Tuesday, 5th July 2022

ಖನಿಜನಿಧಿ ಅಡಿ ಆರೋಗ್ಯಕ್ಕೆ ಆದ್ಯತೆ

ಶಾಸಕರು ಒತ್ತಾಯಕ್ಕೆ ಜಿಲ್ಲಾ ಉಸ್ತುವಾರಿ ಸಚಿವರ ಅಸ್ತು

ಬಳ್ಳಾರಿ: ಜಿಲ್ಲಾ ಖನಿಜ ನಿಧಿ(ಡಿಎಂಎಫ್)ಯಲ್ಲಿನ ಅನುದಾನ ಬಳಸಿಕೊಂಡು ಜಿಲ್ಲೆಯಲ್ಲಿನ ಆರೋಗ್ಯ ಕ್ಷೇತ್ರ ಬಲವರ್ಧನೆಗೆ ಆದ್ಯತೆ ನೀಡಬೇಕು ಮತ್ತು ಕೋವಿಡ್ ನಿಯಂತ್ರಣಕ್ಕೆ ಹೆಚ್ಚಿನ ಒತ್ತು ನೀಡಬೇಕು. ನಂತರ ಉಳಿದ ಅನುದಾನದಲ್ಲಿ ಶಿಕ್ಷಣ ಸೇರಿ ದಂತೆ ಉಳಿದ ಕ್ಷೇತ್ರಗಳತ್ತ ಗಮನಹರಿಸುವುದು ಸೂಕ್ತ ಎಂದು ಜಿಲ್ಲೆಯ ಎಲ್ಲಾ ಶಾಸಕರು ಒಕ್ಕೋರಲ ಒತ್ತಾಯ ಮಾಡಿದರು.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಬಿ.ಎಸ್. ಆನಂದ ಸಿಂಗ್  ಅಧ್ಯಕ್ಷತೆಯಲ್ಲಿ ನಡೆದ ಡಿಎಂಎಫ್ ಸಭೆಯಲ್ಲಿ ಶಾಸಕರೆಲ್ಲರೂ ಒಕ್ಕರೊಲಿನಿಂದ ಅಭಿಪ್ರಾಯ ವ್ಯಕ್ತಪಡಿಸಿದರು. ಶಾಸಕರೆಲ್ಲರ ಒಕ್ಕರೋಲಿನ ಒತ್ತಾಯಕ್ಕೆ ಸಚಿವ ಬಿ.ಎಸ್. ಆನಂದಸಿಂಗ್  ಸಹಮತ ವ್ಯಕ್ತಪಡಿಸಿ ಕೂಡಲೇ ಜಿಲ್ಲೆಯ ಆರೋಗ್ಯ ಕ್ಷೇತ್ರದ ಸುಧಾರಣೆ ಹಾಗೂ ಬಲವರ್ಧನೆ, ಕೋವಿಡ್ ನಿಯಂತ್ರಣ ಹಾಗೂ ಚಿಕಿತ್ಸೆಗೆ ಪರಿಣಾಮಕಾರಿ ಕ್ರಮಗಳನ್ನು ಕೈಗೊಳ್ಳುವ ನಿಟ್ಟಿನಲ್ಲಿ ಆಕ್ಸಿಜನ್ ಆಂಬ್ಯುಲೆನ್ಸ್,ವೆಂಟಿಲೇಟರ್ ಸೌಲಭ್ಯ ಹಾಗೂ ಇನ್ನೀತರ ಆರೋಗ್ಯ ಸಂಬಂಧಿತ ಸೌಲಭ್ಯಗಳನ್ನು ಒದಗಿಸುವ ನಿಟ್ಟಿನಲ್ಲಿ ವಾರದೊಳಗೆ ಕ್ರಿಯಾಯೋಜನೆ ರೂಪಿಸಿ ಸಲ್ಲಿಸುವಂತೆ ಜಿಲ್ಲಾಧಿಕಾರಿ ಎಸ್.ಎಸ್.ನಕುಲ್ ಅವರಿಗೆ ಸೂಚಿಸಿದರು.

