Wednesday, 30th September 2020

ಹರೆಯಕ್ಕೆ ಹದ ಬರುವುದೇ ಬಾಲ್ಯದ ಹಬ್ಬಗಳಿಂದ!…

ನಾಗರ ಪಂಚಮಿ ನಾಡಿಗೇ ದೊಡ್ಡದು ಎಂಬ ನಾಣ್ಣುಡಿಯೇ ಇದೆ. ಶ್ರಾಾವಣ ಮಾಸದ ಮೊದಲ ಹಬ್ಬವೇ ನಾಗರ ಪಂಚಮಿ. ‘ಪಂಚಮಿ ಹಬ್ಬ ಬಂತು ಸನಿಹಾಕ, ಅಣ್ಣ ಬರಲಿಲ್ಲ ಇನ್ನು ಕರಿಯಾಕ’ ಎಂಬ ಹಾಡು ದಿ.ಹುಕ್ಕೇರಿ ಬಾಳಪ್ಪನವರ ಕಂಠದಲ್ಲಿ ಇನ್ನೂ ಕಿವಿಯಲ್ಲಿ ಪ್ರತಿ ವರ್ಷ ನಾಗರ ಪಂಚಮಿಯಲ್ಲಿ ಗುಣಗುಣಿಸುತ್ತದೆ. ಶ್ರಾಾವಣ ಬರುವದೇ ರೈಲಿನಂತೆ, ಅದರ ಹಿಂದಿನ ಬೋಗಿಗಳೇ ಸಾಲು ಸಾಲು ಹಬ್ಬಗಳು. ‘ದೇವರು ಕೊಟ್ಟ ತಂಗಿ’ ರಾಜಕುಮಾರರ ಹಳೆಯ ಚಿತ್ರ. ಅದರಲ್ಲಿ ಬರುವ ಈ ಚಿತ್ರಗೀತೆ ನಮಗೆಲ್ಲ ನಾಗರ ಪಂಚಮಿಯಲ್ಲಿ ನಾಗಪ್ಪಗೆ ಹಾಲು ಹಾಕುವ ಪ್ರಕ್ರಿಿಯೆಗೆ ಹೊಸ ಅರ್ಥವನ್ನೆೆ ಕೊಟ್ಟಿಿತು. ‘ತನ್ನಿಿರೇ ಹಾಲ ತನಿ ಎರೆಯೋಣ/ತಾಯ ಹಾಲ ಋಣ/ತೀರಿಪ ಇಂದೇ ಜನುಮದಿನ’ ಎಂಥ ಅದ್ಭುತ ಸಾಲುಗಳಿವು! ತಾಯ ಹಾಲ ಋಣ ಏನು ಮಾಡಿದರೂ ತೀರಿಸಲಾಗುವದಿಲ್ಲ ಎಂಬ ಒಂದು ಧನ್ಯತೆಯ ಇರುವಾಗಲೇ ಅದನ್ನು ಹೀಗೆ ಮಾಡಿ ತೀರಿಸಲೂ ಬಹುದೆಂಬ ಕಲ್ಪನೆ ಕೊಟ್ಟ ಚಿತ್ರಸಾಹಿತಿ ದಿ. ಚಿ.ಉದಯಶಂಕರ ಸಾಹಿತ್ಯಕ್ಕೊೊಂದು ದೊಡ್ಡ ಸಲಾಮು.

