Monday, 3rd October 2022

ಹರ್ ಘರ್ ತಿರಂಗಾ ಸಡಗರದಿಂದ ಅಚರಿಸಲು ಕರೆ: ಲಕ್ಷ್ಮೀಶ

ಇಂಡಿ: ದೇಶದ ಸ್ವಾತಂತ್ರ‍್ಯ ದಿನಾಚರಣೆಯ ಅಮೃತ ಮಹೋತ್ಸವವನ್ನು ಪಟ್ಟಣ ದಾದ್ಯಂತ ಪ್ರತಿಯೊಂದು ಮನೆ ಮೇಲೆ ತಿರಂಗಾ ರಾಷ್ಟ್ರ ಧ್ವಜ ಹಾರಿಸುವ ಮೂಲಕ ಅತ್ಯಂತ ಸಂತೋಷ ಸಂಭ್ರಮದಿಂದ ಆಚರಿಸೋಣ ಎಂದು ಪುರಸಭೆ ಮುಖ್ಯಾಧಿ ಕಾರಿ ಕೆ.ಎನ್ ಲಕ್ಷ್ಮೀ ಶ ಹೇಳಿದರು.

ಹರಘರ್ ತಿರಂಗಾ ಅಭಿಯಾನದ ಜಾತಾ ಉದ್ದೇಶಿಸಿ ಮಾತನಾಡಿದ ಅವರು ಹರ ಘರ ತಿರಂಗಾ ಅಭಿಯಾನದ ಮೂಲ ಉದ್ದೇಶ ಪ್ರತಿಯೋಬ್ಬರಲ್ಲೂ ರಾಷ್ಟ್ರಪ್ರೇಮ, ರಾಷ್ಟ್ರ ಗೌರವ ಅಭಿಮಾನ ಹೆಚ್ಚಿಸುವುದಾಗಿದೆ. ಸಾರ್ವಜನಿಕರು ಅ,೧೩ ರಿಂದ ೧೫ರ ವರೆಗೆ ಮನೆ ಮನೆಗಳ ಮೇಲೆ ರಾಷ್ಟ್ರ ಧ್ವಜ ಹಾರಿಸಿ ರಾಷ್ಟ್ರಾಭಿಮಾನದಿಂದ ಮೆರೆಯಬೇಕು.

ಭಾರತ ದೇಶ ಭಾವೈಕ್ಯತೆ ಬೀಡು ನಮ್ಮ ಪೂರ್ವಜರು ಸ್ವಾತಂತ್ರ‍್ಯಕ್ಕಾಗಿ ಹಗಲೀರಳು ಶ್ರಮಿಸಿದ್ದಾರೆ. ಪೂರ್ವಜರ ತ್ಯಾಗ, ಬಲಿದಾನ ಶ್ರಮಿಸುವ ದಿನ ಆ.೧೫ ಕೇಂದ್ರ ಸರಕಾರ ಹರ್ ಘರ್ ತಿರಂಗಾ ಅಭಿಯಾನ ಹಮ್ಮಿಕೊಂಡಿದೆ. ಧ್ವಜಾರೋಹಣ ಮಾಡುವಾಗ ಪ್ರತಿ ಭಾರತೀಯರು ಅಜಾರೋಗತೆಯಿಂದ ಧ್ವಜಾರೋಣ ನಡೆಯದಂತೆ ಜಾಗೃತಿಯಿದ ಧ್ವಜಾರೋಣ ಮಾಡ ಬೇಕು.

ಕೆಸರಿ ,ಬಿಳಿ ,ಹಸಿರು ತನ್ನದೆಯಾದ ಸಂಕೇತವಾಗಿದೆ. ಪ್ರತಿ ಭಾರತೀಯರು ದೇಶದ ಹಬ್ಬವನ್ನಾಗಿ ಸಡಗರದಿಂದ ಅಚರಿಸಬೇಕು ಎಂದರು.