ವಿದೇಶ ಫ್ಯಾಷನ್‌ ಲೋಕ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್‌ ಹೌಸ್‌ ಸಂಪಾದಕೀಯ

Weight Loss: ತೂಕ ಇಳಿಸೋಕೆ ಸುಲಭ ಮಾರ್ಗ! ಇಲ್ಲಿದೆ ತಜ್ಞರ ಸರಳವಾದ ಟಿಪ್ಸ್!

ತೂಕ ಇಳಿಸಲು ಇಲ್ಲಸಲ್ಲದ ಪ್ರಯತ್ನಗಳನ್ನು ಪ್ರತಿನಿತ್ಯ ಮಾಡುತ್ತಲೇ ಇರುತ್ತಾರೆ. ಕೆಲವರು ಜಿಮ್, ಡಯೆಟ್, ವರ್ಕೌಟ್ ಹೀಗೆ ಹಲವಾರು ಸರ್ಕಸ್ ಮಾಡುವ ಮೂಲಕ ತೂಕ ಇಳಿಸಲು ಪ್ರಯತ್ನಿಸುತ್ತಾರೆ. ಇನ್ನು ಕೆಲವರು ನೈಸರ್ಗಿಕವಾದ ಪರಿಹಾರಗಳ ಮೂಲಕ ಕೆಲವು ಟಿಪ್ಸ್ ಪಾಲಿಸುತ್ತಾರೆ. ಆದ್ರೆ, ತೂಕ ಇಳಿಸಲು ದಿನ ನಿತ್ಯದಲ್ಲಿ ಕೆಲವೊಂದು ಅಭ್ಯಾಸವನ್ನು ರೂಢಿ ಮಾಡಿಕೊಳ್ಳುವ ಮೂಲಕ ತೂಕ ಇಳಿಸಿಕೊಳ್ಳಬಹುದು ಎಂದು ತಜ್ಞರು ಸಲಹೆ ನೀಡಿದ್ದಾರೆ.

ತೂಕ ಇಳಿಸೋಕೆ ದಿನನಿತ್ಯದಲ್ಲಿ ಈ ಅಭ್ಯಾಸ ರೂಢಿಸಿಕೊಳ್ಳಿ!

Profile Pushpa Kumari Feb 27, 2025 5:00 AM

ಆಧುನಿಕ ಜೀವನ ಶೈಲಿಯಿಂದ ತೂಕ ಹೆಚ್ಚಳವಾಗುವುದು ಸಾಮಾನ್ಯ ಸಂಗತಿಯಾಗಿ ಬಿಟ್ಟಿದೆ. ಹಾಗಾಗಿ ಅನೇಕರು ಆರೋಗ್ಯಕರ ಜೀವನಕ್ಕಾಗಿ ತೂಕವನ್ನು(Weight Loss) ಕಡಿಮೆ ಮಾಡಿಕೊಳ್ಳುವ ಗುರಿಯನ್ನು ಹೊಂದಿದ್ದು‌ ತೂಕ ಇಳಿಸಲು ಇಲ್ಲಸಲ್ಲದ ಪ್ರಯತ್ನಗಳನ್ನು ಪ್ರತಿನಿತ್ಯ ಮಾಡುತ್ತಲೇ ಇರುತ್ತಾರೆ. ಕೆಲವರು ಜಿಮ್, ಡಯೆಟ್, ವರ್ಕೌಟ್ ಹೀಗೆ ಹಲವಾರು ಸರ್ಕಸ್ ಮಾಡುವ ಮೂಲಕ ತೂಕ ಇಳಿಸಲು ಪ್ರಯತ್ನಿಸುತ್ತಾರೆ. ಇನ್ನು ಕೆಲವರು ನೈಸರ್ಗಿಕವಾದ ಪರಿಹಾರಗಳ ಮೂಲಕ ಕೆಲವು ಟಿಪ್ಸ್​ ಪಾಲಿಸುತ್ತಾರೆ. ಆದ್ರೆ, ತೂಕ ಇಳಿಸಲು ದಿನ ನಿತ್ಯದಲ್ಲಿ ಕೆಲವೊಂದು ಅಭ್ಯಾಸವನ್ನು ರೂಢಿ ಮಾಡಿಕೊಳ್ಳುವ ಮೂಲಕ ತೂಕ ಇಳಿಸಿಕೊಳ್ಳ ಬಹುದು ಎಂದು ತಜ್ಞರು ಸಲಹೆ ನೀಡಿದ್ದಾರೆ.