ಈ ಕ್ರಿಯಾಯೋಜನೆಗೆ ಆಗುವ ವೆಚ್ಚ ಹೊರತುಪಡಿಸಿ ಉಳಿದ ಅನುದಾನವನ್ನು ಶಿಕ್ಷಣ, ರಸ್ತೆ ನಿರ್ಮಾಣ,ಕುಡಿಯುವ ನೀರು ಹಾಗೂ ಇನ್ನೀತರ ಕ್ಷೇತ್ರಗಳಿಗೆ ಬಳಸಿಕೊಳ್ಳಲಾಗುವುದು ಎಂದು ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿವ ಬಿ.ಎಸ್. ಆನಂದಸಿಂಗ್ ಅವರು ತಿಳಿಸಿದರು.

ಜಿಲ್ಲೆಯ ಅಭಿವೃದ್ಧಿ,ಕೋವಿಡ್ ನಿಯಂತ್ರಿಸುವ ಹಾಗೂ ಇನ್ನೀತರ ವಿಷಯಗಳಲ್ಲಿ ಶಾಸಕರು ಯಾವ ರೀತಿಯ ಸಲಹೆಗಳನ್ನು ನೀಡುತ್ತಾರೋ ಅವುಗಳನ್ನು ಪರಿಗಣಿಸಿ; ಅದನ್ನು ಬಿಟ್ಟು ಯಾವುದೇ ಕಾರಣಕ್ಕೂ ಅಸಹಾಯಕತೆ ತೋರಬೇಡಿ ಎಂದು ಅಧಿಕಾರಿಗಳಿಗೆ ಜಿಲ್ಲಾ ಉಸ್ತುವಾರಿ ಸಚಿವ ಆನಂದಸಿಂಗ್ ಅವರು ಖಡಕ್ ಸೂಚನೆ ನೀಡಿದರು.

ಬಳ್ಳಾರಿ ಜಿಲ್ಲೆಯ ಗ್ರಾಮೀಣ ಪ್ರದೇಶಗಳಲ್ಲಿ ಕೊರೊನಾ ಕುರಿತು ಅμÉ್ಟೂಂದು ಜಾಗೃತಿ ಇಲ್ಲ;ಹೀಗಾಗಿಯೇ ಜನರು ಬಹುತೇಕ ಮಾಸ್ಕ್ ಧರಿಸುತ್ತಿಲ್ಲ ಮತ್ತು ಸಾಮಾಜಿಕ ಅಂತರ ಕಾಪಾಡುತ್ತಿಲ್ಲ ಮತ್ತು ಜಾಗೃತಿಯ ಅವಶ್ಯಕತೆ ಇದ್ದು,ಅರಿವು ಮೂಡಿಸಿ ಎಂದು ಸಭೆಯಲ್ಲಿ ಪ್ರಸ್ತಾಪಿಸಿದ ಶಾಸಕ ನಾಗೇಂದ್ರ ಅವರ ಮಾತಿಗೆ ಜಿಲ್ಲಾ ಉಸ್ತುವಾರಿ ಸಚಿವ ಆನಂದಸಿಂಗ್ ಅವರು ಗ್ರಾಮೀಣ ಪ್ರದೇಶ ಗಳಲ್ಲಿ ಹಾಗೂ ರಿಮೋಟ್ ಏರಿಯಾಗಳಲ್ಲಿ ಕೋವಿಡ್ ಕುರಿತು ಪರಿಣಾಮಕಾರಿಯಾಗಿ ಜಾಗೃತಿ ಮೂಡಿಸಿ ಎಂದು ಸೂಚಿಸಿದರು.

