Friday, 24th March 2023

ಗುತ್ತಿಗೆ ಕಾರ್ಮಿಕ ವ್ಯವಸ್ಥೆ: ಹೊರನೋಟ ಎಂಟು; ಒಳನೋಟ ನೂರೆಂಟು!

 ವಿವೇಚನೆ

ಮೋಹನದಾಸ ಕಿಣಿ, ಕಾಪು

ಗುತ್ತಿಗೆ ಕಾರ್ಮಿಕ ವ್ಯವಸ್ಥೆಯಲ್ಲಿ ಕಾರ್ಮಿಕರ ಶೋಷಣೆ ಅವ್ಯಾಹತ ಎನ್ನುವುದು ಸಾರ್ವಕಾಲಿಕ ಆಪಾದನೆ. ಕಳೆದ ಹಲವು ದಶಕಗಳಿಂದಲೂ ಬೇರೆ ಬೇರೆ ಅವತಾರಗಳಲ್ಲಿ, ವಿಭಿನ್ನ ಹೆಸರುಗಳಲ್ಲಿ ಜಾರಿಯಲ್ಲಿರುವ ಈ ಗುತ್ತಿಗೆ, ದಿನಗೂಲಿ, ಹೊರಗುತ್ತಿಗೆ ನೌಕರ ಕಾರ್ಮಿಕ ಪದ್ಧತಿಯ ಒಳಿತು-ಕೆಡುಕುಗಳ ವಿಶ್ಲೇಷಣೆಯ ಸಣ್ಣ ಪ್ರಯತ್ನ ಇಲ್ಲಿದೆ.

ಇಂಥದೊಂದು ನುಣುಚಿಕೊಳ್ಳುವ ಧೋರಣೆ ಪ್ರಾಾರಂಭದಲ್ಲಿ ಆಕರ್ಷಕವಾಗಿ ಕಂಡರೂ ಕೊನೆಗೆ ವಿಫಲವಾಗಿ, ಅಂಥ ನೌಕರರನ್ನು ಖಾಯಂಗೊಳಿಸುವ ಅನಿವಾರ್ಯತೆಗೆ ತಲುಪಿಸುತ್ತದೆ ಎಂದು ಗೊತ್ತಿಿದ್ದರೂ, ಸರಕಾರ ಅದೇ ತಪ್ಪನ್ನು ಪದೇಪದೆ ಮಾಡುತ್ತಿಿದೆ. ಯೋಜನೆಯ ಹೆಸರು ಮಾತ್ರ ಬೇರೆ ಬೇರೆ. ಖಾಯಂ ನೆಲೆಯಲ್ಲಿ ಉದ್ಯೋೋಗಿಗಳ ನೇಮಕಾತಿ ಮಾಡಿದರೆ ಅವರಿಗೆ ಕಾಲಕಾಲಕ್ಕೆೆ ವೇತನ ಬಡ್ತಿಿ, ಭತ್ಯೆೆ, ರಜೆ ಹಾಗೂ ಪಿಂಚಣಿ ಇನ್ನೂ ಏನೇನೋ ಸೌಲಭ್ಯಗಳನ್ನು ಕೊಡಬೇಕಾಗುತ್ತದೆ ಎಂಬ ಕಾರಣಕ್ಕೆೆ ಅಥವಾ ಕೆಲವೊಮ್ಮೆೆ ರಾಜಕೀಯ ಉದ್ದೇಶದಿಂದ ನಿರುದ್ಯೋೋಗಿಗಳನ್ನು ಓಲೈಸಲು ಸರಕಾರ ಇಂಥದೊಂದು ಪರ್ಯಾಯ ವ್ಯವಸ್ಥೆೆಯನ್ನು ರೂಪಿಸುತ್ತದೆ. ಮೇಲ್ನೋೋಟಕ್ಕೆೆ ಇದು ಸರಕಾರಕ್ಕೆೆ ಕಡಿಮೆ ವೆಚ್ಚದ ಯೋಜನೆ ಎಂದು ಕಂಡರೂ ವಾಸ್ತವ ಸ್ಥಿಿತಿ ಬೇರೆಯೇ ಇದೆ. ಈ ರೀತಿಯ ವ್ಯವಸ್ಥೆೆಯಲ್ಲಿ ಹೊರ ಜಗತ್ತಿಿಗೆ ಕಾಣಿಸುವುದು ಬರೀ ಮುಖವಾಡ. ವ್ಯವಸ್ಥೆೆಯ ಆಳಕ್ಕಿಿಳಿದಾಗ ಗೋಚರಿಸುವ ವಾಸ್ತವ ಮುಖವೇ ಬೇರೆ, ಈ ವ್ಯವಸ್ಥೆೆಯನ್ನು ಉದ್ಯೋೋಗದಾತನ ದೃಷ್ಟಿಿಕೋನದಿಂದ ನೋಡಿದಾಗ ಕಾಣುವ ಚಿತ್ರಣವೇ ಬೇರೆ.

ಇಂಥದೊಂದು ಅಪಕ್ವ ಚಿಂತನೆಯ ಗುತ್ತಿಿಗೆ ಕಾರ್ಮಿಕ ವ್ಯವಸ್ಥೆೆಯ ಇತಿಹಾಸ ಅರವತ್ತರ ದಶಕಕ್ಕೂ ಹಿಂದಿನದು. ಆಗ ಲೋಕೋಪಯೋಗಿ ಇಲಾಖೆಯಲ್ಲಿ ಈಗಿನಂತೆ ಪೂರ್ಣ ಪ್ರಮಾಣದಲ್ಲಿ ಕಾಮಗಾರಿಗಳನ್ನು ಗುತ್ತಿಿಗೆ ನೀಡುವ ಪದ್ಧತಿ ಇರಲಿಲ್ಲ. ಕಾಮಗಾರಿಗಳಿಗೆ ಬೇಕಾದ ಎಲ್ಲಾ ಸಾಮಗ್ರಿಿಗಳನ್ನು ಇಲಾಖೆಯೇ ಖರೀದಿಸಿ ದಾಸ್ತಾಾನು ಇರಿಸಿ ಗುತ್ತಿಿಗೆದಾರರಿಗೆ ಅವಶ್ಯಕತೆಗೆ ತಕ್ಕಂತೆ ಬಿಡುಗಡೆ ಮಾಡುತ್ತಿಿತ್ತು. ಗುತ್ತಿಿಗೆದಾರರು ತಮಗೆ ವಹಿಸಿಕೊಡಲಾದ ಕಾಮಗಾರಿಯನ್ನು ಮಾಡುವುದಕ್ಕಾಾಗಿ ದಿನಗೂಲಿ ನೆಲೆಯಲ್ಲಿ ನೌಕರರನ್ನು ನೇಮಿಸಿಕೊಳ್ಳುತ್ತಿಿದ್ದರು. ಇಂಥ ವ್ಯವಸ್ಥೆೆಯಲ್ಲಿ ಸರಕಾರದ ಹಣದಿಂದ ಪಾವತಿ ಪಡೆಯುತ್ತಿಿದ್ದರೂ, ನೇರವಾಗಿ ಈ ದಿನಗೂಲಿ ನೌಕರರಿಗೂ ಸರಕಾರಕ್ಕೂ ಯಾವುದೇ ಸಂಬಂಧವಿರಲಿಲ್ಲ.