ಸಮತೋಲಿತ ಪೌಷ್ಟಿಕ ಆಹಾರ: ತೂಕವನ್ನು ಕಳೆದುಕೊಳ್ಳಲು ಇಚ್ಚಿಸುವವರು ಸಮತೋಲಿತ ಮತ್ತು ಆರೋಗ್ಯಕರ ಆಹಾರವನ್ನು ಸೇವಿಸುವುದು ಬಹಳ ಮುಖ್ಯ. ಸಂಸ್ಕ ರಿಸದ ಹಣ್ಣುಗಳು, ತರಕಾರಿಗಳು, ಪ್ರೋಟೀನ್‌ಗಳು ಮಿತವಾದ ಧಾನ್ಯಗಳು , ಆರೋಗ್ಯಕರ ಕೊಬ್ಬುಗಳು ನಿಮಗೆ ಅಗತ್ಯವಿರುವಷ್ಟು ಮಾತ್ರ ತಿನ್ನಲು ಪ್ರಯತ್ನಿಸಿ. ಸಾಧ್ಯವಾದರೆ ಹೆಚ್ಚಿನ ಸಕ್ಕರೆಯನ್ನು ಸೇರಿಸಿದ ಯಾವುದೇ ಆಹಾರ ಸೇವಿಸಬೇಡಿ.

ನಿಯಮಿತ ವ್ಯಾಯಾಮ: ದಿನನಿತ್ಯದ ವ್ಯಾಯಾಮವನ್ನು ಮಾಡಿಕೊಳ್ಳುವ ಅಭ್ಯಾಸ ಮಾಡಿಕೊಳ್ಳಿ. ದಿನ ನಿತ್ಯ ವಾಕಿಂಗ್ , ನಿಯಮಿತ ವ್ಯಾಯಾಮ ಮಾಡಿ ಕೊಬ್ಬನ್ನು ಕಡಿಮೆ ಮಾಡಿಕೊಳ್ಳಬಹುದು‌‌. ಈ ದೈಹಿಕ ಚಟುವಟಿಕೆಯು ಚಯಾಪಚಯ ಕ್ರಿಯೆ ಹೆಚ್ಚಿಸಿ ನಿಯಮಿತವಾಗಿ ವ್ಯಾಯಾಮ ಮಾಡು ವುದರಿಂದ ದೈಹಿಕ ಸಾಮರ್ಥ್ಯವನ್ನು ಸುಧಾರಿಸಬಹುದು. ಆರೋಗ್ಯಕರ ತೂಕವನ್ನು ಕಾಪಾಡಿಕೊಳ್ಳಬಹುದು

ಗುಣಮಟ್ಟದ ನಿದ್ರೆ: ಆರೋಗ್ಯಕರ ತೂಕವನ್ನು ಕಾಪಾಡಿಕೊಳ್ಳಲು ಗುಣಮಟ್ಟದ ನಿದ್ರೆಯು ಬಹಳ ಮುಖ್ಯವಾಗಿದ್ದು ಸರಿಯಾದ ನಿದ್ದೆ ಮಾಡದೇ ಇದ್ದಲ್ಲಿ ಹಾರ್ಮೋನುಗಳ ಅಸಮತೋಲನಕ್ಕೆ ಕಾರಣವಾಗಬಹುದು, ಇದು ಹಸಿವನ್ನು ಹೆಚ್ಚಿಸುವ ಮೂಲಕ ತೂಕ ಹೆಚ್ಚಾಗಲು ಕಾರಣವಾಗುತ್ತದೆ. ಹಾಗಾಗಿ ಈ ಸಮಸ್ಯೆಗಳನ್ನು ತಪ್ಪಿಸಲು ನೀವು ಪ್ರತಿ ರಾತ್ರಿ ಸುಮಾರು 7-8 ಗಂಟೆಗಳ ಗುಣಮಟ್ಟದ ನಿದ್ರೆಯನ್ನು ಪಡೆಯಬೇಕು.