ಶೇ.80ರಷ್ಟು ಆಕ್ಸಿಜನ್ ಬಳ್ಳಾರಿಯಲ್ಲಿ ಉತ್ಪಾದನೆ: ಬಳ್ಳಾರಿಯಲ್ಲಿ ಇಡೀ ರಾಜ್ಯಕ್ಕೆ ಬೇಕಾಗುವ ಶೇ.80ರಷ್ಟು ಆಕ್ಸಿಜನ್ ಇಲ್ಲಿಂದಲೇ ಸರಬರಾಜಾಗುತ್ತಿದೆ;ಯಾವುದೇ ರೀತಿಯ ಕೊರತೆ ನಮ್ಮಲ್ಲಿಲ್ಲ. ಕೋವಿಡ್ ಆಸ್ಪತ್ರೆಯಾಗಿ ಕಾರ್ಯನಿರ್ವಹಿಸುತ್ತಿರುವ ಜಿಲ್ಲಾಸ್ಪತ್ರೆಯನ್ನು ನಾನ್ ಕೋವಿಡ್ ಆಸ್ಪತ್ರೆಯನ್ನಾಗಿ ಇನ್ಮುಂದೆ ಕಾರ್ಯನಿರ್ವಹಿಸಲಿದೆ ಎಂದು ಜಿಲ್ಲಾಧಿಕಾರಿ ಎಸ್.ಎಸ್. ನಕುಲ್ ಸಭೆಗೆ ತಿಳಿಸಿದರು. ಜಿಲ್ಲೆಯಲ್ಲಿ ಇದುವರೆಗೆ 31107ಪ್ರಕರಣಗಳು ದೃಢಪಟ್ಟಿದ್ದು,ಸದ್ಯ 2559 ಪ್ರಕರಣಗಳು ಮಾತ್ರ ಸಕ್ರಿಯವಾಗಿವೆ. ಕಳೆದ ಎರಡು ತಿಂಗಳ ಕೋವಿಡ್ ಪ್ರಮಾಣಕ್ಕೆ ಹೊಲಿಕೆ ಮಾಡಿ ನೋಡಿದರೇ ಈ ತಿಂಗಳ ಸೊಂಕಿತರ ಸಂಖ್ಯೆಯ ಪ್ರಮಾಣ ಇಳಿಕೆಯಿದೆ ಎಂಬುದನ್ನು ಅವರು ಪ್ರಸ್ತಾಪಿಸಿದರು.

1235 ಕೋಟಿ ರೂ. ಸಂಗ್ರಹ: ಜಿಲ್ಲಾ ಖನಿಜ ಪ್ರತಿಷ್ಠಾನ ಟ್ರಸ್ಟ್‍ಗೆ 2016ರಿಂದ ಇದುವರೆಗೆ 1235 ಸಂಗ್ರಹವಾಗಿದ್ದು,297 ಕೋಟಿ ರೂ.ಗಳ ಅನುದಾನ ಖರ್ಚು ಮಾಡಲಾಗಿದೆ.

ಜಿಲ್ಲಾ ಖನಿಜ ಪ್ರತಿμÁ್ಠನ ಟ್ರಸ್ಟ್ ಈವರೆಗೆ 5 ಹಂತದಲ್ಲಿ ಕ್ರಿಯಾ ಯೋಜನೆಯನ್ನು ತಯಾರಿಸಿ ಅನುಮೋದನೆಯನ್ನು ಪಡೆಯ ಲಾಗಿದೆ. ಇಲ್ಲಿಯವರೆಗೆ 1834 ಕೋಟಿ ರೂ. ಮೊತ್ತ ಹಂಚಿಕೆಯಾಗಿದೆ. ಅದರಲ್ಲಿ ಎಂಡೋಮೆಂಟ್(ದತ್ತಿ)ಗಾಗಿ ಶೇ.10ರಷ್ಟು, ಆಡಳಿತಾತ್ಮಕ ವೆಚ್ಚಕ್ಕಾಗಿ ಶೇ.5ರಷ್ಟು ಕಾಯ್ದಿರಿಸಿ ಉಳಿದ 1506 ಕೋಟಿ ರೂ.ಗಳ ಕ್ರಿಯಾಯೋಜನೆ ಮಂಜೂರಾತಿ ನೀಡಲಾಗಿದೆ ಎಂದು ಸಭೆಗೆ ಜಿಲ್ಲಾಧಿಕಾರಿ ಎಸ್.ಎಸ್.ನಕುಲ್ ಅವರು ವಿವರಿಸಿದರು.

