Monday, 16th May 2022

ಜನವರಿ 26ರಿಂದ ಮನೆ ಬಾಗಿಲಿಗೆ ಸರ್ಕಾರದ ಯೋಜನೆ ತಲುಪಿಸುವ ಕೆಲಸ: ಬೊಮ್ಮಾಯಿ ಘೋಷಣೆ

Bommai

ದಾವಣಗೆರೆ: ಜನವರಿ 26ರಿಂದ ಸರ್ಕಾರದ ಯೋಜನೆಗಳನ್ನು ಮನೆಯ ಬಾಗಿಲಿಗೆ ತಲುಪಿಸುವ ಕೆಲಸ ಮಾಡಲಿದ್ದೇವೆ. ಇದರ ಭಾಗವಾಗಿ ಪಡಿತರ ಧಾನ್ಯಗಳನ್ನು ಫಲಾನುಭವಿಗಳ ಮನೆ ಭಾಗಿಲಿಗೆ ತಲುಪಿಸೋ ಕೆಲಸ ಮಾಡಲಾಗುತ್ತದೆ ಎಂಬುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಘೋಷಣೆ ಮಾಡಿದ್ದಾರೆ.

ಇಂದಿನ ಜಿಲ್ಲಾಧಿಕಾರಿ ನಡೆ ಹಳ್ಳಿಯ ಕಡೆ ಕಾರ್ಯಕ್ರಮದಲ್ಲಿ ಸರ್ಕಾರದ ಸೌಲಭ್ಯಗಳು ವಿಧಾನಸೌಧದಲ್ಲಿ ಇರುವುದಿಲ್ಲ. ಜನರ ಬಳಿಗೆ ಒಯ್ಯುವ ಕಾರ್ಯವನ್ನು ಮಾಡುವ ನಿಟ್ಟಿನಲ್ಲಿ ಈ ಘೋಷಣೆಯಾಗಿದೆ.

ಜಿಲ್ಲೆಯ ನ್ಯಾಮತಿ ತಾಲೂಕಿನ ಸುರಹೊನ್ನೆಯಲ್ಲಿ ಜಿಲ್ಲಾಧಿಕಾರಿ ನಡೆ ಹಳ್ಳಿ ಕಡೆ ಗ್ರಾಮ ವಾಸ್ತವ್ಯ ಕಾರ್ಯ ಕ್ರಮಕ್ಕೆ ಚಾಲನೆ ನೀಡಿದ ಬಳಿಕ ಸುದ್ದಿಗಾರ ರೊಂದಿಗೆ ಮಾತನಾಡಿ, ನಿಮ್ಮ ರೇಷನ್ ನಿಮ್ಮ ಮನೆ ಬಾಗಿಲಿಗೆ ಕೊಡುವ ವ್ಯವಸ್ಥೆ ಮಾಡಲಾಗುತ್ತಿದೆ. ಅದಕ್ಕಾಗಿ ಎಲ್ಲಾ ರೀತಿಯ ಸಿದ್ಧತೆ ಮಾಡಿಕೊಳ್ಳ ಲಾಗುತ್ತಿದೆ ಎಂದರು.

ಪ್ರತಿ ಗ್ರಾಮ ಪಂಚಾಯ್ತಿಗಳಲ್ಲಿಯೂ ಎಲ್ಲಾ ಸರ್ಟಿಫಿಕೇಷ್ ಸಿಗುವಂತ ವ್ಯವಸ್ಥೆ ಮಾಡುವ ಉದ್ದೇಶ ನಮ್ಮದಾ ಗಿದೆ. ಪ್ರಾಯೋಗಿಕವಾಗಿ ನವೆಂಬರ್ 1ರಿಂದ ಜನಸೇವಕ ಕಾರ್ಯಕ್ರಮಗಳನ್ನು ಬೆಂಗಳೂರಿನ 28 ಕ್ಷೇತ್ರಗಳಲ್ಲಿ ಮಾಡಲಾಗುತ್ತದೆ. ಬಳಿಕ ಜನವರಿ 26ರಿಂದ ರಾಜ್ಯಕ್ಕೆ ವಿಸ್ತರಣೆಯಾಗ ಲಿದೆ ಎಂದರು.