Monday, 16th May 2022

ದಾಸರಕಲ್ಲಳ್ಳಿ ಗ್ರಾಮಪಂಚಾಯತ್‌ ಕಾರ್ಯದರ್ಶಿ ಸಾವು

ಶಿವಮೊಗ್ಗ: ಭದ್ರಾವತಿ ತಾಲೂಕಿನ ನಾಗತಿಬೆಳಗಲು ಗ್ರಾಮದಲ್ಲಿ‌ ನಾಲ್ಕು ದಿನಗಳ ಹಿಂದೆ ನಡೆದ ಮದುವೆಯಲ್ಲಿ ಊಟ ಮಾಡಿ ಅಸ್ವಸ್ಥಗೊಂಡ ಹಲವರ ಪೈಕಿ ಸೋಮವಾರ ದಾಸರಕಲ್ಲಳ್ಳಿ ಗ್ರಾಮಪಂಚಾಯತ್‌ ಕಾರ್ಯರ್ಶಿ ಮೃತಪಟ್ಟಿದ್ದಾರೆ.

ದಿನೇಶ್ ಸಿಂಗ್ ಮೃತ ದುರ್ದೈವಿ. ನಾಗತಿಬೆಳಗಲು ಗ್ರಾಮದ ಕಲ್ಯಾಣಮಂಟಪದಲ್ಲಿ ನಡೆದ ಮದುವೆಯಲ್ಲಿ ಊಟ ಮಾಡಿದ 150ಕ್ಕೂ ಹೆಚ್ಚು ಮಂದಿ ಅಸ್ವಸ್ಥರಾಗಿದ್ದರು. ಈ ಪೈಕಿ ಚಿಕಿತ್ಸೆ ಫಲಿಸದೇ ದಿನೇಶ್ ಸಿಂಗ್ ಮೃತಪಟ್ಟಿದ್ದಾರೆ.

ಅರದೊಟ್ಲು ಗ್ರಾಮದ ನಿವಾಸಿಯ ಮದುವೆ ನಾಗತಿಬೆಳಗಲು ಗ್ರಾಮದ ಕಲ್ಯಾಣ ಮಂಟಪ ದಲ್ಲಿ ನಡೆದಿತ್ತು. ಈ ಮದುವೆಯಲ್ಲಿ ಭಾಗಿಯಾಗಿ ಊಟ ಮಾಡಿದವರಲ್ಲಿ ಕಾಣಿಸಿಕೊಂಡ ವಾಂತಿ, ಬೇದಿ, ಹೊಟ್ಟೆನೋವು, ತಲೆಸುತ್ತು, ಜ್ವರ ಕಾಣಿಸಿಕೊಂಡಿದೆ. ಅಸ್ವಸ್ಥರು ಹೊಳೆ ಹೊನ್ನೂರು, ಭದ್ರಾವತಿ ಹಾಗೂ ಮೆಗ್ಗಾನ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ವಧುವಿನ ಸಂಬಂಧಿಕರು ಹಾವೇರಿ ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದಾರೆ.