ತುಮಕೂರು: ಕೇಂದ್ರ ಸರಕಾರ ಜಾರಿಗೆ ತಂದಿರುವ ಕೇಂದ್ರ ಮತ್ತು ರಾಜ್ಯ ಜಿ.ಎಸ್ಟಿ ವ್ಯವಸ್ಥೆ ಕೇವಲ ದೊಡ್ಡ ಡೀಲರ್ಗಳಿಗೆ ಅನುಕೂಲವಾಗಿದ್ದು, ಸಣ್ಣ ಡೀಲರ್ಗಳಿಗೆ ಇದರಿಂದ ಅನಾನುಕೂಲವಾಗಿರುವ ಕಾರಣ ಇವರಿಗೆ ರಿಯಾಯಿತಿ ತೋರಿಸುವಂತೆ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಉಪಾಧ್ಯಕ್ಷ ಟಿ.ಜೆ. ಗಿರೀಶ್ ಮನವಿ ಮಾಡಿಕೊಂಡರು.
ನಗರದ ಸದಾಶಿವ ನಗರದ ರಿಂಗ್ ರಸ್ತೆ ಸಮೀಪ ವಿರುವ ಕೇಂದ್ರ ತೆರಿಗೆ ಇಲಾಖೆ ಉಪವಿಭಾಗಾಧಿಕಾರಿಗಳ ಕಚೇರಿ ಮುಂದೆ ಪ್ರತಿ ಭಟನೆ ನಡೆಸಿ, ಜಿತೇಂದ್ರ ಕುಮಾರ್ ಮೀನಾ ಅವರಿಗೆ ಮನವಿ ಸಲ್ಲಿಸಿ, ಮಾತನಾಡಿದರು.
ಈ ರಿಯಾಯಿತಿ ಬಗ್ಗೆ ದೇಶದ ನಮ್ಮ ಅನೇಕ ಸಂಘ ಟನೆಗಳು ಮನವಿ ಪತ್ರ ಸಲ್ಲಿಸಿ, ಮನವಿ ಮಾಡಿಕೊಳ್ಳಲಾಗಿದ್ದು, ಸರ್ಕಾರ ಇದನ್ನು ಪರಿಗಣಿಸಿಲ್ಲ ಎಂದರು. ಇಂದು ಇಡಿ ದೇಶದಲ್ಲಿ ಈ ಸಂಬಂಧ ಪ್ರತಿಭಟನೆ ನಡೆಯುತ್ತಿದ್ದು, ಇದಕ್ಕೆ ನಮ್ಮ ಜಿಲ್ಲಾ ಸಂಘ ಬೆಂಬಲ ವ್ಯಕ್ತಪಡಿಸಿದೆ ಎಂದರು.
ಕೇಂದ್ರ ತೆರಿಗೆ ಇಲಾಖೆ ಉಪವಿಭಾಗಾಧಿಕಾರಿ ಜಿತೇಂದ್ರ ಕುಮಾರ್ ಮೀನಾ ಅವರ ಮೂಲಕ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತ ರಾಮನ್ ಅವರಿಗೆ ಮನವಿ ಯನ್ನು ಸಲ್ಲಿಸಲಾಯಿತು.
ಜಿಲ್ಲಾ ಘಟಕದ ಅಧ್ಯಕ್ಷ ಎಂ.ಎನ್.ಲೋಕೇಶ್, ಮಾಜಿ ಅಧ್ಯಕ್ಷ ಟಿ.ಆರ್.ಲೋಕೇಶ್, ಕಾರ್ಯದರ್ಶಿ ಟಿ.ಟಿ.ಸತ್ಯ ನಾರಾಯಣ, ಎನ್,ಎಸ್.ಶ್ರೀಧರ್, ಕರ ಅಭ್ಯಾಸಗಾರರ ಸಂಘದ ಅಧ್ಯಕ್ಷ ಸುರೇಶ್ರಾವ್, ಮಾಜಿ ಅಧ್ಯಕ್ಷ ಎಸ್.ಪ್ರಕಾಶ್, ಸೇರಿದಂತೆ ಸಂಘದ ಇತರೆ ಪದಾಧಿಕಾರಿಗಳು ಹಾಜರಿದ್ದರು.