Tuesday, 9th August 2022

ಕಾವಲುಗಾರನ ಮೇಲೆ ಹಲ್ಲೆ: ಉತ್ತರಾಧಿಮಠದವರ ಮೇಲೆ ದೂರು

– ಆನೆಗೊಂದಿಯ ನವವೃಂದಾವನಗಡ್ಡೆಯಲ್ಲಿ ಘಟನೆ
ಕೊಪ್ಪಳ: ಜಿಲ್ಲೆಯ ಗಂಗಾವತಿ ತಾಲೂಕಿನ ಆನೆಗೊಂದಿಯ ನವವೃಂದಾವನಗಡ್ಡೆಯಲ್ಲಿ ರಾಯರ ಮಠಕ್ಕೆ ಸಂಬಂಧಿಸಿದ ಕಾವಲುಗಾರನ ಮೇಲೆ  ಉತ್ತರಾಧಿ ಮಠದ ಮೂವರು ಶಿಷ್ಯರು  ಮಾರಾಣಾಂತಿಕ ಹಲ್ಲೆ ಮಾಡಿದ ಘಟನೆ ನಡೆದಿದೆ. ಈ ಹಿನ್ನೆಲೆಯಲ್ಲಿ ರಾಯರ ಮಠದವರಿಂದ ಹಲ್ಲೆ ಮಾಡಿದವರ ಮೇಲೆ ಗಂಗಾವತಿ ಗ್ರಾಮೀಣ ಠಾಣೆಯಲ್ಲಿ ದೂರು ದಾಖಲಾಗಿದೆ.

ನವವೃಂದಾವಬ ಗಡ್ಡೆಯಲ್ಲಿ ಕಾವಲುಗಾರನಾಗಿ ಕೆಲಸ ಮಾಡುತ್ತಿದ್ದ ರಾಘವೇಂದ್ರ ಮಡಿವಾಳ ಎನ್ನುವರು ಹಲ್ಲೆಗೊಳಗಾಗಿದ್ದಾರೆ. ಸೋಮವಾರ ವಾಗೀಶತೀಥ೯ರ ಆರಾಧನೆಯ ಪೂರ್ವಾರಾಧನೆ ನಿಮಿತ್ತ ಉತ್ತರಾಧಿ ಮಠದ ಶಿಷ್ಯರು  ನವವೃಂದಾವನ ಗಡ್ಡೆಯಲ್ಲಿದ್ದರು. ಈ ಸಂದಭ೯ದಲ್ಲಿ  ಕಾವಲುಗಾರ ರಾಘವೇಂದ್ರ ಎನ್ನುವರು ತನ್ನ ಮೊಬೈಲ್ ನ್ನು ವೀಕ್ಷಿಸುತ್ತಿದ್ದ ಸಂದಭ೯ದಲ್ಲಿ ಉತ್ತರಾಧಿ ಮಠದ ಶಿಷ್ಯರು  ರಾಘವೇಂದ್ರನ ಮೇಲೆ ಹಲ್ಲೆ ನಡೆಸಿದ್ದಾರೆ.

ಹಲ್ಲೆ ಮಾಡಿದವರನ್ನು ವೆಂಕಟಗಿರಿ ಅನ್ವರಿ, ಪ್ರಸನ್ನದಾಸ ಕಟ್ಟಿ ಮತ್ತು  ವಾಸದೇವ ಚಾರ ಅನಂತಪುರ  ಎನ್ನುವರು ರಾಘವೇಂದ್ರನ ವಿರುದ್ಧ ಹರಿಹಾಯ್ದು, ಏಕೆ ವಿಡಿಯೋ ಮಾಡುತ್ತಿ ಎಂದು  ದೌಜ೯ನ್ಯ  ಮಾಡಿ ಮೊಬೈಲ್ ಕಸಿದುಕೊಂಡು ಅಂಗಿ ಹರಿದು  ತುಂಗಭದ್ರಾ ನದಿಯ ತೀರದಲ್ಲಿ ಕರೆದೋಯ್ಯದು ಅಲ್ಲಿಯೂ ಹಲ್ಲೆ ನಡೆಸಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.

ಈ ಕುರಿತು ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು,  ಐಪಿಸಿ ಸೆಕ್ಷನ್  323, 324, 307, 504, 506 ಮತ್ತು 34ರ ಅನ್ವಯ ದೂರು ದಾಖಲಾಗಿದೆ.