ಆದ್ದರಿಂದ ಸರಕಾರಕ್ಕೆೆ ಇವರಿಗೆ ಗುತ್ತಿಿಗೆದಾರರ ಮೂಲಕ ವೇತನ ಪಾವತಿ ಹೊರತು ಇತರ ಯಾವುದೇ ರೀತಿಯ ಸೌಲಭ್ಯ ನೀಡುವ ಬದ್ಧತೆ ಇರಲಿಲ್ಲ. ಮೊದಲಿಗೆ ಸಂಸಾರ ಸರಿದೂಗಿಸಲು ಒಂದು ಉದ್ಯೋೋಗ ಸಿಕ್ಕಿಿದರೆ ಸಾಕು ಎಂಬ ಮನಸ್ಥಿಿತಿಯಿಂದ ಈ ವ್ಯವಸ್ಥೆೆಯೊಳಗೆ ಸೇರಿಕೊಂಡ ಸಹಸ್ರಾಾರು ದಿನಗೂಲಿ ನೌಕರರಿಗೆ ವರ್ಷ ಕಳೆದಂತೆ ಸಂಸಾರ ಬೆಳೆಯುತ್ತಾಾ ಬಂದಂತೆ, ವಯಸ್ಸಾಾಗುತ್ತಾಾ ದುಡಿಯಲು ಶಕ್ತಿಿಯಿಲ್ಲದ ಹಂತ ತಲುಪಿ, ಉದ್ಯೋೋಗದಿಂದ ಕೈಬಿಡುವಂಥ ದಿನಗಳು ಬಂದಾಗ ಹೋರಾಟವೊಂದು ರೂಪುಗೊಳ್ಳುತ್ತದೆ.

ಹಂತಹಂತವಾಗಿ ಮುಂದುವರಿದ ಈ ಹೋರಾಟವು ಅಂತಿಮವಾಗಿ ಸರ್ವೋಚ್ಚ ನ್ಯಾಾಯಾಲಯದ ಮೆಟ್ಟಿಿಲೇರಿ, ಸುದೀರ್ಘ ಹೋರಾಟದ ನಂತರ 1984ರಲ್ಲಿ ಕನಿಷ್ಠ 240 ದಿನಗಳಷ್ಟು ಅವಧಿಗೆ ದಿನಗೂಲಿ ಆಧಾರದಲ್ಲಿ ಗ್ಯಾಾಂಗ್ ಮೆನ್ ಕರ್ತವ್ಯ ನಿರ್ವಹಿಸಿದ ಎಲ್ಲಾ ನೌಕರರನ್ನು ಖಾಯಂಗೊಳಿಸಬೇಕೆಂದು ತೀರ್ಪು ಬಂದಿತು. ಆದರೂ ಈ ತೀರ್ಪು ಜಾರಿಗೊಳಿಸುವಿಕೆಯನ್ನು 1990ರ ತನಕವೂ ಎಳೆದಾಡಿ ಬಂದ ಸರಕಾರ ಕೊನೆಗೆ ನ್ಯಾಾಯಾಲಯ ಛೀಮಾರಿ ಹಾಕುವ ಹಂತ ತಲುಪಿದಾಗ ಯಾವ್ಯಾಾವುದೋ ಇಲಾಖೆಗಳಲ್ಲಿ ಖಾಲಿ ಇರುವ ಹುದ್ದೆಗೆ ನೇಮಕಾತಿ ಮಾಡಿ ಕೈ ತೊಳೆದುಕೊಂಡಿತು.

ಈ ದಿನಗೂಲಿ ಗ್ಯಾಾಂಗ್‌ಮೆನ್ ಖಾಯಮಾತಿ ವಿಷಯ ನ್ಯಾಾಯಾಲಯದಲ್ಲಿ ಇರುವಾಗಲೇ ಇಂಥದ್ದೇ ಇನ್ನೊೊಂದು ರೀತಿಯ ಯೋಜನೆ ಜಾರಿಗೆ ಬಂತು. ಅದೇ ಮಿತವೇತನ ಪದವೀಧರರು ಅಥವಾ ಸ್ಟೆೆ ಪೆಂಡರಿ ಗ್ರಾಾಜ್ಯುಯೆಟ್ ಯೋಜನೆ. ಇದು ಕೂಡಾ 1977ರಲ್ಲಿ ಜಾರಿಗೆ ಬಂದು, ವಿವಿಧ ಹಂತಗಳ ಹೋರಾಟದ ನಂತರ 1994ರಲ್ಲಿ ಈ ಯೋಜನೆಯಡಿ ವಿವಿಧ ಹುದ್ದೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿಿದ್ದವರನ್ನು ಖಾಯಂಗೊಳಿಸಲಾಯಿತು. ಆದರೆ 1977ರಿಂದ 1994ರ ವರೆಗಿನ ಸುಮಾರು 13 ವರ್ಷಗಳ ಸೇವೆಯನ್ನು ಯಾವುದೇ ಉದ್ದೇಶಕ್ಕೆೆ ಪರಿಗಣಿಸಲೇ ಇಲ್ಲ. ಇಂದಿಗೂ ಮೇಲಿನ ಎರಡೂ ವರ್ಗದ ಉದ್ಯೋೋಗಿಗಳಲ್ಲಿ ಖಾಯಮಾತಿ ಆಗದೇ ಉಳಿದವರು ಇನ್ನೂ ಬಹಳಷ್ಟು ಜನರಿದ್ದಾರೆ. ಉಳಿದವರಂತೆ ಹೋರಾಟಕ್ಕೆೆ ಆರ್ಥಿಕ ಬೆಂಬಲದ ಕೊರತೆಯೇ ಇದಕ್ಕೆೆ ಕಾರಣ.

ಈ ರೀತಿಯ ಗುತ್ತಿಿಗೆ/ದಿನಗೂಲಿ ನೌಕರ ವರ್ಗದ ಇನ್ನಷ್ಟು ಅವತಾರಗಳು ಹೀಗಿವೆ; ಕೆಲವು ವರ್ಗದ ಹುದ್ದೆಗಳಿಗೆ ನೇಮಕಾತಿ ಮಾಡುವಾಗ ಆ ಹುದ್ದೆಯ ಕನಿಷ್ಠ ವೇತನಕ್ಕಿಿಂತ ಮಾಸಿಕ ರು.10/- ಕಡಿಮೆ ವೇತನಕ್ಕೆೆ ನೇಮಿಸುವುದು, ವರ್ಷಕ್ಕೊೊಮ್ಮೆೆ ನವೀಕರಿಸುವುದು. ಆದರೆ ಈ ವರ್ಗದಲ್ಲಿ ನೇಮಕಾತಿ ಹೊಂದಿದವರ ಸಂಖ್ಯೆೆ ತೀರಾ ಕಡಿಮೆ ಇದ್ದು, ಯಾವುದೇ ರೀತಿಯ ಕಾನೂನು ಹೋರಾಟಕ್ಕೆೆ ಬೇಕಾದಷ್ಟು ಸಂಖ್ಯಾಾಬಲವಿಲ್ಲದ ಕಾರಣ ದಶಕಗಳಿಂದ ಕರ್ತವ್ಯ ನಿರ್ವಹಿಸಿ ಬರಿಗೈಯಲ್ಲಿ ಮನೆಗೆ ಹೋದವರೂ ಇದ್ದಾರೆ.

