Friday, 7th May 2021

ಜೀವನದ ಮೌಲ್ಯ ತೋರಿಸಿದ ಗುರುರಾಯರು

ಕಿಶೋರಾಚಾರ್ಯ

ಕರೋನಾ ಎಂಬ ರೋಗ ದೇಶದೆಲ್ಲೆಡೆ ಆವರಿಸಿದಾಗ ದೇಶದ ಭಕ್ತ ಜನರೆಲ್ಲರೂ ಭಯಭಿ ಕಾಲ ಕಷ್ಟದ ಜೀವನ ನಡೆಸುತ್ತಿದ್ದಾರೆ. ಅದರಲ್ಲಿಯೂ ಪ್ರಾರಂಭದಲ್ಲಿ ಎರಡು ತಿಂಗಳ ಕಾಲ ಬಹಳ ಕಷ್ಟದಲ್ಲಿ ಜೀವವನ್ನು ಇಟ್ಟುಕೊಂಡು ಜೀವನವನ್ನು ಸಾಗಿಸು ತ್ತಿದ್ದರು.

ಹೀಗಿರುವಾಗ ಲೋಕದ ಕಲ್ಯಾಣಕ್ಕಾಗಿ ಭಕ್ತಜನರ ಆರೋಗ್ಯ ಹಾಗೂ ಜೀವನ ವನ್ನು ಸಾಗಿಸುವುದಕ್ಕಾಗಿ ಶ್ರೀ ಗುರುರಾಯರು ಪರಮಪೂಜ್ಯ ಶ್ರೀ ಸುಬುಧೇಂದ್ರ ತೀರ್ಥ ಶ್ರೀ ಪಾದಂಗಳವರಲ್ಲಿ ನಿಂತುಕೊಂಡು ಲೋಕ ಕಲ್ಯಾಣವನ್ನು ಮಾಡಿಸಿದರು. ಎಲ್ಲೆಲ್ಲಿ ನಮ್ಮ ಸಂಘ-ಸಂಸ್ಥೆಗಳು ಮಠಗಳಲ್ಲಿ  ವಿಶೇಷವಾಗಿ ಮೃತ್ಯುಂಜಯ ಹೋಮ ಶ್ರೀರಾಘವೇಂದ್ರ ಅಷ್ಟಾಕ್ಷರ ಹೋಮ ಹಾಗೂ ವಿಶೇಷ ಪಾರಾಯಣ ಜಪಾದಿಗಳನ್ನು ಮಾಡಿಸಲಾಯಿತು.

ಜಾತಿಭೇದ ತಾರತಮ್ಯವಿಲ್ಲದೆ ಎಲ್ಲರಿಗೂ ರಾಯರ ಪ್ರಸಾದರೂಪವಾಗಿ ಆಹಾರಧಾನ್ಯ ಕಿಟ್ ವಿತರಣೆ ನಡೆಯಿತು. ಶ್ರೀ ರಾಯರು ಶ್ರೀಪಾದಂಗಳವರಲ್ಲಿ ನಿಂತು ಕೊಂಡು ಭಕ್ತ ಜನರಿಗೆ ಆರೋಗ್ಯ ಭಾಗ್ಯವನ್ನು ಕರುಣಿಸಿ ಜೀವನಕ್ಕಾಗಿ ಆಹಾರ ಧಾನ್ಯವನ್ನು ಪ್ರಸಾದರೂಪವಾಗಿ ಅನುಗ್ರಹಿಸಿದರು.

ಇಂತಹ ಮಹತ್ಕಾರ್ಯದಲ್ಲಿ ಬೆಂಗಳೂರಿನ ಜಯನಗರದ 5ನೇ ಬಡಾವಣೆಯಲ್ಲಿ ಇರುವ ಶ್ರೀರಾಘವೇಂದ್ರಸ್ವಾಮಿಗಳವರ ಮಠದಲ್ಲಿಯೂ ಭಕ್ತರ ಸಹಕಾರದೊಂದಿಗೆ ಶ್ರೀ ಮಠದ ಹಿರಿಯ ವ್ಯವಸ್ಥಾಪಕರಾದ ಆರ್ ಕೆ ವಾದೀಂದ್ರಆಚಾರ್ಯರ ನೇತೃತ್ವ ದಲ್ಲಿ ಸುಮಾರು 4,000ಕ್ಕೂ ಹೆಚ್ಚಿನ ಭಕ್ತ ಜನರಿಗೆ ಆಹಾರ ಧಾನ್ಯದ ಕಿಟ್ ವಿತರಿಸಿದರು. ಆ ಕರೋನ ಮಹಾಮಾರಿ ಶೀಘ್ರ ನಿವಾರಣೆಯಾಗಲಿ ಎಂದು ಆ ಸಂದರ್ಭದಲ್ಲಿಯೂ ಪ್ರತಿನಿತ್ಯ ಶ್ರೀರಾಯರಿಗೆ ಅಭಿಷೇಕಗಳನ್ನು ಮಾಡಿ ದೀಪಗಳನ್ನು ಪ್ರಜ್ವಲಿಸಿ ಪ್ರಾರ್ಥನೆಯನ್ನು ಸಲ್ಲಿಸಲಾಯಿತು.