ಫೇಸ್‌ಬುಕ್, ವಾಟ್ಸಪ್‌ಗಳಿಲ್ಲದ ಆ ಕಾಲದಲ್ಲಿ ಗಂಡನ ಮನೆ ಸೇರಿದ ಹೆಣ್ಣು ಮಕ್ಕಳು ಶ್ರಾಾವಣ ಬರುವದನ್ನೆೆ ಕಾಯುತ್ತಿಿದ್ದರು. ಯಾರನ್ನೋೋ ಪ್ರೀತಿಸಿ, ಇನ್ಯಾಾರನ್ನೋೋ ಮದುವೆ ಮಾಡಿಕೊಳ್ಳುವ ಹೆಣ್ಣುಮಕ್ಕಳು ಆಗಲೂ ಇದ್ದರು. ಅವರೆಲ್ಲ ಆಷಾಢಕ್ಕೆೆ ತವರಿಗೆ ಬಂದವರು ಶ್ರಾಾವಣದ ಮೊದಲು ಹಬ್ಬ, ನಾಗರ ಪಂಚಮಿಗೆ ಊರಲ್ಲೇ ಇರುತ್ತಿಿದ್ದರು. ಅವಳು ಮದುವೆಯಾಗಿ ಹೋದಮೇಲೆ ಬೆಂದು, ಬಸವಳಿದು ಹೋಗಿದ್ದ ಅವಳ ಮಾಜಿ ಮಜನೂ, ಪ್ರಿಿಯಕರ ಈ ಹಬ್ಬಕ್ಕೆೆ ದಯನೀಯವಾಗಿ ಅವಳ ದಾರಿ ನೋಡುತ್ತಿಿರುತ್ತಾಾನೆ. ವಾಟ್ಸಪ್ ನಲ್ಲಿ ಇದಕ್ಕೆೆ ಸಂಬಂಧ ಪಟ್ಟಂತೆಯೇ ಒಂದು ತಮಾಷೆಯ ಸಂದೇಶಗಳು ಹೀಗಿವೆ: ‘ನಿನ್ನ ಹಳೇ ಪ್ರೇಯಸಿ ನಾಗರ ಪಂಚಮಿಗೆ ಊರಿಗೆ ಬಂದಳೆಂದು ಬೀಗಬೇಡ, ಅವಳು ತನ್ನ ಗಂಡ ಮಕ್ಕಳ ಹೆಸರಿನಲ್ಲಿ ಮಾತ್ರ ನಾಗಪ್ಪಗೆ ಹಾಲು ಹಾಕಿದ್ದನ್ನು ನೋಡಿದ್ದೇನೆ.’ ‘ಪಂಚಮಿಗೆ ಬಂದ ಪ್ರೇಯಸಿಯನ್ನು ನೋಡಿ ಅರಳಿವೆ ನಿನ್ನ ಕಂಗಳು, ಅರಳಿದ ಕಂಗಳಿಂದಲೇ ನೋಡು, ಅವಳಿಗೀಗ ಮೂರು ತಿಂಗಳು’.

ಹೀಗೆಲ್ಲ ಕಿಚಾಯಿಸುವ ಕವನಗಳು, ಚುಟುಕುಗಳು ಹಬ್ಬಕ್ಕೆೆ, ಅದರಲ್ಲೂ ಮನಸ್ಸು-ಮಿದುಳಿಗೆ ನೀಡುವ ಕಚಗುಳಿಗಳು, ಮೊಬೈಲ್, ಫೇಸ್‌ಬುಕ್, ಟಿವಿಗಳಿಲ್ಲದ ಆ ಕಾಲದಲಿ ಹಬ್ಬಗಳಿಗೆ ಕಾಯುತ್ತಿಿದ್ದೆೆವು, ಈಗೆಲ್ಲಿದೆ? ಮೊಬೈಲ್‌ಗೆ ಬರುವ ಮೆಸೇಜ್‌ಗಳಿಂದಲೇ ಹಬ್ಬ ಬಂತೆಂದು ಅರಿವಾಗುವ ದಿನಗಳಿವು. ಕಂಗಳಿಗೆ ಹಬ್ಬ, ನಾಲಗೆ-ಹೊಟ್ಟೆೆಗೆ ದೊಡ್ಡ ದೆಬ್ಬ. ಹಾವಿಗೆ ಹಾಲೆರೆಯಬಾರದು ವಿಷ ಹೆಚ್ಚುತ್ತದೆ ಎಂಬುದು ಗೊತ್ತಿಿದ್ದರೂ ಹಾವಿಗೆ ಹಾಲೆರೆಯುವದಕ್ಕೆೆ ವರ್ಷಕ್ಕೆೆ ಒಂದು ಹಬ್ಬವನ್ನೆೆ ಮಾಡಿರುವದು ಕುಚೋದ್ಯವೇ ಸರಿ.