ಇದಕ್ಕಿಿಂತಲೂ ಶೋಚನೀಯ ಪ್ರಕರಣವೊಂದಿದೆ. ಆರೋಗ್ಯ ಇಲಾಖೆಯಲ್ಲಿರುವ ನೈರ್ಮಲ್ಯ ಕೆಲಸದ ನೌಕರರು, ಅವರು ಖಾಯಂ ಉದ್ಯೋೋಗಿಗಳಾದರೂ ಪದೇಪದೆ ಗೈರು ಹಾಜರಾಗುವ ಚಾಳಿ ಇದ್ದುದರಿಂದ ಹಾಗೆ ಪೂರ್ವ ಮಾಹಿತಿ ನೀಡದೆ ಗೈರು ಹಾಜರಾಗುವವರ ಬದಲಿಗೆ 29 ದಿನಗಳ ಅವಧಿಗೆ ನೇಮಕಾತಿ ಮಾಡಿ, ಗೈರು ಹಾಜರಾಗುವವರ ವೇತನದಿಂದ ಒಂದಿಷ್ಟು ಕಡಿತಗೊಳಿಸಿ ಪಾವತಿಸುವ ಪದ್ಧತಿ ಇತ್ತು. ನಿರುದ್ಯೋೋಗ ಸಮಸ್ಯೆೆ ಎಷ್ಟು ಕಠಿಣವಾಗಿತ್ತೆೆಂದರೆ, ಅಂಥ ನೇಮಕಾತಿಗೂ ಸಾಲುಗಟ್ಟಿಿ ನಿಲ್ಲುವವರಿದ್ದರು. 1977ರಲ್ಲಿ ನಾನು ಸರಕಾರಿ ಉದ್ಯೋೋಗಕ್ಕೆೆ ಸೇರಿದ ಹೊಸತರಲ್ಲಿ ಸ್ವತಃ ನೋಡಿದ ದಯನೀಯ ಘಟನೆಯೊಂದನ್ನು ಇಲ್ಲಿ ಉಲ್ಲೇಖಿಸುತ್ತೇನೆ. ಈ 29 ದಿನಗಳ ನೇಮಕಾತಿಗೆ ಆಗ ಹೆಚ್ಚೆೆಂದರೆ 100-150 ರುಪಾಯಿ ಸಿಗುತ್ತಿಿತ್ತು. ಸದರಿ ಕೆಲಸಕ್ಕೆೆ ಸೇರುವವರು ಅತಿ ಅಸಹ್ಯ ಸ್ಥಿಿತಿಯಲ್ಲಿರುವ ರೋಗಿಗಳ ಆರೈಕೆ ಮಾಡುವುದು, ಶವ ಸಾಗಾಟ, ಶವವನ್ನು ಪರೀಕ್ಷೆಗೆ ಸೀಳುವುದು ಹೀಗೆ ಯೋಚಿಸಲೂ ಅಸಹ್ಯವೆನಿಸುವ ಕೆಲಸಗಳನ್ನು ಮಾಡಬೇಕಾಗುತ್ತು ಆದರೂ ಹಸಿವು ಎಲ್ಲವನ್ನೂ ಸಹಿಸುವ ಕಠಿಣ ಮನಸ್ಥಿಿತಿಗೆ ಅವರನ್ನು ಸಜ್ಜುಗೊಳಿಸಿತ್ತು! ಆದ್ದರಿಂದ ನಾಲ್ಕು ದಶಕಗಳ ಹಿಂದಿನ ಈ ಹೃದಯ ವಿದ್ರಾಾವಕ ಘಟನೆ ನನ್ನ ನೆನಪಿನಲ್ಲಿ ಇಂದಿಗೂ ಉಳಿದಿದೆ.

ಈ ಸಾಲಿಗೆ ಇತ್ತೀಚಿನ ಸೇರ್ಪಡೆ ಎಂದರೆ ಶಿಕ್ಷಣ ಇಲಾಖೆಯ ಗೌರವ ಉಪನ್ಯಾಾಸಕ ಹುದ್ದೆ. ಸರಕಾರಿ ಮತ್ತು ಅನುದಾನಿತ ಕಾಲೇಜುಗಳಲ್ಲಿ, ತರಗತಿಗಳು ನಡೆಯುವ ದಿನಗಳಲ್ಲಿ ಮಾತ್ರ ವೇತನ, ರಜಾ ಅವಧಿಯಲ್ಲಿ ಏನೂ ಇಲ್ಲ. ಖಾಯಂ ನೆಲೆಯಲ್ಲಿ ಶಿಕ್ಷಕರ ನೇಮಕಾತಿ ಮಾಡುವ ಬದ್ಧತೆಯನ್ನು ಮರೆತ ಸರಕಾರ, ಮತ್ತೂ ಚೌಕಾಶಿ ಮಾಡಿ, ಕೆಲಸಕ್ಕೆೆ ಮಾತ್ರ ಕೂಲಿ ಪಾವತಿಸುವ, ತನ್ಮೂಲಕ ಭಾವಿ ಪ್ರಜೆಗಳನ್ನು ರೂಪಿಸುವ ಪವಿತ್ರ ಕಾಯಕಕ್ಕೂ ದಿನಗೂಲಿ (ಅದು ಕೂಡ ಗಂಟೆ ಲೆಕ್ಕದಲ್ಲಿ) ಪಾವತಿಸುವ ಮೂಲಕ ಗುಲಾಮಗಿರಿಗೆ ತಳ್ಳಿಿದೆ ಸರಕಾರ- ಇದಕ್ಕೆೆ ‘ಗೌರವ ಧನ’ ಎಂಬ ಶೀರ್ಷಿಕೆ ಬೇರೆ! ಈ ಪಾವತಿಯನ್ನಾಾದರೂ ಕ್ಲಪ್ತ ಕಾಲಕ್ಕೆೆ ಮಾಡುತ್ತಾಾರೆಯೇ, ಅದೂ ಇಲ್ಲ. ಈ ವರ್ಷದ ಗೌರವ ಧನ(?) ಮುಂದಿನ ವರ್ಷ ಸಿಕ್ಕಿಿದರೆ ಶಿಕ್ಷಕರ ಪುಣ್ಯ.

ಈ ಗುತ್ತಿಿಗೆ ಕಾರ್ಮಿಕ ಪದ್ಧತಿಯ ಇತ್ತೀಚಿನ ಅವತಾರ ಹೊರ ಗುತ್ತಿಿಗೆ. ಈ ಪದ್ಧತಿಯಲ್ಲಿ ಇರುವಷ್ಟು ಗೊಂದಲ ಹಿಂದಿನ ಯಾವುದೇ ವ್ಯವಸ್ಥೆೆಯಲ್ಲಿ ಇರಲಿಲ್ಲ. ಹಿಂದಿನ ಎಲ್ಲಾ ಅವತಾರಗಳಿಗಿಂತಲೂ ಇದರ ಆಳ-ವಿಸ್ತಾಾರ ಅಗಾಧವಿದೆ. ಈ ವಿನೂತನ ವ್ಯವಸ್ಥೆೆಯ ರೂಪುರೇಷೆ, ಅದನ್ನು ಕಾರ್ಯಗತಗೊಳಿಸುವ ವಿಧಾನ, ಈ ವಿಧಾನದಲ್ಲಿ ಅಡಕವಾಗಿರುವ ಕೆಲವು ಒಳಸುಳಿಗಳ ಬಗ್ಗೆೆ ಪ್ರಸ್ತಾಾಪಿಸುತ್ತೇನೆ.

ಈ ಹೊರಗುತ್ತಿಿಗೆ ವ್ಯವಸ್ಥೆೆ ಕಾರ್ಯಾಚರಿಸುವ ವಿಧಾನ ಹೀಗಿದೆ. ಯಾವುದೇ ಒಂದು ಇಲಾಖೆಯ ವಿವಿಧ ಕಚೇರಿಗಳಿಗೆ ಅಥವಾ ಒಂದು ಕಚೇರಿಗೆ ಅಥವಾ ಒಂದು ನಿರ್ದಿಷ್ಟ ವರ್ಗದ ಹುದ್ದೆಗಳಿಗೆ, ಅಂದರೆ ಶಿಕ್ಷಣ, ಆರೋಗ್ಯ, ಕಂದಾಯ ಹೀಗೆ ಯಾವುದಾದರೂ ಇಲಾಖೆಯ ವಿವಿಧ ಶಾಖಾ ಕಚೇರಿಗಳಿಗೆ ಒಟ್ಟಾಾಗಿ ಅಥವಾ ಒಂದು ಆಸ್ಪತ್ರೆೆಗೆ, ಶಾಲೆ, ಕಾಲೇಜಿಗೆ, ಒಂದಿಷ್ಟು ವಾಹನ ಚಾಲಕರ, ಭದ್ರತಾ ಸೇವೆ, ಶುಶ್ರೂಷ ಸಿಬಂದಿ, ಕಚೇರಿ ಕೆಲಸದ, ಕಂಪ್ಯೂೂಟರ್ ನಿರ್ವಹಣೆ, ಲೆಕ್ಕ ಪತ್ರ ನಿರ್ವಹಣೆ ಇತ್ಯಾಾದಿ ಕೆಲಸಕ್ಕೆೆ ಬೇಕಾದ ಸಿಬ್ಬಂದಿ ಸೇವೆಯನ್ನು ನಿರ್ದಿಷ್ಟ ಅವಧಿಗೆ ಒದಗಿಸಲು ಟೆಂಡರ್ ಕರೆಯಲಾಗುತ್ತದೆ. ಇಂಥ ಟೆಂಡರ್‌ನಲ್ಲಿ ಭಾಗವಹಿಸುವವರು ಕೆಲವು ನಿರ್ದಿಷ್ಟ ಅರ್ಹತೆ ಹೊಂದಿರ ಬೇಕಾಗುತ್ತದೆ. ಅವೆಂದರೆ ಕಾರ್ಮಿಕ ಇಲಾಖೆಯ ನಿಬಂಧನೆಗಳನುಸಾರ ನೋಂದಣಿ ಮಾಡಿ ಪರವಾನಗಿ ಪಡೆಯುವುದು, ಕಾರ್ಮಿಕರ ಭವಿಷ್ಯ ನಿಧಿ ಮತ್ತಿಿತರ ಇಲಾಖೆಗಳಲ್ಲಿ ನೋಂದಣಿ ಮಾಡುವುದು ಇತ್ಯಾಾದಿ.

