ತುಮಕೂರು : ಕಾನೂನು ನಿಯಮದಡಿ ಅತಿಥಿ ಉಪನ್ಯಾಸಕರ ನೇಮಕ, ಖಾಯಂ ಮಾಡಲು ಅವಕಾಶವಿಲ್ಲ ಎಂದು ಕಾನೂನು ಸಚಿವ ಮಾಧುಸ್ವಾಮಿ ತಿಳಿಸಿದರು.
ಸುದ್ದಿಗೋಷ್ಟಿಯಲ್ಲಿ ಮಾತನಾಡಿ, ಅತಿಥಿ ಉಪನ್ಯಾಸಕರ ಗರಿಷ್ಟ ವಯೋಮಿತಿ ಮೀರಿರುವುದರಿಂದ ಖಾಯಂ ಗೊಳಿಸಲು ಸಾಧ್ಯವಿಲ್ಲ. ಧರಣಿಯಿಂದ ವಿದ್ಯಾರ್ಥಿಗಳಿಗೆ ತೊಂದರೆಯಾಗಿರುವುದರಿಂದ ಎಂದಿನಂತೆ ಕಾರ್ಯನಿರ್ವಹಿಸಲು ಅತಿಥಿ ಉಪನ್ಯಾಸಕರಲ್ಲಿ ಮನವಿ ಮಾಡಲಾಗಿದೆ ಎಂದರು.
ಅತಿಥಿ ಉಪನ್ಯಾಸಕರ ಕೆಲವು ಬೇಡಿಕೆಗಳನ್ನು ಈಡೇರಿಸಲು ನಿಯಮಗಳಡಿ ಸಾಧ್ಯವಿಲ್ಲ ದಿರುವುದರಿಂದ ದೇಶಸೇವೆಯೆಂದು ಮನಗಂಡು ಕರ್ತವ್ಯಕ್ಕೆ ಹಾಜರಾಗಬೇಕು. ಅವರ ವೇತನಕ್ಕೆ ಯಾವುದೇ ರೀತಿಯಲ್ಲಿ ತೊಂದರೆಯಾಗುವುದಿಲ್ಲ ಎಂದು ತಿಳಿಸಿದರು.