ಆರೋಗ್ಯಕರ ತೂಕ ಇಳಿಕೆಗೆ ತಜ್ಞರ ಸಲಹೆಗಳೇನು?
ತೂಕ ಇಳಿಕೆಗಾಗಿ ಹೆಚ್ಚಿನ ಜನರು ಹರಸಾಹಸ ಪಡುವುದು ಇದೆ. ತೂಕ ಇಳಿಕೆಗೆ ಸಾಕಷ್ಟು ಜನರು ತಿನ್ನುವ ವಿಚಾರದಲ್ಲಿ ಕಠಿಣ ನಿಯಮ ಪಾಲಿಸುತ್ತಾರೆ. ಇಲ್ಲವೇ ಜಿಮ್ ಗೆ ಹೋಗಿ ಗಂಟೆಗಟ್ಟಲೆ ವರ್ಕೌಟ್ ಮಾಡಿ ಬೆವರಿಳಿಸುತ್ತಾರೆ. ಆದರೆ ನಮ್ಮ ಜೀವನ ಶೈಲಿಯಲ್ಲಿ ಕೆಲವೊಂದು ಸರಳ ಕ್ರಮವನ್ನು ಅಳವಡಿಸುವ ಮೂಲಕ ಮತ್ತು ಆಹಾರದಲ್ಲಿನ ಕೆಲವು ಬದಲಾವಣೆಗಳ ಮೂಲಕ ತೂಕ ನಷ್ಟಕ್ಕೆ ಸಹಾಯಕಾರಿ ಎಂದು ತಜ್ಞರೊಬ್ಬರು ಸಲಹೆ ನೀಡಿದ್ದಾರೆ.