Makhana: ಪ್ರಧಾನಿ ಮೋದಿ ವರ್ಷದ 300 ದಿನ ಮಖಾನ ಸೇವಿಸೋದ್ಯಾಕೆ? ಏನಿದರ ಗುಟ್ಟು?
ಪ್ರಧಾನಿ ಮೋದಿ ಅವರು ವರ್ಷದ 365 ದಿನದಲ್ಲಿ 300 ದಿನ ಮಖಾನ ತಿನ್ನುತ್ತಾರೆ ಅದೊಂದು ಸೂಪರ್ ಫುಡ್ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದ ಬೆನ್ನಲ್ಲೇ ಮಖಾನ ಬೀಜದ ಬಗ್ಗೆ ಜನರಿಗೂ ಕುತೂಹಲ ಹೆಚ್ಚುತ್ತಿದೆ. ಹಾಗಾಗಿ ಇದರಿಂದ ಏನೆಲ್ಲ ಆರೋಗ್ಯ ಪ್ರಯೋಜನ ಸಿಗಬಹುದು ಎಂಬ ಕುರಿತು ಮಾಹಿತಿ ಇಲ್ಲಿದೆ.


ನವದೆಹಲಿ: ದೇಹ ಹೆಚ್ಚು ಸದೃಢವಾಗಿ ಇರಲು ನಾವು ಸೇವಿಸುವ ಆಹಾರ ಬಹುಮುಖ್ಯ ಪಾತ್ರವಹಿಸಲಿದೆ. ಈ ನಿಟ್ಟಿನಲ್ಲಿ ಕೆಲವು ಸೆಲೆಬ್ರಿಟಿಗಳು, ಸ್ಟಾರ್ ನಟ-ನಟಿಯರ ಫುಡ್ ಹ್ಯಾಬಿಟ್ ಬಗ್ಗೆ ಆಗಾಗ ಹೊಸ ವಿಚಾರ ತೆರೆದುಕೊಳ್ಳುತ್ತಲೇ ಇರುತ್ತದೆ. ದೇಶದ ಪ್ರಧಾನಿ ನರೇಂದ್ರ ಮೋದಿ ಅವರು ಕೂಡ ಯೋಗ ಮತ್ತು ಪೌಷ್ಟಿಕ ಆಹಾರ ಸೇವನೆ ಕುರಿತು ಆಗಾಗ ಸಾರ್ವಜನಿಕರಿಗೆ ಮಾರ್ಗದರ್ಶನ ನೀಡುತ್ತಲೇ ಇರುತ್ತಾರೆ. ಈ ಬಾರಿ ತಾವು ಸೇವಿಸುವ ಮಖಾನ ಆಹಾರವು(Makhana Health Tips) ಸೂಪರ್ ಫುಡ್ ಎಂದು ಕಾರ್ಯಕ್ರಮ ಒಂದರಲ್ಲಿ ತಿಳಿಸಿದ್ದಾರೆ. ಪಿಎಂ ಕಿಸಾನ್ ಸಮ್ಮಾನ್ 19ನೇ ಕಂತಿನ ಬಿಡುಗಡೆ ಸಮಾರಂಭಕ್ಕೆ ಭೇಟಿ ನೀಡಿದ್ದ ಮೋದಿಯವರಿಗೆ ಮಖಾನದಿಂದ ತಯಾರಿಸಿದ್ದ ಬೃಹತ್ ಹಾರ ಸಮರ್ಪಣೆ ಮಾಡಿದ್ದರು. ಈ ವೇಳೆ ಅವರು ವರ್ಷದ 365 ದಿನದಲ್ಲಿ 300 ದಿನ ಮಖಾನ ತಿನ್ನುವುದಾಗಿ ಹೇಳಿದ್ದಾರೆ.
