Sunday, 25th September 2022

ಮನಗೆದ್ದ ರಾಣನ ಗಲ್ಲಿ ಬಾಯ್‌ ಗಾನ

ಶ್ರೇಯಸ್ ನಾಯಕನಾಗಿ ನಟಿಸಿರುವ ರಾಣ ಚಿತ್ರದ ಚಿತ್ರೀಕರಣ ಮುಕ್ತಾಯವಾಗಿದ್ದು, ತೆರೆಗೆ ಸಿದ್ಧವಾಗಿದೆ. ಅದಕ್ಕೂ ಮೊದಲು ಚಿತ್ರದ ಒಂದು ಹಾಡು ಬಿಡುಗಡೆಯಾಗಿದೆ.

ಗಲ್ಲಿ ಬಾಯ್.. ಎಂಬ ಹಾಡು ಇದಾಗಿದ್ದು, ನಿರ್ದೇಶಕ ಜೋಗಿ ಪ್ರೇಮ್ ಹಾಡನ್ನು ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭ ಕೋರಿದರು. ಚಂದನ್ ಶೆಟ್ಟಿ ಸಾಹಿತ್ಯ ರಚಿಸಿ, ಸಂಗೀತ ಸಂಯೋ ಜಿಸಿರುವ ಈ ಗೀತೆ ಅನಿರುದ್ಧ್ ಶಾಸಿ ಹಾಗೂ ಅದಿತಿ ಸಾಗರ್ ಮಧುರ ಕಂಠದಲ್ಲಿ ಮೂಡಿ ಬಂದಿದೆ. ಸಿನಿಪ್ರಿಯರ ಮನಗೆದ್ದಿದೆ. ಶ್ರೇಯಸ್ ಹಾಗೂ ರೀಷ್ಮಾ ಹಾಡಿನಲ್ಲಿ ಭರ್ಜರಿಯಾಗಿ ಹೆಜ್ಜೆ ಹಾಕಿದ್ದಾರೆ.

ರಾಣ ಸಿನಿಮಾದ ಶಿರ್ಷಿಕೆಯೇ ಹೇಳುವಂತೆ ಇದು ಪ್ರೇಮ ಕಥೆಯ ಜತೆಗೆ ಸಾಹಸ ಪ್ರಧಾನ ಕಥೆಯನ್ನು ಒಳಗೊಂಡಿದೆ. ನಂದಕಿಶೋರ್ ನಿರ್ದೇಶನದಲ್ಲಿ ಚಿತ್ರ ಮೂಡಿಬಂದಿದೆ. ಮಾಸ್ ಸಿನಿಮಾಗಳನ್ನು ನಿರ್ಮಿಸಿ ಪ್ರಸಿದ್ಧ ಪಡೆದ ನಂದಕಿಶೋರ್ ಸಿನಿಮಾ ಎಂದ ಮೇಲೆ ಸಿನಿಪ್ರಿ ಯರು ಏನೆಲ್ಲಾ ನಿರೀಕ್ಷಿಸುತ್ತಾರೋ ಅದೆಲ್ಲವೂ ಈ ಚಿತ್ರದಲ್ಲಿದೆ.

ಕೋಟೆ ಪ್ರಭಾಕರ್, ಅಶೋಕ್, ರಘು ಮತ್ತಿತರರು ಚಿತ್ರದ ತಾರಾಬಳಗದಲ್ಲಿದ್ದಾರೆ. ನವೆಂಬರ್ ೧೧ ರಂದು ರಾಣ ಅದ್ಧೂರಿಯಾಗಿ ತೆರೆಗೆ ಬರಲಿದೆ.