ಇದು ವ್ಯಕ್ತಿಿ ನೀಚ ಎಂದು ಗೊತ್ತಿಿದ್ದರೂ ಅವನಿಗೆ ವೋಟು ಹಾಕಿ ಅವನನ್ನು ಆರಿಸಿ ನಾಯಕನನ್ನಾಾಗಿ ಮಾಡುವದಿಲ್ಲವೇ, ಹಾಗೆ. ನಾಗರಪಂಚಮಿ ಬರುವ ಮುಂಚೆಯೇ ಆಗೆಲ್ಲ ಅದರ ಸೂಚನೆಗಾಗಿ ಜೋಕಾಲಿ ಕಟ್ಟುವದು, ಬುಗುರಿಯಾಡಿಸುವದು, ಗಿಡಗಳ ಕೆಳಗಿನ ನಾಗಪ್ಪನ ಮೂರ್ತಿಗಳ ಕಟ್ಟೆೆಗಳನ್ನು ಶುಚಿಗೊಳಿಸುವದು ನಡೆಯುತ್ತಿಿತ್ತು. ಮನೆಯ ಜಂತಿಗೋ, ತೊಲೆಗೋ ಜೋಕಾಲಿ ಕಟ್ಟಿಿ ನಾಲ್ಕೈದು ಬಾರಿ ತೂಗಿಕೊಂಡರೆ, ಸಣ್ಣಗೆ ಮಣ್ಣು ಉದುರಲು ಆರಂಭವಾಗುತ್ತಿಿತ್ತು, ಇಲ್ಲವೇ ಜಿರಕ್, ಕರಕ್ ಎಂಬ ಸದ್ದು ಕೇಳಿದ ಕೂಡಲೇ ಮನೆ ಹಿರಿಯರು ‘ಜೋಕಾಲಿ ಅಡಿ ನೀ ಮನಿ ಕೆಡವುತಿ ಹೋಗು’ ಎಂದು ಅದನ್ನು ಬಿಚ್ಚಿಿಬಿಡುತ್ತಿಿದ್ದರು. ಸ್ವತಂತ್ರವಾಗಿ ಮನ ಬಂದಷ್ಟು ಹೊತ್ತು ಮನೆಯಲ್ಲಿ ಜೋಕಾಲಿ ಆಡಲಾರದೇ ಊರಲ್ಲಿನ ಶಾಲೆ ಬಯಲಲ್ಲಿನ ಮರಕ್ಕೆೆ ಕಟ್ಟಿಿದ ಊರ ಜೋಕಾಲಿಗಳಿಗೆ ಹೋದರೆ ಅಲ್ಲಿ ದೊಡ್ಡ ಕ್ಯೂ. ನಮ್ಮ ಪಾಳಿ ಬಂದರೆ ಎರಡೋ, ಮೂರೋ ಜುರುಕಿ ಅಷ್ಟೆೆ, ಇಳಿಸಿ ಬಿಡುತ್ತಿಿದ್ದರು.