ಆಡು ಮುಟ್ಟದ ಸೊಪ್ಪಿಿಲ್ಲ, ರಾಜಕಾರಣಿಗಳು ಕೈಯಾಡಿಸದ ಕ್ಷೇತ್ರವಿಲ್ಲ ಎನ್ನುವ ಹೊಸ ಗಾದೆಯೊಂದನ್ನು ಸೃಷ್ಟಿಿಸಿ ಇಲ್ಲಿಗೆ ಅನ್ವಯಿಸಬಹುದು. ಅದು ಹೇಗೆಂದರೆ, ಹೊರಗುತ್ತಿಿಗೆ ಸೇವೆ ಸಲ್ಲಿಸಲು ಟೆಂಡರು ಸಲ್ಲಿಸಿದವರ ನಡುವೆ ರಾಜಕೀಯ ಪ್ರವೇಶವಾಗುತ್ತದೆ. ರಾಜಕೀಯವಾಗಿ ಪ್ರಬಲವಾಗಿರುವವರಿಗೆ ಆಪ್ತರಾಗಿರುವವರಿಗೆ ಟೆಂಡರು ಲಭ್ಯವಾಗುವುದಕ್ಕೆೆ ಬೇಕಾಗುವ ಕಸರತ್ತು ನಡೆಯುತ್ತದೆ. ಸಾಮ-ದಾನ-ಭೇದ-ಅನಿವಾರ್ಯವಾದರೆ ದಂಡ ಪ್ರಯೋಗವೂ ಆಗಿ ಟೆಂಡರ್ ಮಂಜೂರಾಗುತ್ತದೆ. ಇತರ ಟೆಂಡರುಗಳಂತೆ ಇಲ್ಲಿ ರಾಜಕೀಯ ಧುರೀಣರಿಗೆ ಕಪ್ಪ-ಕಾಣಿಕೆ ಸಲ್ಲುವುದರ ಜತೆಗೆ ಅವರು ಸೂಚಿಸುವವರನ್ನೇ ಗುತ್ತಿಿಗೆ ಪಡೆದ ಸಂಸ್ಥೆೆಯವರು ನೇಮಕಾತಿಗಾಗಿ ಆಯ್ಕೆೆ ಮಾಡಬೇಕಾಗುತ್ತದೆ. ಮೇಲ್ನೋೋಟಕ್ಕೆೆ ಇವರಿಗೂ ಸರಕಾರದ ಇಲಾಖೆಗಳಿಗೂ ಯಾವುದೇ ಸಂಬಂಧ ಇರುವುದಿಲ್ಲ. ಆದರೆ ಒಮ್ಮೆೆ ಇಲಾಖೆಯ ಒಳಗೆ ಸೇರಿಕೊಂಡಿರೋ ಅಲ್ಲಿಂದ ಇವರ ಆಟ ಶುರು. ಈ ಆಟದ ರಿಂಗ್ ಮಾಸ್ಟರ್ ಇವರನ್ನು ಆಯ್ಕೆೆ ಮಾಡಿದ ರಾಜಕೀಯ ಶಕ್ತಿಿ.

ಒಮ್ಮೆೆ ಕಚೇರಿಗೆ ಸೇರಿದ ನಂತರ ಅವರು ಹೇಳಿದ ರೀತಿಯಲ್ಲಿ ಕೆಲಸ ಮಾಡುವ ಅನಿವಾರ್ಯತೆಯ ವಾತಾವರಣವನ್ನು ಸೃಷ್ಟಿಿಸಿ, ತಪ್ಪಿಿದಲ್ಲಿ ಯಾವುದೇ ಕಾರಣ, ಮುನ್ಸೂಚನೆ ನೀಡದೆ ಕೆಲಸದಿಂದ ವಜಾ ಮಾಡಲಾಗುತ್ತದೆ. ಈ ರೀತಿ ಅವರ ಕಪಿಮುಷ್ಟಿಿಯಲ್ಲಿ ಸಿಕ್ಕಿಿಬಿದ್ದವರ ಮೂಲಕ ವಿರೋಧಿಗಳಿಗೆ ಸಂಬಂಧಿಸಿದಂತೆ ಮಾಡಬಾರದ್ದನ್ನೆೆಲ್ಲ ಮಾಡಿಸುತ್ತಾಾರೆ. ಸ್ಥಳೀಯವಾಗಿ ವಿರೋಧ ಪಕ್ಷದ ರಾಜಕಾರಣಿಗಳೇನಾದರೂ ಪ್ರಭಾವ ಹೊಂದಿದ್ದರೆ ಇಲಾಖೆಯ ರಹಸ್ಯ ತಿಳಿಯಲು ಇವರನ್ನು ಉಪಯೋಗಿಸಿ ತಮ್ಮ ಬೇಳೆ ಬೇಯಿಸಿಕೊಂಡ ಉದಾಹರಣೆಗಳು ಸಾಕಷ್ಟಿಿವೆ.

ಈ ರೀತಿ ನೇಮಕಾತಿಯಾದವರಿಗೆ ಗಣ್ಯ ವ್ಯಕ್ತಿಿಗಳ ಜತೆಗಿನ ಒಡನಾಟ, ಅಡುಗೆ ಮನೆವರೆಗೂ ನುಗ್ಗುವಷ್ಟು ಸ್ವಾಾತಂತ್ರ್ಯಇದೆ, ಆದರೆ ಹೊಣೆಗಾರಿಕೆ ಇಲ್ಲ. ಬದಲಿಗೆ ಖಾಸಗಿ ಬದುಕಿನ ತೆವಲುಗಳ ಗೌಪ್ಯ ಕ್ಷಣಗಳ ಚಿತ್ರೀಕರಣ ಮಾಡಿ ಅವರ ವಿರೋಧಿಗಳಿಗೆ ಪೂರೈಸುವ ಅಥವಾ ಸ್ವಂತಕ್ಕೆೆ ದುರುಪಯೋಗ ಪಡಿಸಿಕೊಳ್ಳುವ ಹಂತಕ್ಕೆೆ ಹೋಗುವವರೂ ಇದ್ದಾರೆ. ಉದಾಹರಣೆಗೆ ಕಳೆದ ವರ್ಷ ಓರ್ವ ಸಚಿವರು ತಮ್ಮ ಕಛೇರಿಯಲ್ಲಿ ಅಸಹ್ಯವಾಗಿ ನಡೆದುಕೊಂಡದ್ದನ್ನು ಅವರ ಸಿಬ್ಬಂದಿಯೇ ರಹಸ್ಯವಾಗಿ ಚಿತ್ರೀಕರಣ ಮಾಡಿ ಪರೋಕ್ಷವಾಗಿ ಹಣ ಪೀಕಿಸಲು ಯೋಜನೆ ಮಾಡಿದ್ದು ಅವುಗಳಲ್ಲಿ ಒಂದು. ಹಸಿವು, ಜತೆಯಲ್ಲಿ ದುರಾಸೆ, ಎಂತಹ ಹೇಯ ಕೃತ್ಯಕ್ಕೂ ಪ್ರೇರಣೆ ನೀಡುತ್ತದೆ ಎನ್ನುವುದಕ್ಕಿಿದು ಜ್ವಲಂತ ಸಾಕ್ಷಿ.