ಜುಲೈ-2019ರಿಂದ ಇಲ್ಲಿಯ ವರೆಗೆ ಅಂದರೆ ಸೆಪ್ಟಂಬರ್-2020 ರವರೆಗಿನ ಅವಧಿಯಲ್ಲಿ 234,43,10,541.00 ರೂಪಾಯಿಗಳ ಅನುದಾನ ಬಳಕೆಯಾಗಿರುತ್ತದೆ. ಈ ಅಂಶಗಳನ್ನು ಪರಿಶೀಲಿಸಲಾಗಿ ಈ ಒಂದು ವರ್ಷದ ಅವಧಿಯಲ್ಲಿ ಅತೀ ಹೆಚ್ಚಿನ ಅನುದಾನವನ್ನು ಬಳಕೆ ಮಾಡಲಾಗಿದೆ ಎಂದರು.

ಡಿಎಂಎಫ್ ಅಡಿ ಇಲ್ಲಿವರೆಗೆ 1084 ಕಾಮಗಾರಿಗಳು ( 5 ಹಂತದ ಕ್ರಿಯಾ ಯೋಜನೆ) ಅನುಮೋದನೆಯಾಗಿರುತ್ತವೆ. ಅದರಲ್ಲಿ ಇಲ್ಲಿಯವರೆಗೆ 220 ಕಾಮಗಾರಿಗಳು ಮುಕ್ತಾಯವಾಗಿರುತ್ತವೆ. 285 ಕಾಮಗಾರಿಗಳು ಪ್ರಗತಿಯ ಹಂತದಲ್ಲಿರುತ್ತವೆ. ಉಳಿದ ಕಾಮಗಾರಿಗಳಿಗೆ ಆಡಳಿತಾತ್ಮಕ ಅನುಮೋದನೆಯನ್ನು ನೀಡಲಾಗಿದ್ದು, ಟೆಂಡರ್ ಪ್ರಕ್ರಿಯಲ್ಲಿವೆ ಎಂದು ಅವರು ವಿವರಿಸಿದರು.
ಜಿಲ್ಲಾ ಖನಿಜ ಪ್ರತಿμÁ್ಠನ ಟ್ರಸ್ಟ್ ನಿಧಿಯಡಿ 2020-21 ನೇ ಸಾಲಿಗಾಗಿ 84368.03 ಲಕ್ಷಗಳ ಕ್ರಿಯಾ ಯೋಜನೆಗೆ ಮಂಜೂರಾತಿ ಯನ್ನು ನೀಡಲಾಗಿದೆ ಎಂದು ಅವರು ತಿಳಿಸಿದರು.

ಕಾರ್ಯನಿರ್ವಹಣೆ ವರದಿ ಬಿಡುಗಡೆ: ಜಿಲ್ಲಾ ಖನಿಜ ಪ್ರತಿμÁ್ಠನ ಟ್ರಸ್ಟ್ ಗೆ ಇಲ್ಲಿಯವರೆಗೆ ಜಮಾ ಆಗಿರುವ ಮೊತ್ತ ಮತ್ತು ಬಿಡುಗಡೆಯಾಗಿರುವ ಮೊತ್ತಕ್ಕೆ ಸಂಬಂಧಿಸಿದಂತೆ 2019-20ನೇ ಸಾಲಿಗಾಗಿ ಚಾರ್ಟೆಡ್ ಅಕೌಂಟೆಂಟ್ ಅವರಿಂದ ಲೆಕ್ಕ ಪರಿ ಶೋಧನೆಯನ್ನು ಮಾಡಿಸಲಾಗಿದೆ. ಹಾಗೂ 2019-20 ನೇ ಸಾಲಿನಲ್ಲಿ ಜಿಲ್ಲಾ ಖನಿಜ ಪ್ರತಿμÁ್ಠನ ಟ್ರಸ್ಟ್ ವತಿಯಿಂದ ಕೈಗೊಳ್ಳ ಲಾದ ಕಾಮಗಾರಿಗಳಿಗೆ ಸಂಬಂಧಿಸಿದಂತೆ ವಾರ್ಷಿಕ ಕಾರ್ಯನಿರ್ವಹಣೆ ವರದಿಯನ್ನು ಸಿದ್ಧಪಡಿಸಲಾಗಿದೆ.