ಎದುರಾಬದುರಾ ಎರಡು ಜೋಕಾಲಿ ಕಟ್ಟಿಿ ಇಬ್ಬರು ಕುಳಿತು ಪರಸ್ಪರ ಎದುರು ಹಗ್ಗಕ್ಕೆೆ ಕಾಲಿನ ಪೋಟಿ ಕೊಟ್ಟು ಜೀಕುವದು, ಹಾಗೆ ಸ್ಪೀಡಾಗಿ ಜೀಕಿ, ಎದುರಿನ ಹಗ್ಗವನ್ನು ಅವನು ಕುಳಿತಂತೇ ಕಾಲಿನಿಂದ ಮೇಲಕ್ಕೆೆ ಒದ್ದು ಅವನನ್ನು ಎಗರಿಸಿ ಮತ್ತೆೆ ಚಕ್ಕೆೆಂದು ಅದನ್ನು ಕಾಲುಗಳಿಂದಲೇ ಹಿಡಿದು ಅವನನ್ನು ಜೀಕಲು ಹಚ್ಚುವದು, ಸರಿಯಾಗಿ ಎರಡೂ ಕಾಲಿನಿಂದ ಎದುರಿನವನನ್ನು ಹಿಡಿಯಲಾಗದಿದ್ದರೆ, ಪರಸ್ಪರರ ಮೊಣಕಾಲು ಚಿಪ್ಪುುಗಳು ಗುದ್ದಿಕೊಂಡು ಆಕ್ಸಿಿಡೆಂಟ್ ಆಗುತ್ತಿಿತ್ತು, ನೆರದ ಜನ ಹೋ ಎಂದು ಕೂಗುತ್ತಿಿದ್ದರು, ಅಲ್ಲಿಗೆ ಅವರ ಪಾಳಿ ಮುಗಿದು, ಮತ್ತಿಿಬ್ಬರು ಏರುತ್ತಿಿದ್ದರು ಮೊಳಕಾಲು ಚಿಪ್ಪುುಗಳು ಒಡೆಯಬಾರದೆಂದು, ಚಿಪ್ಪುುಗಳಿಗೆ ಧೋತರವನ್ನು ಬಿಗಿದುಕೊಳ್ಳುತ್ತಿಿದ್ದರು ಅವೇ ಆಗಿನ ‘ನೀ ಕ್ಯಾಾಪ್’ಗಳು.

ಎಲ್ಲಿ ಹೋದವೋ ಇಂಥಾ ಆಟಗಳು? ಕೊಬ್ಬರಿ ಬಟ್ಟಲುಗಳಿಗೆ ತೂತುಮಾಡಿ ದಾರ ಪೋಣಿಸಿ ಅವನ್ನು ಗಿರ್‌ರ್‌‌ರ್ ಎಂದು ತಿರುಗಿಸಿ ಎರಡೂ ಕೈಗಳಿಂದ ಅದನ್ನು ಮ್ಯಾಾನೇಜು ಮಾಡುವ ಆಟ, ಬುಗುರಿಗಳನ್ನು ನೆಲದ ಮೇಲೆ, ಅಂಗೈ ಮೇಲೆ, ಆಡಿಸವದು, ನಮ್ಮ ಬುಗುರಿಯಿಂದಲೇ ಇನ್ನೊೊಬ್ಬನ ಬುಗುರಿಯನ್ನು ಕಚ್ಚುಮಾಡುವದು, ಒಂದೇ ಎರಡೆ? ಬಾಲ್ಯದ ಹಬ್ಬಕ್ಕಿಿರುವ ಸೊಗಸು ಈಗೆಲ್ಲಿದೆ? ಹಬ್ಬಗಳು ಬರುವದನ್ನು ಕಾಯುತ್ತಿಿದ್ದ ಆ ದಿನಗಳೆಲ್ಲಿ? ಮೊಬೈಲ್‌ನಲ್ಲಿ ಒಂದು ಮೆಸೇಜ್ ಕಳಿಸಿ ಬಿಟ್ಟರೆ, ‘ಸೇಮ್ ಟು ಯೂ’ ಎಂದು ನಮಗೆ ಬಂದವುಗಳಿಗೆ ಟೈಪ್ ಮಾಡಿಬಿಟ್ಟರೆ ಹಬ್ಬವೇ ಮುಗಿದು ಹೋಯಿತು. ಮನೆಯಲ್ಲಿ ಹಬ್ಬದೂಟವೇ ಇಲ್ಲ, ಹಬ್ಬವೆಂದರೆ ಹೋಟಲೂಟವಯ್ಯ ಎಂಬಂತಾಗಿದೆ. ಮನೆಯ ಎಲ್ಲರಿಗೂ ಪ್ರೈವಸಿ ಬೇಕು, ನಮಗೆ ಲೋನ್ಲಿಿನೆಸ್ ಇಷ್ಟವೆಂದು ಯಾರು ಯಾರನ್ನೂ ಕರೆಯುತ್ತಿಿಲ್ಲ. ಹೀಗೆ ಹದಗೆಟ್ಟು ಹೋಗಿರುವ ಹದಿಹರೆಯದವರಿಗೇ ಹಬ್ಬಗಳು ಬೇಕಿಲ್ಲವೆಂದರೆ ಹಿರಿಯರೇನು ಮಾಡಿಯಾರು ಪಾಪ! ‘ಐಯಾಮ್ ನಾಟ್ ಇಂಟರೆಸ್ಟೆೆಡ್, ಸ್ಸಾಾರಿ ಎಂದುಬಿಟ್ಟರೆ ಮುಗಿಯಿತು, ಬಾರಾ ಖೂನಿ ಮಾಫ್.

