Sunday, 3rd July 2022

ಪಟ್ಟಣವನ್ನು ಹಸಿರೀಕರಣ ಮಾಡುತ್ತೇನೆ: ಹಾರಳು ಅಶೋಕ

ಹರಪನಹಳ್ಳಿ: ಮನುಷ್ಯನ ಅತೀ ಆಸೆ, ಏರುತ್ತಿರುವ ಜನಸಂಖ್ಯೆ ವೈಭವೋಪೇತ ಜೀವನದ ಬಯಕೆಗಳು ಪರಿಸರವನ್ನು ಹಾಳು ಮಾಡುತ್ತಿವೆ. ನಮ್ಮ ಸುತ್ತಮುತ್ತಲಿನ ಪರಿಸರವನ್ನು ಮಕ್ಕಳಂತೆ ಪೋಷಿಸಿದಾಗ ಪರಿಸರವನ್ನು ಉಳಿಸುವುದಕ್ಕೆ ಸಾಧ್ಯವಾಗುತ್ತದೆ ಎಂದು ಪುರಸಭೆ ಸದಸ್ಯ ಹಾಗೂ ಬಿಜೆಪಿ ಮುಖಂಡ ಹಾರಳು ಅಶೋಕ ಹೇಳಿದರು.

ಪಟ್ಟಣದ ಆಚಾರ್ಯ ಲೇಔಟ್‌ನಲ್ಲಿರುವ ಗಣಪತಿ ದೇವಸ್ಥಾನದ ಮುಂಭಾಗ ಮತ್ತು ಬಾಪೂಜಿ ನಗರದ ಸಮೀಪದಲ್ಲಿರುವ ಸುಡುಗಾಡಿನಲ್ಲಿ ಹಾರಳು ಅಶೋಕರವರ ಹುಟ್ಟು ಹಬ್ಬದ ಅಂಗವಾಗಿ ಸಸಿ ನೇಡುವ ಮೂಲಕ ಬಿಜೆಪಿ ಮುಖಂಡರ ನೇತೃತ್ವ ದಲ್ಲಿ ಸಸಿ ನೇಡಿ ಮೂಲಕ ೫೨ನೇ ಹುಟ್ಟು ಹಬ್ಬವನ್ನು ಆಚರಿಸಿಕೊಂಡರು.

ಹರಪನಹಳ್ಳಿ ಪಟ್ಟಣವನ್ನು ಹಸಿರುಕರಣಮಾಡುವು ಗುರಿಯನ್ನು ಹೊಂದಿದ್ದೇನೆ ಮುಂದಿನ ದಿನಗಳಲ್ಲಿ ಸಾರ್ವಜನಿಕರು ಸಂಬ0ಧಪಟ್ಟ ಅಧಿಕಾರಿಗಳು ಸಲಹೆ ಸಹಕಾರ ನೀಡಿದರೆ ಹರಪನಹಳ್ಳಿ ಪಟ್ಟಣವನ್ನು ಹಸಿರುಕರಣವನ್ನಾಗಿ ಮಾಡುತ್ತೇನೆ ವಿಶ್ವಾಸ ವ್ಯಕ್ತಪಡಿಸಿದರು.

ವಾಯುಮಾಲಿನ್ಯ : ವಾಯು ಜೀವಧಾತು ಗಾಳಿಯಿಲ್ಲಿದಿದ್ದರೆ ಜೀವಸಂಕುಲ ಒಂದು ಕ್ಷಣವೂ ಈ ಭೂಮಿಯ ಮೇಲೆ ಇರಲು ಸಾಧ್ಯವಿಲ್ಲಿಂತಹ ವಾಯು ವಿಷವಾಗುತ್ತಿದೆ. ಶಬ್ದಮಾಲಿನ್ಯ ಅತಿಯಾದ ಶಬ್ದ ಮನುಷ್ಯನ ಮಾನಸಿಕ ನೆಮ್ಮದಿಯನ್ನು ಹಾಳು ಮಾಡು ತ್ತಿದೆ, ವಾಹನ ದಟ್ಟಣೆ, ಕೈಗಾರಿಕೆ, ಯಂತ್ರಗಳು , ಧ್ವನಿವರ್ಧಕಗಳು ಶಬ್ದಮಾಲಿನ್ಯಕ್ಕೆ ಮೂಲ ಕಾರಣಗಳು ಇಂದು ಮಧುಮೇಹ, ರಕ್ತದೊತ್ತಡದಂತ ಖಾಯಿಲೆಗಳು ಹೆಚ್ಚಾಗುತ್ತಿವೆ ಇದಕ್ಕೆ ನಮ್ಮ ಜೀವನ ಶೈಲಿ ಆಹಾರ ಕ್ರಮಗಳ ಜೊತೆಗೆ ಅತಿಯಾದ ಶಬ್ದವೂ ಕಾರಣವಾಗುತ್ತದೆ ಎಂದು ವಿಶ್ಲೇಷಿಸಿದರು.

ಈ ಸಂದರ್ಭದಲ್ಲಿ ಬಿಜೆಪಿ ಹಿರಿಯ ಮುಖಂಡ ಆರ್. ಲೋಕೇಶ್, ಪುರಸಭೆ ಸದಸ್ಯರಾದ ಡಿ. ರೊಕ್ಕಪ್ಪ, ಎಸ್.ಕೆ. ಜಾವೀದ್, ವಿನಯ್ ಕುಮಾರ್, ಅಸ್ಲಾಂ, ಹನುಮಂತಪ್ಪ, ವಾಗೇಶ್,ಕಿರಣ್ ಶ್ಯಾನಬೋಗ, ಹೊನ್ನಪ್ಪ, ರಾಹುಲ್, ನಾಗರಾಜ್, ಭರಮಪ್ಪ, ಮತ್ತು ಇತರರು ಉಪಸ್ಥಿತರಿದ್ದರು.