ತಾಂತ್ರಿಿಕ ವಿಷಯದಲ್ಲಿ ಸ್ನಾಾತಕೋತ್ತರ ಪದವಿ ಪಡೆದೂ ಉದ್ಯೋೋಗ ದೊರಕದೆ ಜಾಡಮಾಲಿಯಂಥ ಅಲ್ಪ ವೇತನದ ಕೆಲಸಕ್ಕೆೆ ಸೇರಿದವರೂ ಇದ್ದಾರೆ. ಪ್ರತಿಭೆಗೆ ಸೂಕ್ತ ಸ್ಪಂದನೆ, ಪ್ರತಿಫಲ ಸಿಗದಿದ್ದಾಗ, ಹಸಿವು, ದೇಶಭಕ್ತಿಿ, ಕರ್ತವ್ಯ ಪ್ರಜ್ಞೆ ಮರೆಸುತ್ತದೆ. ದುರಾಶೆ ವಿಧ್ವಂಸಕ ಕೃತ್ಯಗಳಿಗೆ ಪ್ರಚೋದಿಸುತ್ತದೆ. ಇಂಥ ನೇಮಕಾತಿ ಒಂದರ್ಥದಲ್ಲಿ ಜೀತ ಪದ್ಧತಿಗಿಂತ ಭಿನ್ನವೇನಲ್ಲ. ನಿವೃತ್ತಿಿ ವೇತನ, ಸೇವಾ ಭದ್ರತೆ ಮಾತ್ರವಲ್ಲ, ವೈದ್ಯಕೀಯ ರಜೆ ಅಥವಾ ಬಹುಮುಖ್ಯವಾಗಿ ಹೆರಿಗೆ ರಜೆ ಕೂಡಾ ಇರುವುದಿಲ್ಲ. ಅನಿವಾರ್ಯ ಕಾರಣಕ್ಕೆೆ ಗೈರು ಹಾಜರಾದರೆ ನೇರವಾಗಿ ಕೆಲಸದಿಂದ ವಜಾ ಮಾಡಲಾಗುತ್ತದೆ. ಕಾನೂನು ಹೋರಾಟ ಬರೀ ಅರಣ್ಯ ರೋಧನ ಅಷ್ಟೇ.

ಎಟಿಎಮ್ ಕೇಂದ್ರಗಳಿಗೆ ಹಣ ತುಂಬಲು ಗುತ್ತಿಿಗೆ ಪಡೆದ ಸಂಸ್ಥೆೆಯ ವಾಹನ ಚಾಲಕ ಹಣದೊಂದಿಗೆ ಪರಾರಿಯಾಗಿದ್ದು. ಇನ್ನೊೊಂದು ಪ್ರಕರಣ, ಬೆಂಗಳೂರಿನ ಒಂದು ಸರಕಾರಿ ಕಚೇರಿಯಲ್ಲಿ ಓರ್ವ ಸಹಾಯಕ ದರ್ಜೆಯ ಗುತ್ತಿಿಗೆ ಸಿಬ್ಬಂದಿ ಒಂದು ಟೆಂಡರಿಗೆ ಸಂಬಂಧಿಸಿದ ದಾಖಲೆಯೊಂದರ ಜೆರ್ಸಾೃ್‌ ಪ್ರತಿಯನ್ನು ಗುಟ್ಟಾಾಗಿ ಗುತ್ತಿಿಗೆದಾರರೊಬ್ಬರಿಗೆ ತೆಗೆದು ಕೊಟ್ಟಿಿದ್ದನ್ನು ನಾನು ಸ್ವತಃ ನೋಡಿದ್ದೇನೆ. ಕೊಪ್ಪಳ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಾಣ ಇಲಾಖೆಯಲ್ಲಿ ಸುಮಾರು ಹತ್ತು ವರ್ಷಗಳ ಕಾಲ ಓರ್ವ ಹೊರಗುತ್ತಿಿಗೆ ಸಿಬ್ಬಂದಿ, ಅಧಿಕಾರಿಗಳ ನಕಲಿ ಸಹಿ ಮಾಡಿ ಕೋಟ್ಯಂತರ ರುಪಾಯಿ ಅವ್ಯವಹಾರ ನಡೆಸಿದ ಪ್ರಕರಣ ಇತ್ತೀಚಿನದು.

ಅಂತರ್ಜಾಲ ನಿಯಂತ್ರಿಿತ ನಗದು ವ್ಯವಹಾರದಲ್ಲಿ ಉಪಯೋಗಿಸುವ ಗುಪ್ತ ಸಂಕೇತಗಳು (ಪಾಸ್‌ವರ್ಡ್) ಈ ಸಿಬ್ಬಂದಿಗಳ ಬಳಿ ಇರುತ್ತದೆ. ಅಧಿಕಾರಿಗಳು ನಂಬಿಕೆಯಿಂದ ಅದರ ಬಗ್ಗೆೆ ಹೆಚ್ಚು ತಲೆ ಹಾಕುವುದಿಲ್ಲ. ಸಾಮಾನ್ಯವಾಗಿ ಎಲ್ಲವನ್ನೂ ಗುತ್ತಿಿಗೆ ಸಿಬ್ಬಂದಿಯವರೇ ನಿರ್ವಹಿಸುತ್ತಾಾರೆ. ಆದರೆ ದುರಾಶೆಯಿಂದಾಗಿ ಹೀಗೆ ಸಿಕ್ಕ ಅವಕಾಶವನ್ನು ದುರುಪಯೋಗಪಡಿಸಿಕೊಳ್ಳುವುದಕ್ಕೆೆ ಅನುವು ಮಾಡಿಕೊಡುತ್ತದೆ. ಎಲ್ಲರೂ ಹೀಗೆ ಎನ್ನಲಾಗದಿದ್ದರೂ, ಇಂಥ ವ್ಯವಸ್ಥೆೆ ಬಹಳಷ್ಟು ಕಚೇರಿಯಲ್ಲಿ ಇಂದಿಗೂ ಇರುವುದರಿಂದ ಯಾವ ಹುತ್ತದಲ್ಲಿ ಯಾವ ಹಾವಿರುತ್ತದೋ ಬಲ್ಲವರಾರು?