ಹರೆಯಕ್ಕೆೆ ಹದಬರುವದು ಬಾಲ್ಯದ ನೆನಪುಗಳಿಂದ, ಮುಪ್ಪಿಿಗೆ ಮುದ ಬರುವದು ಹರೆಯದ ನೆನಪುಗಳಿಂದ ಎಂಬ ಸತ್ಯ ಈಗಿನವರಿಗೆ ಹೊಳೆಯುತ್ತಿಿಲ್ಲ. ಈಗ ಬಾಲ್ಯವೆಂದರೆ ಸ್ಕೂಲು, ಮಾರ್ಕ್ಸ, ಕಂಪ್ಯೂೂಟರ್. ಹರೆಯವೆಂದರೆ ಗರ್ಲ್‌ಫ್ರೆೆಂಡ್, ಜಾಲಿ ಡೇಸ್, ಶೌರ್ಯ-ಸಾಹಸವೆಂದರೆ ಕ್ರೈಮ್. ಮುಪ್ಪಿಿಗೆ, ರೋಗ, ನರಳಾಟ, ಪಶ್ಚಾಾತ್ತಾಾಪ.

ಹಬ್ಬಗಳು ಬರುವದೇ, ಅವುಗಳ ಆಚರಣೆಯೇ ಮನೋವಿಕಾಸಕ್ಕೆೆ ಎಂಬ ಸತ್ಯ ಈಗಿನ ಪೀಳಿಗೆಗೆ ಅರಿವಾಗುತ್ತಿಿಲ್ಲ. ರಾತ್ರಿಿ ಎರಡಾದರೂ ಮಲಗದ ಮಕ್ಕಳು, ಬೆಳಗ್ಗೆೆ ಬೇಗ ಎಬ್ಬಿಿಸಬೇಡಿ ಎಂಬ ಬೆದರಿಕೆ ಹಾಕಿಯೇ ಮಲಗಿರುತ್ತಾಾರೆ. ಇದು ಬರೀ ಬೆಳಗಲ್ಲೋೋ ಅಣ್ಣಾಾ ಎಂಬುದನ್ನು ಇವರಿಗೆ ಹೇಳುವವರ್ಯಾಾರು? ವಾಟ್ಸಾಾಪ್, ಫೇಸ್‌ಬುಕ್‌ಗಳಲ್ಲಿ ಒಂದು ವಿಡಿಯೋ ತುಂಬಾ ವೈರಲ್ ಆಗಿ ಹರಿದಾಡುತ್ತಿಿದೆ, ಅದು ಚೀನಾ ದೇಶದ ಮಕ್ಕಳು, ಯುವಕರದು.