ಸದರಿ ಲೆಕ್ಕ ಪರಿಶೋಧನಾ ವರದಿಗೆ ಸಭೆಯಲ್ಲಿ ಅನುಮೋದನೆ ನೀಡಲಾಗಿದೆ ಹಾಗೂ 2019-20 ನೇ ಸಾಲಿನ ವಾರ್ಷಿಕ ಕಾರ್ಯ ನಿರ್ವಹಣೆ ವರದಿಯನ್ನು ಸಭೆಯಲ್ಲಿ ಬಿಡುಗಡೆ ಮಾಡಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಆನಂದಸಿಂಗ್ ಅವರು ವಿವರಿಸಿದರು.

ಸಿಎಸ್‍ಆರ್ ಕುರಿತು ಸಭೆ ನಡೆಸಿ: ಜಿಲ್ಲೆಯಲ್ಲಿ ಜಿಂದಾಲ್ ಸೇರಿದಂತೆ ಅನೇಕ ಕಾರಖಾನೆಗಳಿದ್ದು,ಅವುಗಳು ಸಿಎಸ್‍ಆರ್ ಅಡಿ ಶೇ.2ರಷ್ಟು ತಮ್ಮ ಆದಾಯದಲ್ಲಿನ ಹಣ ಖರ್ಚು ಮಾಡಿರುವುದಕ್ಕೆ ಸಂಬಂಧಿಸಿದಂತೆ ಎಲ್ಲ ಕಾರಖಾನೆಗಳೊಂದಿಗೆ ಜಿಲ್ಲಾಡ ಳಿತವು ಜಿಲ್ಲಾ ಉಸ್ತುವಾರಿ ಸಚಿವರ ಅಧ್ಯಕ್ಷತೆಯಲ್ಲಿ ಸಭೆ ನಡೆಸಬೇಕು ಎಂದು ಶಾಸಕರು ಒತ್ತಾಯಿಸಿದರು. ಇದಕ್ಕುತ್ತರಿಸಿದ ಸಚಿವ ಆನಂದಸಿಂಗ್ ಅವರು ಶಾಸಕರು ಕೇಳುತ್ತಿರುವುದು ನ್ಯಾಯಸಮ್ಮತವಾಗಿದ್ದು,ಕೂಡಲೇ ಎಲ್ಲ ಕಾರಖಾನೆಗಳಿಗೆ ನೋಟಿಸ್ ಜಾರಿ ಮಾಡಿ ಮತ್ತು ಸಭೆಗೆ ದಿನಾಂಕ ನಿಗದಿಪಡಿಸಿ ಎಂದು ಜಿಲ್ಲಾಧಿಕಾರಿಗಳಿಗೆ ಸೂಚಿಸಿದರು.

ಡಿಎಂಎಫ್ ಅಡಿ ಇದುವರೆಗೆ ಕೈಗೊಂಡ ಕಾಮಗಾರಿಗಳು ಮತ್ತು ಫಲಿತಾಂಶ ಸೇರಿದಂತೆ ವಿವಿಧ ವಿಷಯಗಳ ಕುರಿತು ಸಭೆಯಲ್ಲಿ ಚರ್ಚಿಸಲಾಯಿತು. ಈ ಸಂದರ್ಭದಲ್ಲಿ ಸಂಸದರಾದ ವೈ.ದೇವೇಂದ್ರಪ್ಪ, ಜಿಪಂ ಅಧ್ಯಕ್ಷೆ ಸಿ.ಭಾರತಿ ತಿಮ್ಮಾರೆಡ್ಡಿ, ಶಾಸಕರಾದ ಪಿ.ಟಿ.ಪರಮೇಶ್ವರ ನಾಯಕ್,ಈ.ತುಕಾರಾಂ, ಕರುಣಾಕರ ರೆಡ್ಡಿ, ಸೋಮಶೇಖರ್ ರೆಡ್ಡಿ, ಸೋಮಲಿಂಗಪ್ಪ, ಬಿ.ನಾಗೇಂದ್ರ, ಗಣೇಶ,ಭೀಮಾನಾಯಕ್, ಕೆ.ಸಿ.ಕೊಂಡಯ್ಯ,ಅಲ್ಲಂ ವೀರಭದ್ರಪ್ಪ,ಜಿಪಂ ಸಿಇಒ ಕೆ.ಆರ್.ನಂದಿನಿ ಮತ್ತಿತರರು ಇದ್ದರು.