ಕಾರ್ಯಕ್ರಮ ಉದ್ದೇಶಿಸಿ ಮಾತನಾಡುವಾಗ ಮೋದಿ ಅವರು ಬಹುತೇಕ ದಿನಗಳಲ್ಲಿ ಮಖಾನ ಸೇವನೆ ಮಾಡುತ್ತೇನೆ ಎಂದು ಹೇಳಿಕೊಂಡಿರುವ ಸುದ್ದಿ ಸಖತ್ ವೈರಲ್ ಆಗಿತ್ತು. ಮೋದಿ ಅವರು ವರ್ಷದ 365 ದಿನದಲ್ಲಿ 300 ದಿನ ಮಖಾನ ತಿನ್ನುವುದಾಗಿ ಮತ್ತು ಅದೊಂದು ಸೂಪರ್ ಫುಡ್ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದ ಬೆನ್ನಲ್ಲೇ ಮಖಾನ ಬೀಜದ ಬಗ್ಗೆ ಜನರಿಗೂ ಕುತೂಹಲ ಹೆಚ್ಚುತ್ತಿದೆ. ಹಾಗಾಗಿ ಇದರಿಂದ ಏನೆಲ್ಲ ಆರೋಗ್ಯ ಪ್ರಯೋಜನೆ ಸಿಗಬಹುದು ಎಂಬ ಕುರಿತು ಮಾಹಿತಿ ಇಲ್ಲಿದೆ.
ಮಖಾನ ಎನ್ನುವುದು ಯಾವುದೇ ತರನಾಗಿ ವಿದೇಶಿ ತಿನಿಸು ಆಗಿರದೇ ತಾವರೆ ಬೀಜದಿಂದ ಮಾಡಲ್ಪಟ್ಟ ಒಂದು ಉತ್ಪನ್ನ. ದೇಹಕ್ಕೆ ಪ್ರೋಟಿನ್ ಒದಗಿಸಲು, ಕೆಲವೊಂದು ರೋಗಗಳಿಗೆ ಔಷಧದ ರೀತಿಯಲ್ಲಿ ಕೂಡ ಮಖಾನ ಬಳಕೆ ಮಾಡಲಾಗುತ್ತಿದೆ. ಇವುಗಳನ್ನು ವಿಶೇಷ ಅಡುಗೆ ರೀತಿಯಲ್ಲಿ ಸೇವನೆ ಮಾಡಿದರೆ ಬಾಯಿಗೆ ರುಚಿ ಸಿಗುವ ಜೊತೆಗೆ ಅನೇಕ ಆರೋಗ್ಯ ಪ್ರಯೋಜನ ಸಹ ದೊರೆಯಲಿದೆ.
ಡಯೆಟಿಂಗ್ ಫುಡ್
ಡಯೆಟ್ ಮಾಡುವವರಿಗೆ ಮಖಾನ ಸೇವನೆ ಬಹಳ ಉತ್ತಮ ಪ್ರಯೋಜನೆ ನೀಡುತ್ತದೆ ಎನ್ನಬಹುದು. ದೇಹದ ತೂಕ ಇಳಿಕೆ ಮಾಡ ಬೇಕು ಎಂದು ಇದ್ದವರಿಗೆ ಹಸಿವು ಸಮಸ್ಯೆ ನೀಡಿದ್ದಂತಹ ಸಂದ ರ್ಭದಲ್ಲಿ ಮಖಾನ ಸೇವಿಸಿದರೆ ಹಸಿವು ಮುಕ್ತಿಯಾಗುವ ಜೊತೆ ಅನಗತ್ಯ ಫ್ಯಾಟ್ ಸಂಗ್ರಹವಾಗುವುದನ್ನು ತಡೆಯುತ್ತದೆ.
