Laser Angioplasty: ಲೇಸರ್ ಆಂಜಿಯೋಪ್ಲ್ಯಾಸ್ಟಿ ಚಿಕಿತ್ಸೆಯನ್ನು ಆರಂಭಿಸಿದ ಮಣಿಪಾಲ್ ಆಸ್ಪತ್ರೆ!
ಹಳೆ ವಿಮಾನ ನಿಲ್ದಾಣ ರಸ್ತೆಯಲ್ಲಿರುವ ಮಣಿಪಾಲ್ ಆಸ್ಪತ್ರೆ ನವೀನ ಲೇಸರ್ ಆಂಜಿಯೋಪ್ಲ್ಯಾಸ್ಟಿ ಚಿಕಿತ್ಸೆಯನ್ನು ಪರಿಚಯಿಸಿದೆ. ಈ ಚಿಕಿತ್ಸಾಕ್ರಮವು ಕ್ಯಾಲ್ಸಿಯಂ ಬ್ಲಾಕ್ ಗಳಿಂದ ಗಟ್ಟಿಯಾಗಿರುವ, ಅಥವಾ ಈ ಹಿಂದೆ ಚಿಕಿತ್ಸೆ ಕಷ್ಟ ಎಂದು ಪರಿಗಣಿಸಲಾದ ಅಪಧಮನಿ (ಆರ್ಟರಿ ಯಲ್) ಬ್ಲಾಕೇಜ್ ಹೊಂದಿರುವ ರೋಗಿಗಳಿಗೆ ಬೈಪಾಸ್ ಕಾರ್ಡಿಯಾಕ್ ಶಸ್ತ್ರಚಿಕಿತ್ಸೆಗಳಿ ಗಿಂತಲೂ ಸುರಕ್ಷಿತ ಮತ್ತು ಕಡಿಮೆ ಆಘಾತಕಾರಿ, ಮತ್ತು ಹೆಚ್ಚು ಪರಿಣಾಮ ಕಾರಿಯಾಗಿದೆ...
ಲೆಸರ್ ಆಂಜಿಯೋಪ್ಲಾಸ್ಟಿ -
ಬೆಂಗಳೂರು: ಹಳೆ ವಿಮಾನ ನಿಲ್ದಾಣ ರಸ್ತೆಯಲ್ಲಿರುವ ಮಣಿಪಾಲ್ ಆಸ್ಪತ್ರೆ ನವೀನ ಲೇಸರ್ ಆಂಜಿಯೋಪ್ಲ್ಯಾಸ್ಟಿ (Laser angioplasty) ಚಿಕಿತ್ಸೆಯನ್ನು ಪರಿಚಯಿಸಿದೆ. ಈ ಚಿಕಿತ್ಸಾಕ್ರಮವು ಕ್ಯಾಲ್ಸಿಯಂ ಬ್ಲಾಕ್ ಗಳಿಂದ ಗಟ್ಟಿಯಾಗಿರುವ, ಅಥವಾ ಈ ಹಿಂದೆ ಚಿಕಿತ್ಸೆ ಕಷ್ಟ ಎಂದು ಪರಿಗಣಿ ಸಲಾದ ಅಪಧಮನಿ (ಆರ್ಟರಿಯಲ್) ಬ್ಲಾಕೇಜ್ ಹೊಂದಿರುವ ರೋಗಿಗಳಿಗೆ ಬೈಪಾಸ್ ಕಾರ್ಡಿ ಯಾಕ್ ಶಸ್ತ್ರಚಿ ಕಿತ್ಸೆಗಳಿಗಿಂತಲೂ ಸುರಕ್ಷಿತ ಮತ್ತು ಕಡಿಮೆ ಆಘಾತಕಾರಿ, ಮತ್ತು ಹೆಚ್ಚು ಪರಿಣಾಮ ಕಾರಿಯಾಗಿದೆ.
ಡಾ. ಕೇಶವ ಆರ್, HOD ಮತ್ತು ಕನ್ಸಲ್ಟಂಟ್ – ಇಂಟರ್ವೆನ್ಶನಲ್ ಕಾರ್ಡಿಯಾಲಜಿ ಅವರ ಪ್ರಕಾರ, ಈ ತಂತ್ರಜ್ಞಾನದಿಂದ ಬಹು ಸ್ಟಂಟ್‌ಗಳು, ತೀವ್ರವಾದ ಅಥೆರೋಸ್ಕ್ಲಿರೋಸಿಸ್ ಹಾಗೂ ಅತಿ ಸೂಕ್ಷ್ಮ ಮತ್ತು ಕಿರಿದಾದ ಅಪಧಮನಿ ಸಮಸ್ಯೆಗಳಿಗೆ ಯಾವುದೇ ರೀತಿಯ ಭಯವಿಲ್ಲದೆ ಚಿಕಿತ್ಸೆ ನೀಡ ಬಹುದಾಗಿದೆ. ಇದರಿಂದ ಸಾಂಪ್ರದಾಯಿಕ ಆಂಜಿಯೋಪ್ಲಾಸ್ಟಿ ಗೆ ಸೂಕ್ತರಲ್ಲ ಎಂದು ಹೇಳಲಾಗಿದ್ದ ರೋಗಿಗಳಿಗೆ ಹೊಸ ಆಶಾಕಿರಣ ದೊರಕಿದೆ.
