ನವದೆಹಲಿ,ಮೇ 23: ಬೇಸಿಗೆಯೂ (Summer Tips) ದಿನೇ ದಿನೇ ಭೀಕರಗೊಳ್ಳುತ್ತಿದೆ.. ಇದರ ಪರಿಣಾಮ ಹೀಟ್ ಸ್ಟ್ರೋಕ್, ನಿರ್ಜಲೀಕರಣದಂತ ಅನೇಕ ಆರೋಗ್ಯ ಸಮಸ್ಯೆಗಳು ಕಾಡುತ್ತವೆ. ಉಷ್ಣಾಂಶ ಹೆಚ್ಚಾದಾಗ ಆರೋಗ್ಯವಾಗಿರಲು ನಾವು ಸೇವಿಸುವಂತ ಆಹಾರ ಕೂಡ ಮುಖ್ಯವಾಗುತ್ತದೆ. ಪ್ರಮುಖವಾಗಿ ದೇಹವನ್ನು ತಂಪಾಗಿಸಲು ಹಣ್ಣಿನ ಸೇವನೆ ಬಹಳಷ್ಟು ಅಗತ್ಯ. ಆದರೆ ಹೆಚ್ಚಿನವರು ಫ್ರಿಡ್ಜ್‌ನಲ್ಲಿಟ್ಟ ತಣ್ಣಗಿನ ಹಣ್ಣುಗಳನ್ನು ಸವಿಯುತ್ತಾರೆ. ಬೇಸಿಗೆಯ ಈ ಸಂದರ್ಭದಲ್ಲಿ ತಣ್ಣಗಿನ ಹಣ್ಣುಗಳ ಸೇವನೆ ಎಷ್ಟು ಆರೋಗ್ಯಕಾರಿ? ಈ ಸಮಯದಲ್ಲಿ ಯಾವ ಹಣ್ಣು ಸೇವನೆ ಮಾಡಬೇಕು?ಎಂದು ತಜ್ಞರು ಸಲಹೆ ನೀಡಿದ್ದಾರೆ.
ತೀವ್ರವಾದ ಶಾಖದ ಸಮಯದಲ್ಲಿ ತಣ್ಣಗಾದ ಹಣ್ಣಿನ ಸೇವನೆಯೂ ಎರಡು ರೀತಿಯ ಆರೋಗ್ಯ ಲಾಭ ನೀಡುತ್ತವೆ. ಮೊದಲನೆಯದಾಗಿ, ಅವು ಬಹಳಷ್ಟು ತಂಪಾಗಿರುತ್ತವೆ. ಎರಡನೆಯದಾಗಿ, ಅನೇಕ ಹಣ್ಣುಗಳು ನೈಸರ್ಗಿಕವಾಗಿ ಹೆಚ್ಚಿನ ಪ್ರಮಾಣದ ನೀರನ್ನು ಹೊಂದಿರುತ್ತವೆ. ಅತೀಯಾದ ಬಿಸಿಲಿನಲ್ಲಿ ದೇಹವು ತಾಪಮಾನವನ್ನು ನಿಯಂತ್ರಿಸಲು ಹೆಚ್ಚು ಶ್ರಮಿಸುತ್ತದೆ. ಬೆವರುವ ಪ್ರಮಾಣ ಹೆಚ್ಚಾಗಿ ನೀರಿನ ನಷ್ಟವು ವೇಗ ವಾಗುತ್ತದೆ. ಹಾಗಾಗಿ ಹೆಚ್ಚಿನ ನೀರಿನ ಅಂಶವಿರುವ ಹಣ್ಣುಗಳು ದೇಹವನ್ನು ತಂಪಾಗಿ ಇರಿಸುತ್ತವೆ.
ಬೇಸಿಗೆಯಲ್ಲಿ ಯಾವ ಹಣ್ಣು ಉತ್ತಮ?