ಆಸ್ಪತ್ರೆೆ, ಕಾಲೇಜು ಮೊದಲಾದ ಕಡೆ ಪ್ರಯೋಗಶಾಲೆಗಳ ಉಪಯೋಗಕ್ಕೆೆ ಶುದ್ಧೀಕರಿಸಿದ ಮದ್ಯಸಾರ (್ಕಛ್ಚಿಿಠಿಜ್ಛಿಿಜಿಛಿ ಜ್ಟಿಿಜಿಠಿ) ಪಡೆದುಕೊಳ್ಳಲು ಅಬಕಾರಿ ಇಲಾಖೆಯ ಪರವಾನಗಿ ಬೇಕು. ಓರ್ವ ಸಿಬ್ಬಂದಿ ಜಿಲ್ಲಾಧಿಕಾರಿಗಳ ಸಹಿಯನ್ನು ನಕಲು ಮಾಡಿ ಖೋಟಾ ಪರವಾನಗಿ ಪತ್ರ ತಯಾರಿಸಿದ ಪ್ರಕರಣವನ್ನೂ ನೋಡಿದ್ದೇನೆ. ಹಾಗೆಯೇ ಶಿಕ್ಷಣ ಇಲಾಖೆಗೆ ಬಂದರೆ, ಪ್ರಶ್ನೆೆ ಪತ್ರಿಿಕೆ ಮುದ್ರಣವಾಗುತ್ತಿಿರುವ ಖಾಸಗಿ ಮುದ್ರಣಾಲಯವೊಂದರಲ್ಲಿ ಹೊರಗುತ್ತಿಿಗೆ ಸಂಸ್ಥೆೆಯ ಮೂಲಕ ನೇಮಕವಾದ ಭದ್ರತಾ ಸಿಬ್ಬಂದಿಯೋರ್ವ ಬೇಲಿಯೇ ಹೊಲ ಮೇಯ್ದಂತೆ ಪ್ರಶ್ನೆೆ ಪತ್ರಿಿಕೆಯ ಪ್ರತಿಯನ್ನು ಕದ್ದು ಮಾರಾಟ ಮಾಡಿ ಸೋರಿಕೆ ಪ್ರಕರಣದಲ್ಲಿ ಸರಕಾರವನ್ನೇ ನಡುಗಿಸಿದ ಪ್ರಕರಣ ಒಂದೆರಡು ವರ್ಷಗಳ ಹಿಂದೆ ನಡೆದಿತ್ತು. ಇದಕ್ಕೆೆಲ್ಲ ಮೂಲ ಕಾರಣ ಹೊರಗುತ್ತಿಿಗೆ ಸಂಸ್ಥೆೆಗಳು. ನೇಮಕಾತಿ ಮಾಡುವ ವ್ಯಕ್ತಿಿಯ ಹಿನ್ನೆೆಲೆ ಪರಿಶೀಲಿಸದೆ ಜವಾಬ್ದಾಾರಿಯುತ ಹುದ್ದೆಗಳಿಗೆ ನೇಮಕ ಮಾಡುವುದು. ಕಡಿಮೆ ಸಂಬಳಕ್ಕೆೆ, ರಾಜಕೀಯ ಒತ್ತಡಕ್ಕೆೆ ನಡೆಯುವ ಇಂಥ ನೇಮಕಾತಿಯಾದವರ ಮೂಲಕ ಗಂಭೀರ ಲೋಪವಾದರೆ ಅದಕ್ಕೆೆ ಯಾರು ಹೊಣೆ?

ಕೆದಕುತ್ತಾಾ ಹೋದರೆ ಇಂಥ ಅಸಂಖ್ಯಾಾತ ಉದಾಹರಣೆಗಳು ಸಿಗುತ್ತವೆ. ಇದೆಲ್ಲದಕ್ಕೆೆ ಕಾರಣ ಇಷ್ಟೇ, ಜವಾಬ್ದಾಾರಿಯುತ ಖಾಯಂ ಸಿಬ್ಬಂದಿ ಕೊರತೆ, ಉತ್ತರದಾಯಿತ್ವ ಇಲ್ಲದಿದ್ದರೂ ಗುತ್ತಿಿಗೆ ಸಿಬ್ಬಂದಿ ಮೇಲೆ ಅತಿಯಾದ ಅವಲಂಬನೆ ಏನನ್ನೂ ಮಾಡಿಸುತ್ತದೆ. ಇದಕ್ಕೆೆ ಆಡಳಿತವೂ ಸಮಾನವಾಗಿ ಜವಾಬ್ದಾಾರಿ. ಇಂಥ ಹೊರಗುತ್ತಿಿಗೆ ವ್ಯವಸ್ಥೆೆಯೆಂಬುದು ಗುತ್ತಿಿಗೆದಾರರ ಶೋಷಣೆಗೊಂದು ಚಿನ್ನದ ಗಣಿ ಎಂಬುದಕ್ಕೆೆ ಪೂರಕವಾಗಿ ಸೇವಾವಧಿಯಲ್ಲಿ ನಾನು ನೋಡಿದ ಕೆಲವು ಅನುಭವಗಳನ್ನು ಪ್ರಸ್ತುತ ಪಡಿಸುತ್ತಿಿದ್ದೇನೆ.

ನಾನು ಸೇವೆ ಸಲ್ಲಿಸುತ್ತಿಿದ್ದ ಒಂದು ಕಚೇರಿಗೆ ವಿವಿಧ ವರ್ಗದ ಸಿಬ್ಬಂದಿ ಸೇವೆ ಪೂರೈಸಲು ಪ್ರತೀ ವರ್ಷ ಟೆಂಡರ್ ಕರೆದು ಗುತ್ತಿಿಗೆ ನೀಡಲಾಗುತ್ತಿಿತ್ತು. ಕಾರ್ಮಿಕರಿಗೆ ಯಾವುದೇ ರೀತಿಯಲ್ಲಿ ಅನ್ಯಾಾಯವಾಗಬಾರದೆಂಬ ಉದ್ದೇಶದಿಂದ ಎಲ್ಲಾ ನೌಕರರಿಗೆ ನಿಯಮಾನುಸಾರ ಕನಿಷ್ಠ ವೇತನ ನೀಡಬೇಕು, ಅಂಥ ವೇತನದ ಮೊತ್ತವನ್ನು ಅವರ ಬ್ಯಾಾಂಕ್ ಖಾತೆಗೆ ಜಮಾ ಮಾಡಿ, ಅವರಿಗೆ ಪಾವತಿಸಲ್ಪಡಬೇಕಾದ ಕಾರ್ಮಿಕ ಭವಿಷ್ಯ ನಿಧಿ ಮುಂತಾದ ಶಾಸನಾತ್ಮಕ ಪಾವತಿಗಳನ್ನು ಸಂಬಂಧಿಸಿದ ಇಲಾಖೆಗಳಿಗೆ ಪಾವತಿಸಿದ ಬಗ್ಗೆೆ ದಾಖಲೆಗಳನ್ನು ಲಗತ್ತಿಿಸಬೇಕು ಎಂಬ ಶರ್ತಗಳನ್ನು ವಿಧಿಸಲಾಗಿತ್ತು. ಒಂದಿಷ್ಟು ಕಾಲ ಇದು ಸರಿಯಾಗಿ ನಡೆಯುತ್ತಿಿತ್ತು ಅಥವಾ ನಡೆದಂತೆ ಭಾಸವಾಗಿತ್ತು. ಗುತ್ತಿಿಗೆದಾರ ಅದೆಷ್ಟು ಬುದ್ಧಿಿವಂತನೆಂದರೆ ಅವನು ಮಾಡಿದ ಕರಾಮತ್ತು ನೋಡಿ. ನೌಕರರ ಹೆಸರಲ್ಲಿ ಬ್ಯಾಾಂಕ್ ಖಾತೆಗಳನ್ನೇನೋ ತೆರೆಯಲಾಯಿತು.