ನಿದ್ರಾ ಹೀನತೆಗೆ ಒಳ್ಳೆ ಮದ್ದು:
ಮಖಾನ ಸೇವಿಸುವುದರಿಂದ ಮಾನಸಿಕ ಮತ್ತು ದೈಹಿಕ ಒತ್ತಡದ ಸಮಸ್ಯೆ ನಿವಾರಣೆ ಆಗಲಿದೆ. ನಿದ್ರಾಹೀನತೆ ಸಮಸ್ಯೆ ಕೂಡ ಬರ ದಂತೆ ತಡೆಹಿಡಿಯುವ ನೆಲೆಯಲ್ಲಿ ಮಖನಾ ಸೇವೆ ಬಹುಮುಖ್ಯ ಪಾತ್ರ ವಹಿಸುತ್ತದೆ.
ಹೃದಯದ ಆರೋಗ್ಯ ವೃದ್ಧಿಗೆ ಸಹಕಾರಿ:
ಇತ್ತೀಚೆಗೆ ಬಹುತೇಕ ಮಂದಿ ಹೃದ್ರೋಗ ಸಮಸ್ಯೆಯಿಂದ ಬಳಲು ತ್ತಿರುತ್ತಾರೆ ಅಂತವರಿಗೆ ಮಖಾನ ಸೇವನೆ ಬಹಳ ಉತ್ತಮ ಆಹಾರ ಕ್ರಮವಾಗಲಿದೆ. ದೇಹದ ಕೊಲೆ ಸ್ಟ್ರಾಲ್ ಮಟ್ಟ ಕಡಿಮೆ ಮಾಡುವ ಜೊತೆಗೆ ಅನಗತ್ಯ ಬೊಜ್ಜಿನ ಸಮಸ್ಯೆ ನಿವಾರಣೆ ಮಾಡಿ ಹೃದ್ರೋಗ ಸಮಸ್ಯೆ ಬಾರದಂತೆ ಮೊದಲೇ ತಡೆಹಿಡಿಲು ಇದರ ಸೇವನೆಗೆ ಆದ್ಯತೆ ನೀಡಬೇಕು.
ಮೂಳೆಯ ಆರೋಗ್ಯ ವೃದ್ಧಿ:
ಮಖಾನ ಸೇವನೆ ಮಾಡುವುದರಿಂದ ಮೂಳೆಯ ಆರೋಗ್ಯ ಸುಧಾರಣೆ ಆಗಲಿದೆ. ಸಂಧಿ ನೋವು, ಕೀಲು ನೋವು ಇತ್ಯಾದಿ ಸಮಸ್ಯೆ ಗಳು ಬಾರದಂತೆ ತಡೆ ಹಿಡಿಯುವ ನೆಲೆಯಲ್ಲಿ ಕೂಡ ದೇಹಕ್ಕೆ ಅಗತ್ಯ ಆರೋಗ್ಯ ಪ್ರಯೋಜನೆಗಳು ಸಿಗಲಿದೆ. ಮಖಾನದಲ್ಲಿ ಇರುವ ಕ್ಯಾಲ್ಸಿಯಂ ಪ್ರಮಾಣ ಮೂಳೆ ಆರೋಗ್ಯ ವೃದ್ಧಿಗೆ ಬಹಳ ಸಹಕಾರಿ ಆಗಲಿದೆ.
ಸಮೃದ್ಧ ಪೋಷಕಾಂಶ:
ಮಖಾನ ಸೇವನೆ ಮಾಡುವುದರಿಂದ ದೇಹಕ್ಕೆ ಸಮೃದ್ಧವಾದ ಪೋಷ ಕಾಂಶ ಒದಗಿಸಿದಂತಾಗಲಿದೆ. ಮಖಾನದಲ್ಲಿ ಪ್ರೋಟಿನ್ , ಫೈಬರ್ , ಕಾರ್ಬೋ ಹೈಡ್ರೇಟ್, ಮೆಗ್ನೀಸಿಯಂ, ಕ್ಯಾಲ್ಸಿಯಂ ಹೇರಳವಾಗಿದ್ದು ದೇಹದ ಆರೋಗ್ಯ ವೃದ್ಧಿಗೆ ಇದರ ಸೇವನೆ ಬಹಳ ಒಳ್ಳೆಯದು.