ನಮ್ಮ ಕೈಗೆ ಸ್ಮಾಾರ್ಟಫೋನು ಕೊಟ್ಟು ಅವರು ಆಡುತ್ತಿಿರುವ ಆಟಗಳದ್ದು, ಚಿಣ್ಣಿಿದಾಂಡು, ಖೋಖೋ, ಲಗೋರಿ, ಕಬಡ್ಡಿಿ, ಅಪ್ಪಾಾಲೆ ತಿಪ್ಪಾಾಲೆ, ನೀಬಗ್ಗು- ನಾ ಹಾರು, ಗೋಲಿ, ಗೊಟಗುಣಿ, ಇತ್ಯಾಾದಿ. ನಮ್ಮದೇ ಆಗಿದ್ದ ಭಗವದ್ಗೀತೆ, ವೇದಮಂತ್ರಗಳು ಇವುಗಳಿಂದ ಅವರು ಆಕರ್ಷಿತರಾಗಿದ್ದಾಾರೆ. ಆಟಗಳಿಂದ ಆರೋಗ್ಯವನ್ನೂ, ಮಂತ್ರಗಳಿಂದ ಮನಶ್ಶಾಾಂತಿಯನ್ನು ಅವರು ಪಡೆಯುತ್ತಿಿದ್ದಾಾರೆ.

ಅವರು ಸಾಕಾಗಿ ಬಿಸಾಕಿರುವ ಯಂತ್ರಗಳಿಂದ ನಾವಿಂದು ಯಂತ್ರಗಳೇ ಆಗಿಹೋಗಿದ್ದೇವೆ. ಎಲ್ಲ ದೇಶಗಳವರು ಬಿಸಾಡಿದ್ದೇ, ಬಿಟ್ಟಿಿದ್ದೇ ನಮಗೆ ಮಹಾ ಪ್ರಸಾದವಾಗುತ್ತಿಿರುವದು ಶತಮಾನದ ದುರ್ದೈವ. ನಮ್ಮ ಗುರುಗಳಾದ ದಿ. ಬೀಚಿಯವರು ಬಹು ಹಿಂದೆಯೇ ವಾರ ಪತ್ರಿಿಕೆಯೊಂದರಲ್ಲಿ ಪ್ರಶ್ನೆೆಗೆ ಉತ್ತರಿಸುತ್ತಾಾ ‘ಭಾರತವೆಂದರೇನು’ ಎಂದು ಕೇಳಿದ ಓದುಗರಿಗೆ ಸರಳವಾಗಿ ಹೀಗೆ ಉತ್ತರಿಸಿದ್ದರು: ‘ಭಾರತವೆಂದರೆ ಜಗತ್ತಿಿನ ಕಸದ ಬುಟ್ಟಿಿ.

ಜಗತ್ತಿಿನ ಯಾವ ದೇಶದಲ್ಲೇ ಆಗಲಿ, ಅವರ ಮನುಷ್ಯರು, ಯಂತ್ರಗಳು, ತಂತ್ರಜ್ಞಾಾನ, ಧರ್ಮ, ದೇವರು, ಕೆಟ್ಟು ಕೆರ ಹಿಡಿದವೆಂದರೆ ಅದನ್ನು ಭಾರತಕ್ಕೆೆ ಕಳಿಸಿಬಿಡುವದು. ಇಲ್ಲಿ ಅದನ್ನು, ಅಂಥವನ್ನು ಮಾಡಲು ಬುದ್ಧಿಿಜೀವಿಗಳ, ಜ್ಞಾಾನ ಪೀಠಿಗಳ ದೊಡ್ಡದಂಡೇ ಅವುಗಳನ್ನು ಸ್ವಾಾಗತಿಸಲು ಏರ್‌ಪೋರ್ಟಿಗೆ ಮಾಲೆ ಹಿಡಿದು ಹೋಗಲು ಸಿದ್ದವಿರುತ್ತದೆ ಎಂಬುದು ಅವರಿಗೆ ಖಾತ್ರಿಿಯಾಗಿ ಹೋಗಿದೆ.