ನಿಯಮಾನುಸಾರ ಜಮಾ ಮಾಡಬೇಕಾದಷ್ಟು ಮೊತ್ತವನ್ನು ಆಯಾ ಖಾತೆಗೆ ಜಮಾ ಮಾಡಿದ್ದೂ ಆಯಿತು. ಆ ಬಗ್ಗೆೆ ಪ್ರಮಾಣ ಪತ್ರ, ಭವಿಷ್ಯ ನಿಧಿಗೆ ಹಣ ಪಾವತಿಸಿದ ಚಲನ್ ಇತ್ಯಾಾದಿ ದಾಖಲೆಗಳನ್ನು ಬಿಲ್ಲಿನ ಜತೆ ಹಾಜರುಪಡಿಸಿ ಮೊತ್ತ ಪಡೆದದ್ದೂ ಆಯಿತು. ಇದರಲ್ಲಿ ಮೋಸ ಏನು ಬಂತು ಎನ್ನುತ್ತೀರಾ? ತೋರಿಕೆಗೆ ನೌಕರರ ಹೆಸರಿನಲ್ಲಿ ತೆರೆಯಲಾದ ಬ್ಯಾಾಂಕ್ ಖಾತೆಯಿಂದ ಹಣ ಹಿಂಪಡೆಯುವ ಅಧಿಕಾರ ನೌಕರರಿಗೆ ಮತ್ತು ಗುತ್ತಿಿಗೆದಾರರಿಗೆ ಜಂಟಿಯಾಗಿ ಇರುವಂತೆ ನೋಡಿಕೊಂಡು, ಒಂದು ಕಡೆ ಹಣ ಜಮಾ ಮಾಡಿ ಗುತ್ತಿಿಗೆದಾರನೇ ಹಣ ಹಿಂಪಡೆದು ನೌಕರರಿಗೆ ಕಡಿಮೆ ಮೊತ್ತವನ್ನು ನಗದಾಗಿ ಪಾವತಿಸುತ್ತಿಿದ್ದ. ಕಾರ್ಮಿಕ ಭವಿಷ್ಯ ನಿಧಿಗೆ ಪಾವತಿಸಿದ ಬಗ್ಗೆೆ ಹಾಜರು ಪಡಿಸಿದ ದಾಖಲೆ ಕೂಡಾ ಖೋಟಾ! ಈ ಬಗ್ಗೆೆ ಯಾರಾದರೂ ಉಸಿರೆತ್ತಿಿದರೆ ಅವರಿಗೆ ಗೇಟ್ ಪಾಸ್. ಇದು ಹಲವು ವರ್ಷಗಳ ಕಾಲ ನಡೆದು, ಯಾರೋ ಒಬ್ಬರು ಧೈರ್ಯದಿಂದ ಕಾರ್ಮಿಕ ನ್ಯಾಾಯಾಲಯಕ್ಕೆೆ ದೂರು ಸಲ್ಲಿಸಿದರು. ಪ್ರಕರಣ ಹಲವಾರು ವರ್ಷಗಳ ಕಾಲ ಎಳೆದಾಡುತ್ತಿಿತ್ತು. ಕೊನೆಗೆ ಏನಾಯಿತೋ ಗೊತ್ತಿಿಲ್ಲ.

ಇಂಥ ಗುತ್ತಿಿಗೆ ನೇಮಕಾತಿ ತೀರಾ ಅಲ್ಪಕಾಲೀನ ವ್ಯವಸ್ಥೆೆಯಾಗಿದ್ದರೂ, ಸರಕಾರಿ ಉದ್ಯೋೋಗವಿದೆ ಎಂದು ಸುಳ್ಳು ಹೇಳಿ ಮದುವೆ ಆದವರೂ ಇದ್ದಾರೆ, ಸಾಲ ಪಡೆದವರೂ ಇದ್ದಾರೆ. ಈ ವ್ಯವಸ್ಥೆೆಯಲ್ಲಿ ವೇತನ, ಉದ್ಯೋೋಗ ಅನಿಶ್ಚಿಿತತೆ ಸ್ವಾಾಭಾವಿಕ. ಆದರೂ ಆತ್ಮಹತ್ಯೆೆಯಂಥ ಹತಾಶೆಯ ನಿರ್ಧಾರ ಮಾಡಿದ ಪ್ರಕರಣಗಳು ನಡೆದದ್ದೂ ಇದೆ. ಇತ್ತೀಚೆಗೆ 7 ತಿಂಗಳಿಂದ ವೇತನವಿಲ್ಲದ ಗ್ರಂಥಾಲಯ ಇಲಾಖೆ ನೌಕರನೊಬ್ಬ ಮುಖ್ಯಮಂತ್ರಿಿ ಕಚೇರಿಯಲ್ಲಿ ಕನಿಷ್ಠ ಮನವಿ ಸ್ವೀಕಾರಕ್ಕೂ ನಿರಾಕರಿಸಿದಾಗ, ತನ್ನ ಶವಸಂಸ್ಕಾಾರ ಮುಖ್ಯಮಂತ್ರಿಿ ಮಾಡಲಿ ಎಂದು ಪತ್ರ ಬರೆದು ಆತ್ಮಹತ್ಯೆೆ ಮಾಡಿಕೊಂಡ ಘಟನೆ ವಿಧಾನ ಸೌಧದಲ್ಲಿ ನಡೆಯಿತು.

ಈ ಗುತ್ತಿಿಗೆ ಪುರಾಣವನ್ನು ಮುಗಿಸುವ ಮೊದಲು ಇದೇ ವಿಷಯಕ್ಕೆೆ ಪ್ರತ್ಯಕ್ಷ ಅಥವಾ ಪರೋಕ್ಷವಾಗಿ ಸಂಬಂಧಿಸಿದ ಒಂದೆರಡು ವಿಚಾರಗಳು.

ತಾಂತ್ರಿಿಕ ವಿದ್ಯಾಾರ್ಜನೆಯಲ್ಲಿ ಉದಾಃ ಖಾಸಗಿ ನರ್ಸಿಂಗ್ ತರಬೇತಿ ಶಾಲೆ ಮುಂತಾದೆಡೆ ಪರೋಕ್ಷವಾಗಿ ಗುತ್ತಿಿಗೆ ವಿಧಾನ ಅನುಸರಿಸಲಾಗುತ್ತದೆ. ತರಬೇತಿ ಅವಧಿ ಮುಗಿದ ನಂತರ ಒಂದಿಷ್ಟು ಅವಧಿಗೆ ಅಲ್ಪ ವೇತನಕ್ಕೆೆ ಅದೇ ಸಂಸ್ಥೆೆಯಲ್ಲಿ ದುಡಿಯುವುದಾಗಿ ಕರಾರು ಮಾಡಿ ಕೊಡಬೇಕೆಂಬ ಶರ್ತ ವಿಧಿಸಲಾಗುತ್ತದೆ. ಈ ಕರಾರಿನಿಂದ ತಪ್ಪಿಿಸಿಕೊಳ್ಳಬಾರದೆಂದು ತರಬೇತಿಯ ಪೂರ್ವದಲ್ಲಿ ಅವರ ವಿದ್ಯಾಾರ್ಹತೆಯ ಪ್ರಮಾಣ ಪತ್ರಗಳನ್ನು ಅಡಮಾನ ಇರಿಸಿಕೊಳ್ಳುವುದೂ ಇದೆ!
ಆರೋಗ್ಯ ಇಲಾಖೆಯಲ್ಲಿ ವೈದ್ಯಾಾಧಿಕಾರಿಗಳ ನೇಮಕಾತಿಗೆ ಅರ್ಜಿ ಆಹ್ವಾಾನಿಸಿದರೆ ಸಮರ್ಪಕ ಸ್ಪಂದನೆ ಸಿಗುವುದಿಲ್ಲ. ಕಾರಣ ಆಯ್ಕೆೆಯೇನೋ ಗಳಿಸಿದ ಅಂಕಗಳ ಆಧಾರದಲ್ಲಿ ಮಾಡಲಾಗುತ್ತದೆ.

ಆದರೆ ನೇಮಕಾತಿ ರಾಜ್ಯದ ಯಾವ ಮೂಲೆಗೂ ಆಗಬಹುದಾದ ಸಾಧ್ಯತೆಯಿರುವ ಕಾರಣ ಖಾಲಿ ಹುದ್ದೆಗಳನ್ನು ಭರ್ತಿ ಮಾಡುವಷ್ಟು ಸಂಖ್ಯೆೆಯಲ್ಲಿ ಅರ್ಜಿಗಳು ಬರುವುದಿಲ್ಲ. ಆದ್ದರಿಂದ ಕೆಲವೊಮ್ಮೆೆ ಜಿಲ್ಲಾ ಮಟ್ಟದಲ್ಲಿ ಗುತ್ತಿಿಗೆ ಆಧಾರದಲ್ಲಿ ನೇಮಕಾತಿ ಮಾಡಲಾಗುತ್ತದೆ. ಆದರೆ ಈ ನೇಮಕಾತಿ ಪ್ರಕ್ರಿಿಯೆ ರಾಜ್ಯಾಾದ್ಯಂತ ಏಕಕಾಲದಲ್ಲಿ ನಡೆಯುವುದಿಲ್ಲ. ಈ ರೀತಿ ಗುತ್ತಿಿಗೆ ಆಧಾರದಲ್ಲಿ ನೇಮಕಗೊಂಡ ವೈದ್ಯಾಾಧಿಕಾರಿಗಳು ಖಾಯಂಗೊಂಡು ಸೇವಾ ಹಿರಿತನದ ಪ್ರಶ್ನೆೆ ಬಂದಾಗ ಹೆಚ್ಚಿಿನ ಅಂಕ ಗಳಿಸಿದವರು ತಡವಾಗಿ ನೇಮಕಾತಿ ಹೊಂದಿದ ಕಾರಣ ಸೇವೆಯಲ್ಲಿ ಕಿರಿಯರಾಗಿಯೂ, ಕಡಿಮೆ ಅಂಕ ಗಳಿಸಿದವರು ಸೇವಾ ಹಿರಿತನವನ್ನೂ ಪಡೆಯುತ್ತಾಾರೆ. ಮುಂದಿನ ದಿನಗಳಲ್ಲಿ ಪದೋನ್ನತಿ ವಿಷಯ ಬರುವಾಗ ಇದು ಗಂಭೀರ ಸಮಸ್ಯೆೆಗೆ ಕಾರಣವಾಗುತ್ತದೆ.

