Tuesday, 21st March 2023

ಗ್ರಾ.ಪಂ ಉಪಾಧ್ಯಕ್ಷರಾಗಿ ಮೋಮಿನ್ ಆಯ್ಕೆ

ಕೋಲಾರ: ತಾಲ್ಲೂಕಿನ ಕೂಡಗಿ ಗ್ರಾ.ಪಂ ಉಪಾಧ್ಯಕ್ಷ ಸ್ಥಾನಕ್ಕೆ ಸೋಮ ವಾರ ನಡೆದ ಚುನಾವಣೆಯಲ್ಲಿ ರಾಜನಬಿ.ದ ಮೋಮೀನ್ ಅವಿರೋಧವಾಗಿ ಉಪಾಧ್ಯಕ್ಷರಾಗಿ ಆಯ್ಕೆಯಾದರು.

ಒಟ್ಟು ೨೦ ಸದಸ್ಯರನ್ನು ಹೊಂದಿರುವ ಕೂಡಗಿ ಗ್ರಾ.ಪಂ ನಲ್ಲಿ ೧೯ ಸದಸ್ಯರು ಚುನಾವಣಾ ಪ್ರಕ್ರಿಯೆಯಲ್ಲಿ ಭಾಗವಹಿಸಿದ್ದರು ಒಬ್ಬ ಸದಸ್ಯರು ಗೈರಾಗಿದ್ದರು, ಹಾಜರಿದ್ದ ೧೯ ಸದಸ್ಯರು ರಾಜನಬಿ ಮೋಮಿನ್ ಪರ ಮತ ಚಲಾಯಿಸಿದರು. ವಿರುದ್ಧವಾಗಿ ಯಾರು ಸ್ಪರ್ಧಿಸದ ಕಾರಣ ಚುನಾವಣಾ ಅಧಿಕಾರಿ ತಾಲ್ಲೂಕ ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಎಫ್.ಎಸ್ ಪಠಾಣ ರಾಜನಬಿ ಮೋಮಿನ್ ಅವರನ್ನು ಉಪಾಧ್ಯಕ್ಷ ಸ್ಥಾನದ ವಿಜೇತ ಅಭ್ಯರ್ಥಿಯನ್ನಾಗಿ ಘೋಷಣೆ ಮಾಡಿದರು.

ರಾಜನಬಿ ಮೋಮಿನ್ ಉಪಾಧ್ಯಕ್ಷರಾಗಿ ಆಯ್ಕೆಯಾಗುತ್ತಿದ್ದಂತೆ ಅವರ ಬೆಂಬಲಿಗರು ಪಟಾಕಿ ಸಿಡಿಸಿ ಸಿಹಿ ಹಂಚಿ ಸಂಭ್ರಮಿಸಿ ದರು.

ಈ ಸಂದರ್ಭದಲ್ಲಿ ಗ್ರಾ.ಪಂ ಅಧ್ಯಕ್ಷೆ ಶೇಕುಬಾಯಿ ರಾಠೋಡ, ರಜಾಕ ಕೊಳ್ಳಿ, ಭರಮಣ್ಣ ಬಿದರಿ, ಮಹಮ್ಮದಆರೀಪ ತಾಳಿಕೋಟಿ, ನಬಿಸಾಬ ಬಿರಾದಾರ, ಪರಶುರಾಮ ಕುಬಕಡ್ಡಿ, ಅರುಣ ನಾಯಕ, ಈರಪ್ಪ ಮನಗೂಳಿ ಇತರರು ಇದ್ದರು.

error: Content is protected !!