ಸಕ್ಕರೆ ಮಟ್ಟ ನಿಯಂತ್ರಣ:
ದೇಹದ ತೂಕ ಏರಲು ಮತ್ತು ಸಕ್ಕರೆ ಕಾಯಿಲೆ ಇತರ ಆರೋಗ್ಯ ಸಮಸ್ಯೆ ನಿವಾರಣೆಗೆ ಮಖಾನ ಸೇವನೆ ಮಾಡಬೇಕು. ಅಧ್ಯಯನ ಒಂದರ ವರದಿ ಪ್ರಕಾರ ಮಖಾನವನ್ನು ಕಡಿಮೆ ಗ್ಲೈಸೆಮಿಕ್ ಸೂಚಿ ಯನ್ನು ಹೊಂದಿದ್ದು ದೇಹದಲ್ಲಿ ಸಕ್ಕರೆ ಮಟ್ಟ ಕಡಿಮೆ ಮಾಡಲು ಮಖಾ ನ ಬಹಳ ಪ್ರಧಾನ ಪಾತ್ರ ವಹಿಸಲಿದೆ ಎಂದು ತಿಳಿದುಬಂದಿದೆ. ಮಖಾ ನ ಕಡಿಮೆ ಕ್ಯಾಲೋರಿಗಳನ್ನು ಹೊಂದಿದ್ದು ತೂಕ ಇಳಿಸಿಕೊಳ್ಳಲು ಇದೊಂದು ಅತ್ಯುತ್ತಮ ಆಹಾರ ಎಂದರೂ ತಪ್ಪಾಗದು.
ಇದನ್ನು ಓದಿ: Health Tips: ಎಚ್ಚರ... ಎಚ್ಚರ! ಅಗತ್ಯಕ್ಕಿಂತ ಜಾಸ್ತಿ ಸಕ್ಕರೆ ಸೇವನೆ ಆರೋಗ್ಯಕ್ಕೆ ಈ ಸಮಸ್ಯೆ ತಂದೊಡ್ಡಬಹುದು
ಮಖಾನ ಹೇಗೆ ಸೇವಿಸಬೇಕು?
ಮಖಾನದಿಂದ ಅನೇಕ ಸಿಹಿ ಮತ್ತು ಖಾರದ ರೆಸಿಪಿ ತಯಾರು ಮಾಡಿ ಸೇವನೆ ಮಾಡಬಹುದು. ಕೀರ್, ಸಲಾಡ್, ಪ್ರೋಟಿನ್ ಬಾರ್‌ನಂತೆ ಸೇವನೆ ಮಾಡಿದರೆ ದೇಹಕ್ಕೆ ಅತೀ ಪೋಷಕಾಂಶ ಲಭ್ಯವಾಗಲಿದೆ. ಆದರೆ ನೀವು ಮಖಾನ ತಯಾರಿಸುವಾಗಲೇ ಅದಕ್ಕೆ ಅಧಿಕ ಮಸಾಲೆ, ಎಣ್ಣೆ ಇತ್ಯಾದಿ ಬಳಸಿದರೆ ಆರೋಗ್ಯದ ಮೇಲೆ ಅಡ್ಡ ಪರಿಣಾಮ ಬೀರಲೂಬಹುದು. ಹಾಗಾಗಿ ಆರೋಗ್ಯದ ಪ್ರಯೋಜನದ ಉದ್ದೇಶಕ್ಕಾಗಿ ಸೇವಿಸುವಾಗ ಅದನ್ನು ಹೇಗೆ ಸೇವಿಸಿದರೆ ಉತ್ತಮ ಎಂಬುದನ್ನು ಮೊದಲೇ ತಿಳಿದುಕೊಂಡು ಸೇವಿಸಿದರೆ ಈ ಎಲ್ಲ ಆರೋಗ್ಯ ಪ್ರಯೋಜನ ನೀವು ಪಡೆಯಬಹುದು.