ಸದ್ಯಕ್ಕೆೆ ಸಮಾಧಾನವೆಂದರೆ ನಮ್ಮ ಹಬ್ಬಗಳನ್ನು ಮಾತ್ರ ನಾವಿನ್ನೂ ಮಾರಿಕೊಂಡಿಲ್ಲ , ಹಳ್ಳಿಿಗರು, ಅನಕ್ಷರಸ್ಥರು ಎನಿಸಿಕೊಂಡವರೇ ಇವನ್ನು ಕಾಪಾಡಿಕೊಂಡು ಬರುತ್ತಿಿದ್ದಾಾರೆ. ಆದರೆ ನಗರದವರು ‘ಶ್ರಾಾವಣಾ ಬಂತು, ನಾಡಿಗೆ ನಮ್ಮ ಕಾಡಿಗೆ, ನಮ್ಮ ಬೀಡಿಗೆ’ ಎಂದು ಹಾಡು ಕಟ್ಟಿಿದ್ದಾಾರಾಗಲಿ ಅದನ್ನು ಸ್ವಾಾಗತಿಸುವದು ನಮ್ಮ ಹಳ್ಳಿಿಗರೇ. ನಾಗರಪಂಚಮಿ ಮುಗಿದ ಮೇಲೆ ಮನೆಗಳ ಮುಂದೆ ಬರುವ ಭಿಕ್ಷೆಗೆ ಬರುವ ದಾಸಯ್ಯ, ಜೋಗಿತಿ, ಜೋಗಮ್ಮನವರು ‘ಭಿಕ್ಷಾ ಕೊಡು ಯವ್ವಾಾ, ಅನ್ನ ರೊಟ್ಟಿಿ ಬ್ಯಾಾಡ, ಹಬ್ಬಕ್ಕೆೆ ಉಂಡಿ ಮಾಡಿಲ್ಲೇನು? ಉಂಡಿ ಹಾಕರಿ’ ಎಂದೇ ಬೇಡುತ್ತಾಾರೆ. ಬಾವಿಕಟ್ಟೆೆಯ ಮೇಲಿನ ನಾಗಪ್ಪಗೆ ಇಡೀ ಓಣಿಯ, ಅರ್ಧ ಊರಿನ ಜನ ಬಂದು ಮಾಡಿದ ಖಾದ್ಯಗಳನ್ನೆೆಲ್ಲ ಜೋಡಿಸಿಟ್ಟು, ಹಾಲು ಹಾಕಿ ಪೂಜೆ ಮಾಡಿದ ಮೇಲೆ ಅದಕ್ಕೆೆ ನಾಯಿ, ಹಂದಿ ಜೊತೆ ಭಿಕ್ಷುಕರೂ ಮುಗಿಬಿದ್ದು ಆರಿಸಿ ಜೋಳಿಗೆ, ಉಡಿ ತುಂಬಿಕೊಳ್ಳುತ್ತಿಿದ್ದ ದೃಶ್ಯ ಕಣ್ಣಿಿಗೆ ಕಟ್ಟಿಿದೆ.