ಕಲ್ಲಂಗಡಿ:
ಭಾರತದಲ್ಲಿ ಅತ್ಯಂತ ಜನಪ್ರಿಯ ಬೇಸಿಗೆ ಹಣ್ಣುಗಳಲ್ಲಿ ಕಲ್ಲಂಗಡಿ ಒಂದಾಗಿದೆ. ಇದು ಹೆಚ್ಚಿನ ಪ್ರಮಾಣದ ನೀರನ್ನು ಹೊಂದಿದ್ದು ದೇಹಕ್ಕೆ ಶಕ್ತಿಯನ್ನು ಕೂಡ ಒದಗಿಸುತ್ತದೆ. ಹಾಗಾಗಿ ಬೇಸಿಗೆಯಲ್ಲಿ ಇದಕ್ಕೆ ಆದ್ಯತೆ ನೀಡಿ.
Health Tips: ವ್ಯಾಯಾಮಕ್ಕೂ ಮುನ್ನ ಈ ಹಣ್ಣುಗಳ ಸೇವನೆ ಮಾಡಿದರೆ ಆರೋಗ್ಯಕ್ಕೆ ಉತ್ತಮ!
ಕಿತ್ತಳೆ ಮತ್ತು ಸಿಹಿ ನಿಂಬೆಹಣ್ಣು:
ಸಿಟ್ರಸ್ ಹಣ್ಣುಗಳು ಹೆಚ್ಚಿನ ಪ್ರಮಾಣದ ನೀರನ್ನು ಒದಗಿಸುತ್ತವೆ. ತಿನ್ನುವ ಮೊದಲು ಅವುಗಳನ್ನು ಸ್ವಲ್ಪ ತಣ್ಣಗಾಗಿಸುವುದರಿಂದ ಬಿಸಿ ವಾತಾವರಣದಲ್ಲಿ ಅವು ಹೆಚ್ಚು ಹಿತಕರ ಅನಿಸುತ್ತದೆ.
ಕರ್ಬೂಜ:
ಈ ಹಣ್ಣು ಜೀರ್ಣಿಸಿಕೊಳ್ಳಲು ಅತ್ಯಂತ ಸುಲಭವಾಗಿದ್ದು, ದೇಹಕ್ಕೆ ನೈಸರ್ಗಿಕ ಸಿಹಿಯನ್ನು ಒದಗಿಸುತ್ತದೆ.
ದ್ರಾಕ್ಷಿ ಹಾಗೂ ಪಪ್ಪಾಯಿ:
ಇವು ದೇಹದ ಹೊಟ್ಟೆಯ ಆರೋಗ್ಯವನ್ನು ಕಾಪಡಲಿದ್ದು ಬೇಸಿಗೆಯಲ್ಲಿ ದೇಹ ತಂಪಾಗಿ ಇರಿಸು ವಂತೆ ಮಾಡುತ್ತದೆ. ಫ್ರಿಡ್ಜ್‌ನಲ್ಲಿಟ್ಟ ಹಣ್ಣುಗಳನ್ನು ತಿಂದ ತಕ್ಷಣ ಅನಾರೋಗ್ಯಕ್ಕೆ ತುತ್ತಾಗುತ್ತಾರೆ ಎಂದೂ ಕೆಲವರು ಹೇಳಿದರೂ ಆರೋಗ್ಯವಂತ ವ್ಯಕ್ತಿಯಲ್ಲಿ ಈ ಸಮಸ್ಯೆ ಕಾಡುವುದಿಲ್ಲ. ಆದಾಗ್ಯೂ, ಸೂಕ್ಷ್ಮ ಹಲ್ಲುಗಳು, ಗಂಟಲಿನ ಕಿರಿಕಿರಿ ಇದ್ದವರಿಗೆ ಶೀತ,ಜ್ವರದಂತ ಲಕ್ಷಣಗಳು ಕಂಡು ಬರಬಹುದು. ಆದ್ದರಿಂದ ಫ್ರೀಜರ್‌ನಲ್ಲಿಟ್ಟ ಅತೀಯಾದ ಕೋಲ್ಡ್ ಹಣ್ಣುಗಳಿಗಿಂತ, ಸಾಮಾನ್ಯವಾಗಿ ತಂಪು ಮಾಡಿದ ಹಣ್ಣುಗಳ ಸೇವನೆ ಮಾಡಿ.