ಈ ನಡುವೆ ಕಾರ್ಮಿಕರ ಹಿತಾಸಕ್ತಿಿಯ ದೃಷ್ಟಿಿಯಿಂದ ಕರ್ನಾಟಕ ಸರಕಾರ 1996ನೇ ಇಸವಿಯಲ್ಲಿ ಕಟ್ಟಡ ಮತ್ತು ಇತರ ನಿರ್ಮಾಣ ಕಾಮಗಾರಿಗಳ ಕಾರ್ಮಿಕರ ಕಲ್ಯಾಾಣ ಕಾಯಿದೆ ಜಾರಿಗೆ ತಂದಿದೆ. ಸರಕಾರಿ ಕಾಮಗಾರಿ ಗುತ್ತಿಿಗೆಗಳಲ್ಲಿ ಒಟ್ಟು ಮೊತ್ತದ ಶೇ.2%ರಷ್ಟನ್ನು ಈ ನಿಧಿಗೆ ವಂತಿಗೆ ನೀಡುವ ಉದ್ದೇಶಕ್ಕಾಾಗಿ ಹೆಚ್ಚುವರಿಯಾಗಿ ಪಡೆಯಲು ಅವಕಾಶವಿದೆ. ಗುತ್ತಿಿಗೆದಾರರು ಸರಕಾರದ ಅಥವಾ ಯಾವುದೇ ಕಾಮಗಾರಿಗಳ ಬಾಬ್ತು ಇಷ್ಟು ಮೊತ್ತವನ್ನು ಕಾರ್ಮಿಕ ಕಲ್ಯಾಾಣ ನಿಧಿಗೆ ಪಾವತಿಸ ಬೇಕಾಗುತ್ತದೆ.

ಈ ನಿಧಿಯಿಂದ ಕಾರ್ಮಿಕರಿಗೆ ಸೌಲಭ್ಯ ಸಿಗಬೇಕಾದರೆ ಕೆಲವೊಂದು ನಿಯಮಗಳನ್ವಯ ಅಂಥ ಕಾರ್ಮಿಕರ ಹೆಸರನ್ನು ನೋಂದಣಿ ಮಾಡಬೇಕಾಗುತ್ತದೆ. ಆದರೆ ಇಂಥ ನೋಂದಣಿ ಮತ್ತಿಿತರ ಪ್ರಕ್ರಿಿಯೆ ನೋಂದಾಯಿತ ಗುತ್ತಿಿಗೆದಾರರ ಅಡಿಯಲ್ಲಿ ನಿರಂತರ ಕಾರ್ಯ ನಿರ್ವಹಿಸುವವರಿಗೆ ಸಾಧ್ಯ. ಒಂದೊಂದು ದಿನ ಒಬ್ಬೊೊಬ್ಬರಡಿ ಕೆಲಸ ಮಾಡುವವರಿಗೆ? ಈ ಬಗ್ಗೆೆ ಸರಿಯಾದ ಮಾಹಿತಿ ಇಲ್ಲದ, ಅಸಂಘಟಿತ ಕಾರ್ಮಿಕರಿಗೆ ಇದು ಗಗನ ಕುಸುಮವೇ ಸರಿ. ಈ ಕಾಯಿದೆಯ ಉದ್ದೇಶ ಸಫಲವಾಗಬೇಕಾದರೆ ಸಂಬಂಧಿಸಿದ ಎಲ್ಲರಿಗೂ ಸೂಕ್ತ ತಿಳಿವಳಿಕೆ ನೀಡಿ, ನೋಂದಣಿ ಮಾಡಿಸುವ ಕೆಲಸವನ್ನು ಕಾರ್ಮಿಕ ಇಲಾಖೆ ಮಾಡಬೇಕು. ಸ್ವಯಂ ಸೇವಾ ಸಂಸ್ದೆೆಗಳು ಈ ನಿಟ್ಟಿಿನಲ್ಲಿ ಮುತುವರ್ಜಿ ವಹಿಸಿದಲ್ಲಿ ಉಪಯೋಗವಾಗಬಹುದೇನೋ.

ಇಷ್ಟೆೆಲ್ಲ ಅಧ್ವಾಾನಗಳ ನಂತರವೂ ನಮ್ಮ ಆಡಳಿತಗಾರರು ಪಾಠ ಕಲಿಯುವುದಿಲ್ಲ ಎನ್ನುವುದಕ್ಕೆೆ ಇತ್ತೀಚಿನ ಉದಾಹರಣೆ, ರಾಜಸ್ತಾಾನ ಸರಕಾರ ಪದವೀಧರ ಯುವಕರಿಗೆ ಮಾಸಿಕ ರು. 3000 ಮತ್ತು ಯುವತಿಯರಿಗೆ ಮಾಸಿಕ ರು. 3,500 ನಿರುದ್ಯೋೋಗ ಭತ್ಯೆೆಯನ್ನು ಪಾವತಿಸುವ ‘ಯುವ ಸಂಭಾಲ್’ ಎಂಬ ಯೋಜನೆಯನ್ನು ಜಾರಿಗೊಳಿಸಿದೆ! ಕ್ರಮೇಣ ಇದು ಇನ್ನೊೊಂದು ಪಾರ್ಥೇನಿಯಂ ಆಗಿ ಬೆಳೆದು ಸಮಸ್ಯೆೆಗಳ ಸರಮಾಲೆಗೆ ರಹದಾರಿ ಮಾಡಿ ಕೊಡುತ್ತದೆ. ಉದ್ಯೋೋಗ ಸೃಷ್ಟಿಿ, ಉದ್ಯೋೋಗ ಭದ್ರತೆಗೆ ಆದ್ಯತೆ ನೀಡಬೇಕಾದ ಸರಕಾರ ಜವಾಬ್ದಾಾರಿಯಿಂದ ನುಣುಚಿಕೊಳ್ಳುವ ಇಂಥ ಪ್ರಯತ್ನಗಳನ್ನು ಮತ್ತೆೆ ಮತ್ತೆೆ ಮಾಡುತ್ತದೆ. ದುಡಿಮೆಗೆ ತಕ್ಕ ಪ್ರತಿಫಲ ಸಿಗುವಂತೆ ಮಾಡುವುದು ಹಾಗೂ ಒಡೆಯರ ಮತ್ತು ಕಾರ್ಮಿಕರ ನಡುವಿನ ಅಂತರ ಕಡಿಮೆ ಮಾಡುವಲ್ಲಿ ಆಡಳಿತ ಯಶಸ್ಸು ಕಂಡ ದಿನ ಭಾರತದಲ್ಲಿ ಸುವರ್ಣ ಯುಗಾರಂಭ. ನಕ್ಸಲ್ ಮುಂತಾದ ಸಮಾಜ ವಿರೋಧಿ ಸಂಘಟನೆಗಳ ಅಂತ್ಯ.

error: Content is protected !!