Sunday, 29th November 2020

ಹಂಪಿ ಡಿವೈಎಸ್ಪಿ ಕಾಶೀಗೌಡ ದಿಢೀರ್ ರಾಜೀನಾಮೆ

ಐಜಿಪಿ ಗದರಿದ್ದಕ್ಕೆ ರಾಜಿನಾಮೆ ಎಂದ ಡಿವೈಎಸ್ಪಿ
ರಾಜಿನಾಮೆ ನೀಡುವ ಶಿಷ್ಟಾಚಾರ ಪಾಲನೆಯಾಗಿಲ್ಲ: ಎಸ್ಪಿ ಅಡಾವತ್
ಬಳ್ಳಾರಿ: ಕೂಡ್ಲಗಿ ಡಿವೈಎಸ್ಪಿಯಾಗಿದ್ದ ಅನುಪಮಾ ಶಣೈ ರಾಜೀನಾಮೆಯಿಂದ ರಾಜ್ಯಾದ್ಯಂತ ವ್ಯಾಪಕ ವಿರೋಧಗಳು ವ್ಯಕ್ತ ವಾಗಿದ್ದವು, ಈ ಪ್ರಕರಣದ ವಿಚಾರಣೆ ನ್ಯಾಯಾಲಯದ ಹಂತದಲ್ಲಿರುವಾಗಲೇ,  ಮತ್ತೋಬ್ಬ ಡಿವೈಎಸ್ಪಿ ಕಾಶೀಗೌಡ ಅವರು ದಿಢೀರ್ ರಾಜೀನಾಮೆ ನೀಡಿರುವುದು ನಾನಾ ಚೆರ್ಚೆಗೆ ಗ್ರಾಸವಾಗಿದೆ.
ಬಳ್ಳಾರಿ ಐಜಿಪಿ ನಂಜುಂಡಸ್ವಾಮಿ  ಸಭೆಯೊಂದರಲ್ಲಿ ರಾಜೀನಾಮೆ ಕೊಟ್ಟು ಹೋಗಿ ಎಂದು ಹೇಳಿದ್ದೆ ಹಂಪಿ ಡಿವೈಎಸ್ಪಿ ಕಾಶೀ ಗೌಡ ಅವರು ರಾಜೀನಾಮೆ ನೀಡಲು ಕಾರಣ ಎನ್ನುವ ಆರೋಪಗಳು ಕೇಳಿ ಬಂದಿವೆ. ಈ ಕುರಿತು ಪೊಲೀಸ್ ವಲಯ, ಸಾಮಾಜಿಕ ಜಾಲತಾದಲ್ಲಿ ತೀವ್ರ ಚೆರ್ಚೆಗೆ ಗ್ರಾಸವಾಗಿದೆ. ರಾಯಚೂರ ಜಿಲ್ಲೆಯ ಯಾಪಲದಿನ್ನಿ ಪೊಲೀಸ್ ಠಾಣೆಯಿಂದ ವೃತ್ತಿ ಜೀವನ ಆರಂಭಿಸಿದ ಕಾಶೀಗೌಡ ಅವರು, ಕಳೆದ 25 ವರ್ಷಗಳಿಂದ 37 ಸ್ಥಳಗಳಲ್ಲಿ ವರ್ಗಾವಣೆಗೊಂಡು ರಾಜ್ಯದ ನಾನಾ ಕಡೆ ವಿವಿಧ ವಿಭಾಗಗಳಲ್ಲಿ ಕೆಲಸ ನಿರ್ವಹಿಸಿದ್ದಾರೆ.
ತಮ್ಮ ವೃತ್ತಿ  ಜೀವನದ ಬಗ್ಗೆ ಹೇಳಿಕೊಂಡಿದ್ದಾರೆ ಎನ್ನುವ ಪೂರಕ ಮಾಹಿತಿ ಪೊಲೀಸ್ ಗೃಪ್ ನಲ್ಲಿ ಭಾರಿ ಸಂಚಲನ ಮೂಡಿ ಸಿದೆ. ಕೀರ್ತಿ, ಅಪಕೀರ್ತಿ ಸೇರಿದಂತೆ ಎಲ್ಲವನ್ನೂ ಇಲಾಖೆಯಿಂದ ಪಡೆದಿರುವೆ, ಈ ಹಿಂದೆ ಪಿಎಸ್ ಐ ಆಗಿದ್ದಾಗ ಎರಡು ಬಾರಿ ರಾಜೀನಾಮೆ ನೀಡಿದ್ದೆ,  ಆದರೇ, ಹಿರೀಯರೋಬ್ಬ ಅಧಿಕಾರಿಗಳು ಕೆಲ ಬುದ್ದಿವಾದ ಹೇಳಿ ಮನವೊಲಿಸಿದ್ದರು.
ಹಿರಿಯ ಅಧಿಕಾರಿಗಳು ರಾಜೀನಾಮೆ ನೀಡಿ ಓಡಿ ಹೋಗುವುದು ಸರಿಯಲ್ಲ, ಆತ್ಮಹತ್ಯೆ ಮಾಡಿಕೊಳ್ಳುವದಂತೂ ಹೇಡಿಗಳ ಕೆಲಸ ವಾಗಿದೆ ಎಂದು ಹಿರೀಯರು ಹೇಳಿದ್ದರಿಂದ ನಾನಾಗಿಯೇ ರಾಜೀನಾಮೆ ನೀಡೋಲ್ಲ ಎಂದು ಕೈಬಿಟ್ಟೆ, ಆದರೆ, ಐಜಿಪಿ ಅವರು, ನಿನ್ನೆ ನಡೆದ ಸಭೆಯಲ್ಲಿ ರಾಜೀನಾಮೆ ನೀಡುವಂತೆ ತಿಳಿಸಿದ್ದರಿಂದ  ರಾಜೀನಾಮೆ ಸಲ್ಲಿಸಿರುವೆ ಎನ್ನುವ ಸಂದೇಶವನ್ನು ಪೊಲೀಸ್ ಗ್ರುಪ್ ನಲ್ಲಿ ಕಳಿಸಿದ್ದಾರೆ ಎನ್ನಲಾಗಿದೆ.
ಸಭೆಯೊಂದರಲ್ಲಿ ಐಜಿಪಿ ನಂಜುಂಡಸ್ವಾಮಿ ಗದರಿದ್ದಕ್ಕೆ ಮನನೊಂದು ಕಾಶೀಗೌಡ ಅವರು ದಿಢೀರ್ ರಾಜೀನಾಮೆ ನೀಡಿರು ವುದು ಜಿಲ್ಲೆಯಲ್ಲಿ ನಾನಾ ಚರ್ಚೆಗೆ ಗ್ರಾಸವಾಗಿದೆ.

Leave a Reply

Your email address will not be published. Required fields are marked *