ಒತ್ತಡ ನಿರ್ವಹಣೆ: ದೀರ್ಘಕಾಲದ ಒತ್ತಡವು ನಿಮ್ಮ ಮೇಲೆ ತೂಕ ಹೆಚ್ಚಾಗುವ ಸಾಧ್ಯತೆ ಇದೆ. ಏಕೆಂದರೆ ಇದು ದೇಹದಲ್ಲಿ ಹೆಚ್ಚು ಕಾರ್ಟಿಸೋಲ್‌ಗೆ ಕಾರಣ ವಾಗುತ್ತದೆ. ಒತ್ತಡ ನಿರ್ವಹಣೆಗೆ ಧ್ಯಾನ, ವ್ಯಾಯಾಮಗಳು ಇತ್ಯಾದಿ ಒತ್ತಡವನ್ನು ಕಡಿಮೆ ಮಾಡುವ ಹವ್ಯಾಸಗಳಲ್ಲಿ ತೊಡಗಿಸಿ ಕೊಳ್ಳಿ.

ಕೊಬ್ಬು ಕರಗಿಸಲು ನೀರು ಅಗತ್ಯ: ತೂಕ ಇಳಿಸಲು ಸರಿಯಾದ ಪ್ರಮಾಣದಲ್ಲಿ ನೀರು ಕುಡಿಯುವುದು ಸಹ ಅಗತ್ಯವಾಗಿದೆ. ತಜ್ಞರ ಮಾಹಿತಿಯಂತೆ ದೇಹದಲ್ಲಿ ಸಂಗ್ರಹವಾದ ಕೊಬ್ಬನ್ನು ಕರಗಿಸಲು ನೀರು ಕೂಡ ಅತೀ ಅವಶ್ಯವಾಗಿದ್ದು ನಿರ್ಜಲೀಕರಣದಿಂದಾಗಿ ಕೊಬ್ಬು ಕರಗಿಸುವ ಪ್ರಕ್ರಿಯೆಯು ನಿಲ್ಲುತ್ತದೆ. ಹಾಗಾಗಿ ಹೆಚ್ಚು ನೀರನ್ನು ಸೇವಿಸುವುದರಿಂದ ಕೊಬ್ಬು ಕರಗಿಸಲು ಸಹಾಯಕ ವಾಗಲಿದೆ.

ಸಂಸ್ಕರಿಸಿದ ಆಹಾರ ತಪ್ಪಿಸಿ: ತೂಕ ಇಳಿಸಲು ಬಯಸುವವರು ಮೊದಲು ಹೊರಗಿನ ಆಹಾರ ತಿನ್ನುವುದನ್ನು ತಪ್ಪಿಸಿ. ಹೊರಗಿನ ಸಂಸ್ಕರಿಸಿದ ಆಹಾರದಲ್ಲಿ ಸಕ್ಕರೆ ಮತ್ತು ಉಪ್ಪಿನ ಅಂಶಗಳು ಅಧಿಕವಾಗಿರಲಿದ್ದು ಅನೇಕ ರೋಗಗಳ ಅಪಾಯವನ್ನು ಹೆಚ್ಚಿಸುತ್ತದೆ. ತೂಕ ಹೆಚ್ಚಳಕ್ಕೂ ಕಾರಣವಾಗು ವುದರಿಂದ ಈ ಆಹಾರಗಳ ಸೇವನೆಯಿಂದ ದೂರವಿರುವುದು ಉತ್ತಮ

ಇದನ್ನು ಓದಿ: Health Tips: ಡಯಾಬಿಟಿಸ್ ಇದ್ದವರು ಅಪ್ಪಿ ತಪ್ಪಿಯೂ ಈ ಹಣ್ಣುಗಳನ್ನು ಸೇವಿಸಬೇಡಿ!

ನಿಯಮಿತ ವೇಳಾಪಟ್ಟಿ ರಚಿಸಿ: ತಿನ್ನುವ ವೇಳಾಪಟ್ಟಿಯನ್ನು ರಚಿಸುವ ಮೂಲಕ‌ ನೀವು ತೂಕ‌ ಇಳಿಸಿ ಕೊಳ್ಳಬಹುದು. ಇದರಿಂದ ನೀವು ಅತಿಯಾಗಿ ತಿನ್ನುವುದನ್ನು ತಪ್ಪಿಸ ಬಹುದು‌.ಹಾಗೆಯೇ ನೀವು ಯಾವಾಗಲೂ ಒಂದೇ ಸಮಯದಲ್ಲಿ ತಿನ್ನುವಾಗ ನಿಮ್ಮ ರಕ್ತದಲ್ಲಿನ ಸಕ್ಕರೆಯ ಪ್ರಮಾಣವನ್ನು ನಿಯಂ ತ್ರಿಸಲು ಇದು ಸಹಾಯ ಮಾಡುತ್ತದೆ. ತೂಕ ಇಳಿಕೆಗೂ ಸಹಕಾರಿ ಯಾಗಲಿದೆ.