ಮಠಕ್ಕೆ ಬರುವಂತಹ ಭಕ್ತರಿಗೆ-ಮುಖ ಕವಚ ಮಾಸ್ಕ್‌, ಥರ್ಮಲ್ ಸ್ಕ್ಯಾನಿಂಗ್, ಸ್ಯಾನಿಟೈಸರ್, ಸಾಮಾಜಿಕ ಅಂತರವನ್ನು ಕಾಪಾಡಿಕೊಳ್ಳಲು ಚೌಕಾಕಾರದ ಬಾಕ್ಸ್‌ ಅಳವಡಿಕೆ ಮೊದಲಾದ ವ್ಯವಸ್ಥೆಯನ್ನು ಸಹ ಶ್ರೀಮಠದ ವ್ಯವಸ್ಥಾಪಕರು ಮಾಡಿದ್ದರು. ಈ ವ್ಯವಸ್ಥೆಯನ್ನು ನೋಡಿದ ಜನರು ಶ್ರೀಮಠವು ಬೆಂಗಳೂರಿಗೆ ರೋಲ್ ಮಾಡೆಲ್ ಎಂದು ತಿಳಿಸುತ್ತಾ ಎಲ್ಲಾ
ದೇವಸ್ಥಾನಗಳು ಈ ತರದ ವ್ಯವಸ್ಥೆಯನ್ನು ಮಾಡಿದರೆ ಭಕ್ತರಿಗೂ ಆತಂಕವಿಲ್ಲ ಎಂದು ಸಂತೋಷವನ್ನು ವ್ಯಕ್ತಪಡಿಸಿದರು.

‘ಆರೋಗ್ಯ ಇಲಾಖೆಯ ಸೂಚನೆಯಂತೆ ಹಾಗೂ ಪರಮಪೂಜ್ಯ ಶ್ರೀಪಾದರ ಆದೇಶದಂತೆ ಭಕ್ತರ ಮತ್ತು ಸಮಸ್ತ ಜನರ ಆರೋಗ್ಯವೇ ನಮ್ಮ ಧ್ಯೇಯ ಎಂಬುದಾಗಿ ತಿಳಿಸುತ್ತಾ ಭಕ್ತರ ಸಹಕಾರ ಹಾಗೂ ಶ್ರೀಮಠದ ಸಿಬ್ಬಂದಿಗಳ ಸಹಕಾರದೊಂದಿಗೆ ಇಂದಿಗೂ ಅಚ್ಚುಕಟ್ಟಾದ ವ್ಯವಸ್ಥೆಯನ್ನು ಮುಂದುವರಿಸಿಕೊಂಡು ಹೋಗುತ್ತಿದ್ದೇವೆ’ ಎಂದು ಶ್ರೀಮಠದ ಹಿರಿಯ ವ್ಯವಸ್ಥಾಪಕರಾದ ಆರ್ ಕೆ ವಾದೀಂದ್ರ ಆಚಾರ್ಯರು ತಿಳಿಸಿದರು.

ಕರೋನಾ ಎರಡನೆ ಅಲೆಯ ಸಮಯದಲ್ಲೂ ಗುರುರಾಯರ ಪ್ರೇರಣೆಯಂತೆ ಶ್ರೀಮಠವು ಜನಸಾಮಾನ್ಯರಿಗೆ ತನ್ನ ಸಹಾಯ
ಹಸ್ತವನ್ನು ಚಾಚುತ್ತಿದೆ, ಸಮಾಜದಲ್ಲಿ ಧೈರ್ಯ ತುಂಬುತ್ತಿದೆ.

Leave a Reply

Your email address will not be published. Required fields are marked *