಲಬುರಗಿ ಹೈಕೊರ್ಟದಲ್ಲಿ ೨೦೧೬ ರಲ್ಲಿ ಪೈಲ್ ಆಗಿದೆ. ೬ ವರ್ಷ ಆಗಿದೆ. ಇಲ್ಲಿಯವರೆಗೆ ಸ್ಪಂಧನೆಯಾಗಿರುವುದಿಲ್ಲ. ಸರ್ಕಾರದ ಆಸ್ತಿ ಉಳಿಸಿಕೊಳ್ಳಲು ಪ್ರಯತ್ನ ಮಾಡದಿದ್ದರೆ ಹೇಗೆ,ಈ ಜಮೀನು ಪ್ರಾಯೋಗಿಕ ಪಶು ಶಾಲೆ ಮಾಡಲು ಈ ಜಮೀನು ನೀಡ ಲಾಗಿದೆ. ಯಾವ ಉದ್ದೇಶಕ್ಕಾಗಿ ಇಟ್ಟುಕೊಂಡಿದ್ದೇವೆಯೊ ಅದು ಬಳಕೆ ಆಗುತ್ತಿಲ್ಲ.

ಮಧ್ಯಪ್ರವೇಶಿಸಿದ ಬಸವನಬಾಗೇವಾಡಿ ಶಾಸಕ ಶಿವಾನಂದ ಪಾಟೀಲ ಮಾತನಾಡಿ, ವಿಜಯಪೂರ ಹಾಗೂ ಇಂಡಿ ಬರಗಾಲ ನಿವಾರಣಾ ಸಂಸ್ಥೆ ಇರುವುದು ಸತ್ಯ. ಆದರೆ ಅದು ಇಂದು ಉಳಿದಿಲ್ಲ .೨೦೧೯ರಲ್ಲಿ ಜಿಲ್ಲಾಧಿಕಾರಿಗಳ ನೈತೃತ್ವದಲ್ಲಿ ಒಂದು ಕಮೀಟಿ ಮಾಡಿದ್ದಾರೆ. ಆದರೆ ಡಿ.ಸಿ ನೈತೃವದಲ್ಲಿ ಇಲ್ಲಿಯವರಿಗೂ ಒಂದು ಮೀಟಿಂಗ್ ನಡೆದಿರುವುದಿಲ್ಲ. ಜಿಲ್ಲೆಯಲ್ಲಿ ಬರಗಾಲ ನಿವಾರಣಾ ಸಂಸ್ಥೆಯ ಕಟ್ಟಡ ಖಾಲಿ ಇದ್ದು ಹಾಳಾಗುತ್ತಿದೆ ಎಂದು ಸರಕಾರದ ಗಮನ ಸೆಳೆದರು. ವಿಜಯಪುರ ಜಿಲ್ಲೆಯ ಶಾಸಕರ ಸಭೆ ಕರೆಯಲಿ ಬರಗಾಲ ನಿವಾರಣೆ ಸಂಸ್ಥೆಯಿ೦ದ ಎಂದು ಸಲಹೆ ನೀಡಿದರು.

೨೦೧೬ರಲ್ಲಿ ಸರಕಾರಿ ಜಮೀನುಗಳ ಕುರಿತು ವ್ಯಾಜ್ಯ ನ್ಯಾಯಾಲಯದಲ್ಲಿರುವುದರಿಂದ ೬ ವರ್ಷಗಳಿಂದ ಕೋರ್ಟ ನಡೆದಿದೆ. ಆದರೆ ಇಲ್ಲಿಯವರೆಗೂ ಒಂದು ಹಂತಕ್ಕೆ ಬಂದಿಲ್ಲ .ಸರ್ಕಾರದ ವಕೀಲರನ್ನು ಹಾಗೂ ಕಾನೂನು ಸಚಿವರ ಸಲಹೆ ಪಡೆದು ಕೊಂಡು ಕ್ರಮ ಕೈಗೊಳ್ಳಲಾಗುತ್ತದೆ ಎಂದು ತೋಟಗಾರಿಕೆ ಸಚಿವ ಮುನಿರತ್ನ ಅವರು ಉತ್ತರಿಸಿದರು.

ಇದಕ್ಕೆ ವಿಧಾನಸಭಾ ಅಧ್ಯಕ್ಷ ವಿಶ್ವೇಶ್ವರಯ್ಯ ಹೆಗಡೆ ಕಾಗೇರಿ ಅವರು, ಸರಕಾರಿ ಜಮೀನು ಕೂಡಲೆ ಇತ್ಯರ್ಥಪಡಿಸಿ. ಸಚಿವರು ಈ ಪ್ರಕರಣ ಚಾಲೆಂಜಾಗಿ ತಗೆದುಕೊಂಡು ಕೂಡಲೆ ಇತ್ಯರ್ಥ ಪಡಿಸಬೇಕು. ಸರಕಾರದ ಜಮೀನು ರಕ್ಷಣೆ ಮಾಡಬೇಕು. ಸರಕಾರ ಸ್ವಾದೀನ ಪಡೆಯುವಂತೆ ಮಾಡಿ ಎಂದು ಸಚಿವರಿಗೆ ವಿಧಾನ ಸಭಾ ಅಧ್ಯಕ್ಷ ಕಾಗೇರಿಯವರು ಸೂಚಿಸಿದರು.