ಲೆಸರ್ ಆಂಜಿಯೋಪ್ಲಾಸ್ಟಿಯು, ನಿಯಂತ್ರಿತ ಬೆಳಕಿನ ಶಕ್ತಿಯನ್ನು ಬಳಸಿಕೊಳ್ಳುತ್ತದೆ. ಇದು ಗಟ್ಟಿಯಾಗಿರುವ ಅಥವಾ ಕ್ಯಾಲ್ಸಿಫೈಡ್ ಡೆಪಾಸಿಟ್‌ಗಳನ್ನು ವೇಪರೈಸ್ (ಆವೀಕರಣಗೊಳಿಸಿ) ಅಪಧಮನಿಯನ್ನು ಅತೀ ನಿಖರವಾಗಿ ಸ್ವಚ್ಛ ಮಾಡುತ್ತದೆ. ಇದರಿಂದ ಅಪಧಮನಿ ಗೋಡೆಗಳ ಮೇಲೆ ಒತ್ತಡ ಕಡಿಮೆಯಾಗಿ, ಅವುಗಳಿಗೆ ಹಾನಿಯಾಗುವ ಅಪಾಯವನ್ನು ಕಡಿಮೆ ಮಾಡುತ್ತದೆ ಮತ್ತು ಸರಾಗವಾದ ರಕ್ತಪ್ರವಾಹವನ್ನು ಅಣಿಯಾಗಿಸುತ್ತದೆ. ಇದಲ್ಲದೆ, ಇದು ವೇಗವಾಗಿ ಚೇತರಿಸಿ ಕೊಳ್ಳಲು ಸಹಾಯ ಮಾಡುತ್ತದೆ
ಇದನ್ನು ಓದಿ:Health Tips: ಕಟ್ಟಿದ ಮೂಗಿನ ಸಮಸ್ಯೆಯಿಂದ ಪರಿಹಾರ ಬೇಕೆ? ಇಲ್ಲಿದೆ ಸೂಪರ್ ಟಿಪ್ಸ್
ನಮ್ಮ ಇಂಟರ್ವೆನ್ಶನಲ್ ಕಾರ್ಡಿಯಾಲಜಿ ಸಾಮರ್ಥ್ಯಕ್ಕೆ ಈ ಹೊಸ ಸಾಧನ ಸೇರ್ಪಡೆ ಆಗಿ ರುವುದರಿಂದ, ದೊಡ್ಡ ಶಸ್ತ್ರಚಿಕಿತ್ಸೆ ಬೇಕಾಗುತ್ತಿದ್ದ ಕ್ಲಿಷ್ಟಕರ ಹೃದಯ ಸಮಸ್ಯೆಗಳಿರುವ ರೋಗಿಗಳಿಗೆ ಇದು ವಿಶೇಷ ಪ್ರಯೋಜನಕಾರಿಯಾಗಿದೆ ಎಂದು ಡಾ. ಎಚ್. ಸುದರ್ಶನ್ ಬಲ್ಲಾಳ ಅವರು ಹೇಳಿದ್ದಾರೆ.
ಲೆಸರ್ ಆಂಜಿಯೋಪ್ಲಾಸ್ಟಿ ಒಂದು ವೈದ್ಯಕೀಯ ವರದಾನವಾಗಿದ್ದು, ಇದು ಅತ್ಯಾಧುನಿಕ, ಕಡಿಮೆ ಆಘಾತಕಾರಿ ಚಿಕಿತ್ಸಾ ವಿಧಾನವಾಗಿದ್ದು ಉತ್ತಮ ಫಲಿತಾಂಶಗಳು ಮತ್ತು ವೇಗವಾದ ಚೇತರಿಕೆ ಯನ್ನು ನೀಡಲು ಸಹಾಯ ಮಾಡುತ್ತದೆ. ಇಂತಹ ಅತ್ಯಾಧುನಿಕ ಹೃದಯ ಚಿಕಿತ್ಸೆ ತಂತ್ರಜ್ಞಾನ ಗಳನ್ನು ಅಳವಡಿಸಿಕೊಂಡು, ದೀರ್ಘಕಾಲದ ಹೃದಯ ಆರೋಗ್ಯಕ್ಕಾಗಿ ಸುರಕ್ಷಿತ, ಪರಿಣಾಮಕಾರಿ ಮತ್ತು ರೋಗಿ ಸ್ನೇಹಿ ಚಿಕಿತ್ಸೆಗಳತ್ತ ಮಣಿಪಾಲ್ ಆಸ್ಪತ್ರೆ ತನ್ನ ಬದ್ಧತೆಯನ್ನು ಮತ್ತಷ್ಟು ಬಲಪಡಿಸಿದೆ