ಹಾಗೆ ಬಡಿದಾಡಿ ತುಂಬಿಕೊಂಡು, ತಿಂದು ಹೋಗುತ್ತಿಿದ್ದ ಇವರಿಂದಲೇ ನಾಗಪ್ಪನ ಕಟ್ಟೆೆ ಸ್ವಚ್ಛವಾಗಿ ನೆಕ್‌ಟ್ಸ್‌‌ಬರುವವರ ಪೂಜೆಗೆ ನಾಗಪ್ಪನ ಕಟ್ಟೆೆ ಶುದ್ಧ ವಾಗುತ್ತಿಿತ್ತು. ಬಂದವರು ‘ಅಯ್ಯೋ, ಇನ್ನು ಯಾರೂ ಬಂದಿಲ್ಲ, ನಮದ ಫಸ್‌ಟ್‌ ನೇವೈದ್ಯ ನೋಡು ನಾಗಪ್ಪಗೆ’ ಎಂದು ಹಿಗ್ಗುತ್ತಿಿದ್ದರೆ ಸುತ್ತ ನಿಂತಿದ್ದ ಭಿಕ್ಷುಕರು, ನಾಯಿ, ಹಂದಿ ಆಕಳು ಮನದಲ್ಲೇ ನಗುತ್ತಿಿದ್ದವೇನೋ ಎನಿಸುತ್ತಿಿತ್ತು. ಮಧ್ಯಾಾಹ್ನ ಒಂದು, ಎರಡು ಗಂಟೆವರೆಗೂ ಈ ಪೂಜೆ ನಿರಂತರ ನಡೆಯುತ್ತಿಿತ್ತು. ಓಣಿಯೆಲ್ಲ ಬಳೆಗಳ ಸದ್ದು, ಹೊಸ ಸೀರೆ, ಮುಡಿದ ಹೂಗಳ ಘಮಲು. ಈಗ , ಇಂದು ಬಂದ ನೀವು ಮತ್ತೆೆ ವರ್ಷದ ತನಕ ಈ ಕಡೆ ತಿರುಗಿ ನೋಡುವದಿಲ್ಲ ಎಂಬಂತೆ ಕಟ್ಟೆೆಯ ನಾಗಪ್ಪನೂ ಎಲ್ಲರನ್ನೂ, ಎಲ್ಲವನ್ನೂ ಸ್ವೀಕರಿಸುತ್ತಿಿದ್ದ.

ಅಕಸ್ಮಾಾತ್ ನಿಜವಾದ ಹಾವೇ ಬಂದು ಸ್ವೀಕರಿಸುತ್ತಿಿದ್ದರೆ, ಕಟ್ಟೆೆಯ ಬಳಿ ಒಬ್ಬರೂ ಸುಳಿಯುತ್ತಿಿರಲಿಲ್ಲವೇನೋ? ಅದಕ್ಕಲ್ಲವೇ ಪ್ರಸಿದ್ದ ವಚನ, ‘ಕಲ್ಲ ನಾಗರ ಕಂಡರೆ ಹಾಲನೆರೆಯೆಂಬರು, ದಿಟದ ನಾಗರ ಕಂಡರೆ ಕೊಲ್ಲೆೆಂಬರಯ್ಯಾಾ’ ಎಂದಿರುವದು? ಬರಬರುತ್ತಾಾ ಈ ದೇಶದ ಪರಿಸ್ಥಿಿತಿ ಹೇಗಾಗುತ್ತಿಿದೆಯೆಂದರೆ ನಿಜದ ಜೀವಂತ ವ್ಯಕ್ತಿಿಗಿಂತ ಪೋಟೋದೊಳಗಿನ ವ್ಯಕ್ತಿಿಗೇ ಗೌರವ ಕೊಡುವ ಪರಿಪಾಠ ಹೆಚ್ಚುತ್ತಿಿದೆ. ನಿಮಗೆ ಗೌರವ ಬೇಕು ಎಂದರೆ ಬೇಗ ಫೋಟೋ ಫ್ರೇಮಿನೊಳಗೆ ಸೇರಿಕೊಳ್ಳಬೇಕು.
ಈ ವಾರದ ನಾಗರ ಪಂಚಮಿ ಹಬ್ಬದ ಹಾವು ನನ್ನ ತಲೆಯೊಳಗೆ ಇಷ್ಟೆೆಲ್ಲ ಹರಿದಾಡಿದೆ. ಈಗ ಇದನ್ನು ನಿಮ್ಮ ತಲೆಯೊಳಗೂ ಬಿಟ್ಟೆೆ, ಹರಿದಾಡಿದ ಅನುಭವವಾದರೆ ನೀವು ಎಚ್ಚರವಾಗಿದ್ದೀರಿ ಎಂದರ್ಥ. ಇಲ್ಲವಾದರೆ…

Leave a Reply

Your email address will not be published. Required fields are marked *